Monday, December 23, 2024

ಟ್ವೀಟ್ ಮಾಡಿ ಮಹುವಾ ಮೊಯಿತ್ರಾ ಪ್ರತಿಕ್ರಿಯೆ

ಸಂಸತ್​​ನಲ್ಲಿ ಸೋಮವಾರ ಬೆಲೆ ಏರಿಕೆ ಚರ್ಚೆ ನಡೆಯುತ್ತಿದ್ದಾಗ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ತಮ್ಮ ಬಳಿ ಇದ್ದ ದುಬಾರಿ ಬೆಲೆಯ ಲೂಯಿಸ್ ವಿಟಾನ್ ಬ್ಯಾಗ್ ಅಡಗಿಸುತ್ತಿರುವುದು ಎಂಬ ವಿಡಿಯೊ ವೈರಲ್ ಆಗಿದೆ. ಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಕಕೋಲಿ ಘೋಷ್ ದಸ್ತಿದಾರ್ ಮಾತನಾಡುತ್ತಿರುವಾಗ ಪಕ್ಕದಲ್ಲೇ ಮೊಯಿತ್ರಾ ಕುಳಿತಿರುವುದು ಕಾಣುತ್ತದೆ.

ದಸ್ತಿದಾರ್ ಮೆಹಂಗಾಯಿ ಎಂದು ಹೇಳುತ್ತಿದ್ದಾಗ ಮೊಯಿತ್ರಾ ತಮ್ಮ ಬಳಿ ಇದ್ದ ಬ್ಯಾಗ್​​ನ್ನು ನೆಲದಲ್ಲಿ ಇರಿಸಿದ್ದಾರೆ. ತನ್ನ ಬ್ಯಾಗ್ ಬಗ್ಗೆ ಟ್ವೀಟಿಗರು ಟ್ವೀಟ್ ದಾಳಿ ನಡೆಸುತ್ತಿದ್ದಂತೆ ಮೊಯಿತ್ರಾ ಪ್ರತಿಕ್ರಿಯೆ ನೀಡಿದ್ದು, ವಿವಿಧ ಸಂದರ್ಭಗಳಲ್ಲಿ ಆಕೆ ಸಂಸತ್ ನಲ್ಲಿ ಅದೇ ಲೂಯಿಸ್ ವಿಟ್ಟಾನ್ ಬ್ಯಾಗ್ ತೆಗೆದುಕೊಂಡು ಬಂದಿರುವ ಫೋಟೊಗಳನ್ನು ಟ್ವೀಟ್ ಮಾಡಿದ್ದಾರೆ.

2019ರಿಂದ ಜೋಲೇವಾಲಾ ಫಕೀರ್. ಜೋಲಾ ಲೇಕೆ ಆಯೇ ಥೇ, ಜೋಲಾ ಲೇಕೆ ಚಲ್ ಪಡೇಂಗೇ ಎಂದು ಬರೆದುಕೊಂಡಿದ್ದಾರೆ.  ಅಂದ್ರೆ, 2019ರಿಂದ ಜೋಳಿಗೆ ಹಾಕಿದ ಫಕೀರ, ಜೋಳಿಗೆ ಹಾಕಿ ಕೊಂಡು ಬಂದಿದ್ದೆ, ಜೋಳಿಗೆ ಹಾಕಿಯೇ ಹೋಗುವೆ ಎಂದು ಈ ಫೋಟೊಗೆ ಶೀರ್ಷಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES