Monday, December 23, 2024

ರಾತ್ರಿ ವೇಳೆ ಲೌಡ್ ಸ್ಪೀಕರ್​​ಗೆ ಅನುಮತಿ ಇಲ್ಲ : ಕಮಲ್ ಪಂತ್

ಬೆಂಗಳೂರು: ರಾತ್ರಿ ವೇಳೆ ಲೌಡ್ ಸ್ಪೀಕರ್ ಗೆ ಅನುಮತಿ ಇಲ್ಲ. ನಿತ್ಯ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕಡ್ಡಾಯ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಿತ್ಯ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕಡ್ಡಾಯ. ಸರ್ಕಾರ ಈ ಹಿಂದೆಯೇ ಲೌಡ್ ಸ್ಪೀಕರ್ ಗೈಡ್ ಲೈನ್ ಬಿಡುಗಡೆ ಮಾಡಿದ್ದು, ಬೆಂಗಳೂರಿನಲ್ಲಿ ಲೌಡ್ ಸ್ಪೀಕರ್ ಬಳಸುವ ಬಗ್ಗೆ ಗೋಂದಲ ಇಲ್ಲ. ಎಲ್ಲರು ಆದೇಶ ಪಾಲನೆ ಮಾಡುತ್ತಿದ್ದಾರೆ. ಈ ಕುರಿತು ೨೦೦೨ ರಲ್ಲಿ ಆದೇಶವಾಗಿದೆ. ರಾತ್ರಿ ೧೦ ರಿಂದ ಮುಂಜನೆ ೬ ಗಂಟೆಯ ತನಕ ಯಾವುದೇ ಲೌಡ್ ಸ್ಪೀಕರ್ ಬಳಸಲು ಅವಕಾಶ ಇಲ್ಲ ಎಂದರು.

ಇನ್ನು, ವಿಶೇಷ ಸಮಯದಲ್ಲಿ ಅವಕಾಶವಿದೆ. ಸರ್ಕಾರದ ಎಲ್ಲಾ ಇಲಾಖೆ ಅಧಿಕಾರಿಗಳ ಜೊತೆ ಮೀಟಿಂಗ್ ಆದಮೇಲೆ ಸರ್ಕಾರ ಡಿಸೆಬಲ್ ಲೀಮಿಟ್ಸ್ ನಮೋದನೇ ಮಾಡಿ ಆದೇಶ ಹೊರಡಿಸಿದೆ‌. ಸದ್ಯ ಈಗಿರುವ ಲೌಡ್ ಸ್ಫೀಕರ್ ಅನುಮತಿ ಕಡ್ಡಾಯವಾಗಿದ್ದು, ಅನುಮತಿ ಪಡೆಯಲು ಎಲ್ಲಾ ಮಸೀದಿ ಮಂದಿರಗಳಿಗೂ ೧೫ ದಿನ ಗಡವು ನೀಡಲಾಗಿದೆ.

ಅದುವಲ್ಲದೇ, ೧೫ ದಿನದ ಒಳಗಡೆ ಅರ್ಜಿ ಅನುಮತಿ ಪಡೆಯಬೇಕು ೧೫ ದಿನದಲ್ಲಿ ಅನುಮತಿ ಪಡೆಯದೇ ಹೊದ್ರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ರು. ಆಜಾನ್ ವಿಚಾತವಾಗಿ ಇಲ್ಲಿ ವರೆಗೂ ಯಾವೂದೇ ಕಾನೂನು ಸುವ್ಯವಸ್ತೇ ಹದಗೆಟ್ಟಿಲ್ಲ, ನಮ್ಮವರು ಎಲ್ಲರ ಮೇಲೆ ನಿಗಾ ವಹಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES