Monday, December 23, 2024

ಲಾರಿ ಚಾಲಕನಿಗೆ ಬೆದರಿಕೆ ಹಾಕಿದ್ದ ಫಾರೆಸ್ಟ್ ಗಾರ್ಡ್ ಅಮಾನತು.!

ಚಾಮರಾಜನಗರ: ಲಾರಿ ಚಾಲಕನೋರ್ವನಿಗೆ ಫಾರೆಸ್ಟ್​ ಗಾರ್ಡ್ ಬೆದರಿಕೆ ಹಾಕಿದ್ದ ಬೆನ್ನಲ್ಲೆಯಲ್ಲಿ ಗಾರ್ಡ್​ನನ್ನ​ ಅಮಾನತು ಮಾಡಿ ಆದೇಶಿಸಲಾಗಿದೆ.

ಜಿಲ್ಲೆಯ ಪಾಲಾರ್ ಗಡಿಯಲ್ಲಿನ ಅರಣ್ಯ ಚೆಕ್ ಪೋಸ್ಟ್​​ನಲ್ಲಿ ತಪಾಸಣೆ ಮಾಡುವಾಗ, ಫಾರೆಸ್ಟ್ ಗಾರ್ಡ್​ ಗನ್ ಕೊಡು, ಇವನನ್ನು ಸುಟ್ಟಾಕುತ್ತೇನೆ ಎಂದು ಲಾರಿ ಚಾಲಕನಿಗೆ ಆವಾಜ್ ಹಾಕಿದ್ದ. ಅರಣ್ಯ ಇಲಾಖೆ ನೌಕರ ಕುಡಿದ ಮತ್ತಿನಲ್ಲಿ ಹಣ ಕೊಡುವಂತೆ ಲಾರಿ ಚಾಲಕನಿಗೆ ಧಮ್ಕಿ ಹಾಕಿದ್ದ ಎನ್ನಲಾಗಿದೆ.

ಈಗ ಫಾರೆಸ್ಟ್ ಗಾರ್ಡ್ ನ ಅಮಾನತು ಮಾಡಿದ ಮಲೈಮಹದೇಶ್ವರ ವನ್ಯಜೀವಿ ಡಿಸಿಎಫ್ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ತಮಿಳುನಾಡು ಗಡಿಯ ಪಾಲಾರ್ ಚೆಕ್ ಪೋಸ್ಟ್​​ಗೆ ಮೋಹನ್ ಕುಮಾರ್​​ನನ್ನು ನಿಯೋಜಿಸಲಾಗಿತ್ತು. ಈ ವೇಳೆ, ಮದ್ಯದ ಮತ್ತಿನಲ್ಲಿ ಲಾರಿ ಚಾಲಕನಿಗೆ ಹಣ ಕೊಡುವಂತೆ ಧಮ್ಕಿ ಹಾಕಿದ್ದಲ್ಲದೇ ಬಂದೂಕಿನಿಂದ ಸುಟ್ಟು ಹಾಕುತ್ತೇನೆಂದು ಬೆದರಿಕೆ ಒಡ್ಡಿದ್ದ ಎಂಬ ಆರೋಪ ಕೇಳಿಬಂದಿತ್ತು.

ಫಾರೆಸ್ಟ್ ಗಾರ್ಡ್ ಅಧಿಕಾರಿಯ ಬೆದರಿಕೆ ಮಾತುಗಳನ್ನು ಚಾಲಕ ವಿಡಿಯೋ ಮಾಡಿದ್ದ, ಈ ಕುರಿತು ನಮ್ಮ ಪವರ್ ಟಿವಿಯಲ್ಲಿ ವರದಿ‌ ಮಾಡಲಾಗಿತ್ತು. ಕೂಡಲೇ ಎಚ್ಚೆತ್ತ ಡಿಸಿಎಫ್, ಮೋಹನ್​​ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಮದ್ಯ ಸೇವಿಸಿದ್ದು, ದೃಢಪಟ್ಟಿದ್ದರಿಂದ ಅಮಾನತು ಮಾಡಿ ಡಿಸಿಎಫ್ ತನಿಖೆಗೆ ಆದೇಶ ನೀಡಿದ್ದಾರೆ.

RELATED ARTICLES

Related Articles

TRENDING ARTICLES