ಬೆಂಗಳೂರು : ಪಿಎಸ್‌ಐ ನೇಮಕಾತಿ ಹಗರಣ ಹಲವು ನಾಯಕರಿಗೆ ನಿದ್ದೆ ಕೆಡಿಸಿದೆ. ಯಾವಾಗ ಎಡಿಜಿಪಿ ಅಮೃತ್ ಪಾಲ್ ಬಂಧನವಾಗ್ತಿದ್ದಂತೆ ಇಡೀ ಪ್ರಕರಣ ರಾಜಕೀಯದತ್ತ ತಿರುಗಿದೆ. ಇದನ್ನೇ ಪ್ರಬಲ ಅಸ್ತ್ರವಾಗಿ ಬಳಸಿಕೊಂಡಿರೋ ಕಾಂಗ್ರೆಸ್, ಬಿಜೆಪಿ ನಾಯಕರ ಮೇಲೆ ಗಂಭೀರ ಅರೋಪ ಮಾಡಲು ಆರಂಭಿಸಿದ್ದಾರೆ.. ಇತ್ತ ಕಾಂಗ್ರೆಸ್ ನಾಯಕರ ಅರೋಪಕ್ಕೆ ಕೇಸರಿ ಬ್ರಿಗೇಡ್ ಕೆಂಡಾ ಮಂಡಲವಾಗಿದ್ದು, ಕೈ ನಾಯಕರ ವಿರುದ್ಧ ಗುಡುಗಿದ್ದಾರೆ.
ಇನ್ನು ಸಿದ್ದರಾಮೋತ್ಸವದ ಬಗ್ಗೆ ಕಿಟುಕಿರೋ ಕಟೀಲು ಸಿದ್ದರಾಮಯ್ಯ ಇನ್ನಷ್ಟು ಇಂತಹ ಉತ್ಸವ ಮಾಡಲಿ.. ನಾಲ್ಕೈದು ಲಕ್ಷ ಜನರನ್ನು ಸೇರಿಸಲಿ..ಅದಕ್ಕೆ ಬೇಕಾದ ಎಲ್ಲಾ ಸಹಕಾರವನ್ನ ನಾವು ಅವರಿಗೆ ನೀಡ್ತೇವೆ ಎಂದಿದ್ದಾರೆ ಬಿಜೆಪಿ ನಾಯಕರು.
ಕಾಂಗ್ರೆಸ್ ಪಕ್ಷದ ಹೊರತಾಗಿ ಈ ಕಾರ್ಯಕ್ರಮ ಆಯೋಜನೆಯ ಸಿದ್ಧತೆ ನಡೆದಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಹುಲ್ ಗಾಂಧಿ ಈ ಸಮಾವೇಶದಲ್ಲಿ ಭಾಗವಹಿಸಲು ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ರು. ಆದ್ರೆ, ಕಾಂಗ್ರೆಸ್ ಪಕ್ಷದ ಅಡಿಯಲ್ಲಿ ಸಿದ್ದರಾಮಯ್ಯರ ಸಮಾವೇಶ ಆಯೋಜನೆ ಆಗುತ್ತೆ ಅಂತ ಸಿದ್ದು ಬೆಂಬಲಿಗರಿಗೆ ಶಾಕ್ ನೀಡಿದ್ದಾರೆ. ಈ ಮೂಲಕ ಸಿದ್ದು ಸಮಾವೇಶದ ಮೈಲೇಜ್‌ನಲ್ಲಿ ಕ್ರೆಡಿಟ್ ಪಡೆಯುವ ಪ್ಲಾನ್ ರೂಪಿಸಿದ್ದಾರೆ.
ಪಿಎಸ್‌ಐ ಅಕ್ರಮ ವಿಚಾರ ಇಟ್ಕೊಂಡು ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾರುತ್ತಿದ್ದಾರೆ. ಮತ್ತೊಂದೆಡೆ, ಸಿದ್ದರಾಮೋತ್ಸವ ವಿಚಾರ ಇಟ್ಕೊಂಡು ಬಿಜೆಪಿ ಕಾಲೆಳೆಯುತ್ತಿದೆ. ಇದೆಲ್ಲದ್ರ ಮಧ್ಯೆ, ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವಿನ ಸಮರವನ್ನು ಒಂದೇ ವೇದಿಕೆಗೆ ತಂದು ನಿಲ್ಲಿಸುವಂತ ಕೆಲಸ ಮಾಡಿದೆ ಕಾಂಗ್ರೆಸ್ ಹೈಕಮಾಂಡ್.
ರಾಘವೇಂದ್ರ ವಿಎನ್ ಜೊತೆ ಬಸವರಾಜ್ ಚರಂತಿಮಠ್ ಪವರ್ ಟಿವಿ