Monday, December 23, 2024

RSS ರಾಜಕೀಯ ಪಕ್ಷವಲ್ಲ : ಸಚಿವ ಕಾರಜೋಳ

ವಿಜಯಪುರ : ಆರ್ ಎಸ್ ಎಸ್ ರಾಜಕೀಯ ಪಕ್ಷವಲ್ಲ. ಅದೊಂದು ಸ್ವಯಂ ಸೇವಕರ ಪಕ್ಷ ಎಂದು ಸಿದ್ದರಾಮಯ್ಯ ವಿರುದ್ದ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.

ರೋಹಿತ್ ಚಕ್ರತೀರ್ಥ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಎಂ ಪಠ್ಯ ಪರಿಷ್ಕರಣಾ ಸಮಿತಿ ರದ್ದು ಮಾಡಿದ್ದಾರೆ. ಯಾವುದನ್ನು ಪರಿಷ್ಕರಣೆ ಮಾಡಬೇಕು ಅದನ್ನು ಮಾಡ್ತಾರೆ.
ತಜ್ಞರ, ಶಿಕ್ಷಣ ಕ್ಷೇತ್ರದಲ್ಲಿರೋರು ಪರಿಶೀಲನೆ ಮಾಡ್ತಾರೆ ಎಂದರು.

ಇನ್ನು ಇದೇ ವೇಳೆ ಕಾಂಗ್ರೆಸ್ ರಾಜ್ಯಸಭಾ ಎಲೆಕ್ಷನ್​​ಗೆ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್‌ ಅಲಿ ಖಾನ್‌ ಹಾಕಲು ಕಾರಣ ಕಾಂಗ್ರೆಸ್ ಗೆಲ್ತೀವಿ ಅಂತ ಹಾಕಿಲ್ಲ, ಒಳಜಗಳದಿಂದ ಅಭ್ಯರ್ಥಿ ಹಾಕಿದ್ದಾರೆ. ಮುಸ್ಲೀಮರಿಗೆ ಮೋಸ ಮಾಡಲು ಅದೊಂದು ಅಭ್ಯರ್ಥಿ ಹಾಕಿದ್ದಾರೆ. ಮುಸ್ಲಿಂ ಅಭ್ಯರ್ಥಿ ಗೆಲ್ಲಿಸುವ ಕಳಕಳಿ ಇದ್ದರೆ, ಮೊದಲನೇ ಅಭ್ಯರ್ಥಿ ಮುಸ್ಲಿಂ ಹಾಕಿ ಗೆಲ್ಲಿಸಬಹುದಿತ್ತು. ಸೋಲಲಿಕ್ಕೆ ಕಾಂಗ್ರೆಸ್​​ಗೆ ಮುಸ್ಲಿಮರು ಬೇಕು. ಮುಸ್ಲಿಮರನ್ನು ಬಲಿಕಾ ಬಕ್ರಾ ಮಾಡೋದಕ್ಕೆ ಬೇಕು ಎಂದು ಹೇಳಿದರು.

ದೇಶದಲ್ಲಿ 60 ವರ್ಷ ಆಡಳಿತದಲ್ಲಿ ಅಲ್ಪಸಂಖ್ಯಾತ, ದಲಿತರ ಬಗ್ಗೆ ಕಾಳಜಿಯಿಟ್ಟು ಆಡಳಿತ ಮಾಡಿಲ್ಲ. ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ದಾರೆ. ದಲಿತರು ದಲಿತಾರಾಗಿಯೇ ಇದ್ದಾರೆ. ಅಲ್ಪಸಂಖ್ಯಾತರು ಅಲ್ಪಸಂಖ್ಯಾತರಾಗಿಯೇ, ಬಡವರು ಬಡವರಾಗಿಯೇ ಉಳಿಯಬೇಕು ಅನ್ನೋದು ಕಾಂಗ್ರೆಸ್​​ನವರ ಉದ್ದೇಶವಾಗಿದೆ ಎಂದರು.

ಇನ್ನು ಸಿದ್ದರಾಮಯ್ಯ ಚಡ್ಡಿ ಹೇಳಿಕೆಗೆ ಟಾಂಗ್ ನೀಡಿದ್ದು, ಇತ್ತೀಚಿಗೆ ದಾರಿ ತಪ್ಪಿ ಮಾತನಾಡುತ್ತಿದ್ದಾರೆ. ಆರ್ ಎಸ್ ಎಸ್ ರಾಜಕೀಯ ಪಕ್ಷವಲ್ಲ. ಅದೊಂದು ಸ್ವಯಂ ಸೇವಕರ ಪಕ್ಷವಾಗಿದ್ದು, ಭಾರತದ ಏಳ್ಗಿಗಾಗಿ, ಸಂಸ್ಕೃತಿ ಉಳಿಸಿ ಬೆಳೆಸೋದಕ್ಕಾಗಿ ಪೂರ್ವಾಶ್ರಮ ತೊರೆದು ಸಂಘದಲ್ಲಿ ವಾಸ ಮಾಡ್ತಾರೆ. ಅಂತಹವರ ಬಗ್ಗೆ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ, ಯಾರನ್ನೋ ಓಲೈಕೆ ಮಾಡೋದಕ್ಕೆ ಸಿದ್ದರಾಮಯ್ಯ ಮಾತನಾಡೋದು ಸರಿಯಲ್ಲ. ಅವರು ಅನುಭವಿ ರಾಜಕಾರಣಿ, ಮಾಜಿ ಸಿಎಂ, ಹಾಲಿ ವಿಪಕ್ಷ ನಾಯಕರಾಗಿದ್ದು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕಾರಜೋಳ ಗುಡುಗಿದರು.

RELATED ARTICLES

Related Articles

TRENDING ARTICLES