Saturday, November 2, 2024

ಸಿಎಂ ಬೊಮ್ಮಾಯಿ ಮೌನಿ ಬಾಬಾ : ಹೆಚ್​.ಡಿ ಕುಮಾರಸ್ವಾಮಿ

ಬೆಂಗಳೂರು : ಪದೇ ಪದೇ ಸಮಾಜದ ಸಾಮರಸ್ಯ ಹಾಳು‌ಮಾಡಲು ಹೊರಟಿದ್ದಾರೆ ಇದರಿಂದ ನಮ್ಮ ಸಂಸ್ಕೃತಿಗೆ ಅಗೌರವ ತೋರಿಸಿದಂತಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಹಿಂದೂ ಸಂಘಟನೆಗಳ ವಿರುದ್ಧ ಕಿಡಿಕಾರಿದ್ದಾರೆ.

ಆಜಾನ್​ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಜೆ.ಪಿ ಭವನನದಲ್ಲಿರುವ ಜೆಡಿಎಸ್​ ಕಚೇರಿಯಲ್ಲಿಂದು  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಜಕ್ಕೂ ಅವರು( ಹಿಂದೂ ಸಂಘಟನೆಕಾರರು) ರಾಮನ ಭಕ್ತರಾಗಿದ್ದರೆ, ಹಿಂದೂ‌ ಸಂಸ್ಕ್ರತಿಗೆ ಒತ್ತುಕೊಡಿ ಆಗ ನೀವು ರಾಮನ ಭಕ್ತರಾಗುತ್ತೀರಿ ಎಂದರು.

ಸದ್ಯ ನಾನು ಹೊಳೆನರಸೀಪುರದಲ್ಲಿದ್ದಾಗ ಸಂಜೆ ಭಜನೆ ಮಾಡಿಕೊಂಡು, ದೀಪ ಹಿಡಿದು‌ ನಡೆಯುತ್ತಿದ್ದೇವು. ಬೆಳಗ್ಗೆ 5 ಗಂಟೆಗೆ ದೇವಸ್ಥಾನ ಓಪನ್​ ಮಾಡುತ್ತಿದ್ದೆವು. ಗಂಟೆ ನಾದ ಕೇಳಿದರೆ ಕಿವಿ ಅರಳುತ್ತಿತ್ತು. ಇಷ್ಟು ವರ್ಷ ಆಜಾನ್​​ನಿಂದ, ಘಂಟೆಯ ನಾದದಿಂದ ಶಬ್ದಮಾಲಿನ್ಯ ಆಗುತ್ತಿರಲಿಲ್ಲ ಆದರೆ ಈಗ ಏಕಾಏಕಿ ಶಬ್ದಮಾಲಿನ್ಯ ಆಗುತ್ತಿದೆ ಎಂದು ಹೇಳಲು ಹೊರಟಿದ್ದೀರಿ ಎಂದು ಟಾಂಗ್​ ಕೊಟ್ಟಿದ್ದಾರೆ.

ಅದುವಲ್ಲದೇ, ಪ್ರತಿಯೊಂದು ಧರ್ಮದವರಿಗೂ ಅವರದ್ದೇ ಆದ ಸಂಪ್ರದಾಯ ಇರುತ್ತದೆ ಹೀಗೆ ಅವರ ಸಂಪ್ರದಾಯ ನಿಲ್ಲಿಸಿ ಅನ್ನೊದಲ್ಲ. ಹಿಂದೆ ದೇವಸ್ಥಾನದಲ್ಲಿ ದೀಪ ಹಚ್ಚುವಾಗ ಭಕ್ತಿಗೀತೆ ಹಾಕುತ್ತಿದ್ದರು. ಸುಮ್ಮನೇ ನಮ್ಮ ಹಳೆಯ ಸಂಪ್ರದಾಯ ಮುಂದುವರಿಸಲು ಬಿಡಿ ಎಂದು ಹೆಚ್​​ಡಿ ಕುಮಾರಸ್ವಾಮಿ ಅವರು ಹೇಳಿದರು.

ಇನ್ನು ಇದೆಲ್ಲದರ ಹಿಂದೆ ಪೊಲಿಟಿಕಲ್ ಅಜೆಂಡಾ ಇದೆ ಎಂದು ಅನಿಸುತ್ತಿದೆ. ನರೇಂದ್ರ ಮೋದಿ ಸಂಸತ್​​ನಲ್ಲಿ ಅಡ್ಡ ಬೀಳ್ತಾರೆ. ವಿಧಾನಸೌಧದ ಮುಂಭಾಗದಲ್ಲಿ ಬೊಮ್ಮಾಯಿ ನಮಸ್ಕಾರ ಮಾಡಿದ್ದು..? ಏನು ಮಾಡ್ತಾ ಇದ್ದೀರಾ ಬೊಮ್ಮಾಯಿಯವರೇ ಇಡೀ ರಾಜ್ಯಕ್ಕೆ ಬೆಂಕಿ ಇಡೋ ಕೆಲಸ ಮಾಡೋದಿಕ್ಕೆ ಅಡ್ಡಬಿದ್ರಾ ನೀವು ? ಇದನ್ನು ಇಟ್ಟುಕೊಂಡಾ ಚುನಾವಣೆ ಮಾಡ್ತಿರಾ..? ಸರ್ಕಾರದಲ್ಲಿರುವ ನೀವು ಮೌನಿ ಬಾಬಾಳಾಗಿದ್ದಿರಲ್ಲ ನಿಮ್ಮಿಂದ ಏನು ಮಾಡಕಾಗುತ್ತಾ ಇಲ್ವಾ ? ಈ ರಾಜ್ಯದಲ್ಲಿ ಸಿಎಂ ಇದ್ದಾರಾ ಇಲ್ವಾ ಅನ್ನೋದೆ ಡೌಟ್ ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES