ಬೆಂಗಳೂರು : ರಾಜ್ಯಕ್ಕೆ ಅಮಿತ್ ಶಾ ಬಂದು ಹೋದ ಬಳಿಕ ಸಿಎಂ ಬೊಮ್ಮಾಯಿಯವರು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿರಲಿಲ್ಲ. ಅಮಿತ್ ಶಾ ಬೊಮ್ಮಾಯಿಗೆ ಕಠಿಣ ನೀತಿ ತೆಗೆದುಕೊಂಡು ಆಡಳಿತಕ್ಕೆ ಮತ್ತಷ್ಟು ಚುರುಕು ಮುಟ್ಟಿಸುವಂತೆ ಹೇಳಿದ್ರು. ಸಿಎಂಗೆ ಅಮಿತ್ ಶಾ ಮಾತಿಗೆ ಸಿಕ್ಕಿದ್ದು ಕೇವಲ 10 ನಿಮಿಷ ಮಾತ್ರ. ಆದ್ರೆ, ಬಿಎಸ್‌ವೈ ಜೊತೆ 20 ನಿಮಿಷಕ್ಕೂ ಹೆಚ್ಚು ಕಾಲ ಅಮಿತ್ ಶಾ ಚರ್ಚಿಸಿದ್ರು.
ಇದಾದ ಬಳಿಕ ದಿಢೀರ್ ಅಂತ ಬಿಎಸ್‌ವೈ ಮನೆಗೆ ಭೇಟಿ ನೀಡಿದ್ರು. 25 ನಿಮಿಷಗಳ ಕಾಲ ಚರ್ಚೆ ನಡೆಸಿದ ಉಭಯ ನಾಯಕರು, ರಾಜ್ಯದ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಬಿಜೆಪಿ ಕಾರ್ಯಕರ್ತರೇ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದೇ ಕಾರಣಕ್ಕೆ ಜನೋತ್ಸವ ರ್ಯಾಲಿ ರದ್ದಾಗಿತ್ತು. ಅದನ್ನು ಈಗ ಮರು ಆಯೋಜಿಸಲು ಪ್ಲ್ಯಾನ್ ಮಾಡಲಾಗಿದ್ದು, ಇದೇ ತಿಂಗಳ 28ಕ್ಕೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ರ್ಯಾಲಿ ನಡೆಯಲಿದೆ. ಈ ಬಗ್ಗೆ ಬಿಎಸ್‌ವೈ ಅಭಿಪ್ರಾಯವನ್ನು ಸಿಎಂ ಪಡೆದಿದ್ದಾರೆ.
ಪಕ್ಷ ಸಂಘಟನೆ ಆಗಸ್ಟ್ 16 ಬಳಿಕ ಪಕ್ಷ ಸಂಘಟನೆಗೆ ರ್ಯಾಲಿ ಮಾಡುವ ಬಗ್ಗೆ ಚರ್ಚೆ ನಡೆಸಲಾಯ್ತು ಅಂತ ಹೇಳಲಾಗುತ್ತಿದೆ. ಆದ್ರೆ, ಜೊತೆಗೆ ಸಚಿವ ಆರ್.ಅಶೋಕ್, ಆರಗ ಜ್ಞಾನೇಂದ್ರ ಇದ್ರೂ ಅವರನ್ನ ಹೊರಗೆ ಕಳುಹಿಸಿ ಬಿಎಸ್ ವೈ – ಸಿಎಂ ಬೊಮ್ಮಾಯಿ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಪದೇ ಪದೇ ಸಿಎಂ ಬದಲಾವಣೆ ಚರ್ಚೆ ಅಗುತ್ತಿರೋದಕ್ಕೆ ಬಿಎಸ್‌ವೈ ಬಳಿ ಅಳಲನ್ನು ತೋಡಿಕೊಂಡಿದ್ದಾರೆ. ಇದನ್ನು ನಿಲ್ಲಿಸಲು ಇರೋ ಮಾರ್ಗೋಪಾಯದ ಬಗ್ಗೆ ಬಿಎಸ್‌ವೈ ಅಭಿಪ್ರಾಯ ಕೇಳಿದ್ದಾರೆ. ಹಾಗೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟಸುವ ಬಗ್ಗೆ ಬಿಎಸ್‌ವೈ ಅಭಿಪ್ರಾಯ ಪಡೆದಿದ್ದಾರೆ ಎನ್ನಲಾಗಿದೆ. ಹಾಗೇ ಆಗಸ್ಟ್ 16 ಬಳಿಕ ಸಂಪುಟ ವಿಸ್ತರಣೆ ಸಂಬಂಧ ಸಿಎಂ ದೆಹಲಿಗೆ ಹೋಗಲಿದ್ದಾರೆ. ಹೀಗಾಗಿ ಸಂಪುಟದ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ . ಒಂದಿಷ್ಟು ಹೆಸರನ್ನು ಬಿಎಸ್‌ವೈ ಸೂಚಿಸಿದ್ದಾರೆ ಎನ್ನಲಾಗ್ತಿದೆ.
ಒಟ್ಟಿನಲ್ಲಿ ಬಿಎಸ್‌ವೈ- ಅಮಿತ್ ಶಾ ಭೇಟಿ ಬೆನ್ನಲ್ಲೇ ತನ್ನ ರಾಜಕೀಯ ಉತ್ಸಾಹ ಕುಂದದ ಬಗ್ಗೆ ಸಂದೇಶ ರವಾನಿಸಿದ್ರು. ಇದೀಗ ಸಿಎಂ ಗಾಧಿಯಿಂದ ಇಳಿದ ಬಳಿಕವು ಬಿಎಸ್‌ವೈ ಅನಿವಾರ್ಯ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ರೂಪೇಶ್ ಬೈಂದೂರು ಪವರ್ ಟಿವಿ