Tuesday, June 18, 2024

ಕ್ರೇಜಿ ವೇದಿಕೆಯ ಟೈಗರ್ ಟಾಕಿಸ್​ನಲ್ಲಿ ಲಂಕಾಸುರ

ಟೈಗರ್ ಟಾಕಿಸ್​ನ ಚೊಚ್ಚಲ ಚಿತ್ರ ಲಂಕಾಸುರ ಟೀಸರ್ ಲಾಂಚ್ ಇವೆಂಟ್, ಕ್ರೇಜಿ ಸಿನಿಸಂಜೆಗೆ ಸಾಕ್ಷಿ ಆಯ್ತು. ಯೆಸ್.. ​ಹಿರಿಯ ಮತ್ತು ಕಿರಿಯ ಕಲಾವಿದರ ಸಮಾಗಮದಿಂದ ರಂಗೇರಿದ ವೇದಿಕೆಯಲ್ಲಿ ಯಂಗ್ ಟೈಗರ್ ಘರ್ಜನೆಯ ಜೊತೆ ಅವಿಸ್ಮರಣೀಯ ನೆನಪುಗಳ ಬುತ್ತಿ ಬಿಚ್ಚಿಕೊಳ್ತು. ಕ್ರೇಜಿಸ್ಟಾರ್ ಹೇಳಿದ್ದೇನು..? ವಿನೋದ್ ಪ್ರಭಾಕರ್​ಗೆ ಕುಚಿಕುಗಳು ಸಾಥ್ ನೀಡಿದ್ಹೇಗೆ ಅನ್ನೋದ್ರ ಕಂಪ್ಲೀಟ್ ರಿಪೋರ್ಟ್​ ನಿಮ್ಮ ಮುಂದೆ.

ಕ್ರೇಜಿ ವೇದಿಕೆಯ ಟೈಗರ್ ಟಾಕಿಸ್​ನಲ್ಲಿ ಲಂಕಾಸುರ

ಹಿರಿಯ & ಕಿರಿಯ ಕಲಾವಿದರ ಮಹಾ ಸಂಗಮ..!

ಯಂಗ್ ಟೈಗರ್​ಗೆ ಕ್ರೇಜಿ ದಿಲ್ ಕೊಟ್ಟ ಟಿಪ್ಸ್ ಏನು..?

ವಿನೋದ್ ಜೊತೆ ಅಭಿ, ಧರ್ಮ & ಯಶಸ್ ಸೂರ್ಯ

ಇದು ರೀಸೆಂಟ್ ಆಗಿ ಕ್ರೇಜಿಸ್ಟಾರ್ ರವಿಚಂದ್ರನ್ ಲಾಂಚ್ ಮಾಡಿದ ಲಂಕಾಸುರ ಚಿತ್ರದ ಟೀಸರ್ ಝಲಕ್. ಔಟ್ ಅಂಡ್ ಔಟ್ ಌಕ್ಷನ್ ಎಂಟರ್​ಟೈನರ್ ಆಗಿರೋ ಈ ಚಿತ್ರ, ಅಂಡರ್​ವರ್ಲ್ಡ್​ನ ರಕ್ತಸಿಕ್ತ ಕಥೆಯನ್ನ ಹೇಳಲಿದೆ. ಯಂಗ್ ಟೈಗರ್ ವಿನೋದ್ ಪ್ರಭಾಕರ್ ನಾಯಕನಟನಾಗಿ ಘರ್ಜಿಸ್ತಿದ್ದು, ಲೂಸ್​ಮಾದ ಯೋಗಿ ಕೂಡ ಪ್ರಧಾನ ಪಾತ್ರದಲ್ಲಿ ಕಾಣಸಿಗಲಿದ್ದಾರೆ.

ಕರುನಾಡ ಕನಸುಗಾರ ರವಿಮಾಮನ ಗರಡಿಯಲ್ಲಿ ಪಳಗಿರೋ ಪ್ರಮೋದ್ ಅನ್ನೋ ಪ್ರತಿಭೆ ಲಂಕಾಸುರನಿಗೆ ಌಕ್ಷನ್ ಕಟ್ ಹೇಳಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾ ಟೈಗರ್ ಟಾಕಿಸ್​ ಬ್ಯಾನರ್​​ನಡಿ ತಯಾರಾಗ್ತಿರೋ ಮೊದಲ ಸಿನಿಮಾ. ನಟ ವಿನೋದ್ ಪ್ರಭಾಕರ್​​ ಹಾಗೂ ಅವ್ರ ಪತ್ನಿ ನಿಶಾ ವಿನೋದ್ ಪ್ರಭಾಕರ್ ಸಿನಿಮಾ ನಿರ್ಮಾಣಕ್ಕೆ ಕಾಲಿಟ್ಟಿದ್ದು, ತಂದೆ ಟೈಗರ್ ಪ್ರಭಾಕರ್ ಹೆಸರಲ್ಲೇ ಟೈಗರ್ ಟಾಕಿಸ್ ಬ್ಯಾನರ್​ನ ತೆರೆದಿದ್ದಾರೆ.

ಖಾಸಗಿ ಹೋಟೆಲ್​ನಲ್ಲಿ ನಡೆದ ಟೀಸರ್ ಲಾಂಚ್ ಇವೆಂಟ್​ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಬಂದು ಟೀಸರ್ ಲಾಂಚ್ ಮಾಡಿ, ಯಂಗ್ ಟೈಗರ್​ಗೆ ಶುಭ ಹಾರೈಸಿದ್ರು. ವಿನೋದ್ ಮೊದಲ ಸಿನಿಮಾ ದಿಲ್​ಗೆ ಕ್ಲಾಪ್ ಮಾಡಿದ್ದ ರವಿಚಂದ್ರನ್, ಈ ದಿಲ್ ಮಾಡದೆ ಬೇರಾರು ಮಾಡಬೇಕು ಎಂದ್ರು. ಅಲ್ಲದೆ, ನಿರ್ಮಾಪಕರಾಗ್ತಿರೋ ದಂಪತಿಗೆ ಒಂದಷ್ಟು ಟಿಪ್ಸ್ ಕೂಡ ಕೊಟ್ರು.

ಹಿರಿಯ ನಟ ಉಮೇಶ್, ದೇವರಾಜ್, ರವಿಶಂಕರ್, ರವಿಚಂದ್ರನ್, ಧರ್ಮ ಕೀರ್ತಿರಾಜ್, ಯಶಸ್ ಸೂರ್ಯ, ಅಭಿಷೇಕ್ ಅಂಬರೀಶ್, ಯತೀಶ್ ರಾಕ್​ಲೈನ್ ಹೀಗೆ ಹಿರಿಯ ಹಾಗೂ ಕಿರಿಯ ಕಲಾವಿದರ ಸಮಾಗಮಕ್ಕೆ ಸಾಕ್ಷಿ ಆಯ್ತು ಲಂಕಾಸುರ ವೇದಿಕೆ. ಅಲ್ಲದೆ ನಾಯಕಿಯರಾದ ಪಾರ್ವತಿ ಅರುಣ್ ಹಾಗೂ ಆದ್ಯಪ್ರಿಯಾ ವೇದಿಕೆಯಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆದ್ರು.

ಸಿನಿಮಾ ಡೈಲಾಗ್​ನಿಂದ ಉಮೇಶ್ ಅವ್ರು ಹಾಸ್ಯದ ರಸದೌತಣ ಉಣಬಿಡಿಸಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವ್ರ ಮೊಗದಲ್ಲಿ ನಗು ತಂದಿತು.

ವೇದಿಕೆಯಲ್ಲಿ ಲಂಕಾಸುರ ಮಾಸ್ ಟೀಸರ್​ನ ಗುಣಗಾನದ ಜೊತೆ ಟೈಗರ್ ಪ್ರಭಾಕರ್​ನ ಎಲ್ಲರೂ ನೆನೆದರು. ಟೆಕ್ನಿಕಲಿ ಸಖತ್ ಸೌಂಡ್ ಮಾಡ್ತಿರೋ ಲಂಕಾಸುರ, ಯಂಗ್ ಟೈಗರ್ ಸಿನಿಕರಿಯರ್​ಗೆ ಬಿಗ್ ಟ್ವಿಸ್ಟ್ ಕೊಡೋ ಮನ್ಸೂಚನೆ ನೀಡಿದೆ. ತಂದೆಯಂತೆ ಸಿಕ್ಕಾಪಟ್ಟೆ ಅವಮಾನ, ಅಪಮಾನಗಳನ್ನು ಎದುರಿಸಿ ದೊಡ್ಡ ಮಟ್ಟಕ್ಕೆ ಬೆಳೆದಿರೋ ವಿನೋದ್​ರ ಟೈಗರ್ ಟಾಕಿಸ್ ಕನ್ನಡ ಚಿತ್ರರಂಗದ ಪ್ರತಿಷ್ಠಿತ ಬ್ಯಾನರ್ ಆಗಿ ಬೆಳೆಯಲಿ ಅನ್ನೋದು ನಮ್ಮೆಲ್ಲರ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES