ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ಮುಂದೆ ಹಾಫ್ ಹೆಲ್ಮೆಟ್ ಬ್ಯಾನ್ ಮಾಡಲಾಗಿದೆ. ಬರಿ ಹಾಫ್ ಹೆಲ್ಮೆಟ್ ಧರಿಸುವುದಷ್ಟೇ ಬ್ಯಾನ್ ಅಲ್ಲ, ಅದನ್ನು ಮಾರಾಟ ಮಾಡುವುದನ್ನೂ ಸಹ ನಿಷೇಧಿಸಲಾಗಿದೆ.
ಕುಮಾರಸ್ವಾಮಿ ಲೇಔಟ್ ಟ್ರಾಫಿಕ್ ಪೊಲೀಸರು ಕಾರ್ಯಚರಣೆ ನಡೆಸಿ ಐಎಸ್‌ಐ ಮಾರ್ಕ್ ಇಲ್ಲದ ಹೆಲ್ಮೆಟ್‌ಗಳನ್ನು ಸೀಜ್ ಮಾಡಿ ಅವುಗಳನ್ನು ನಾಶಪಡಿಸಿದರು. 300 ಹೆಚ್ಚು ಹಾಫ್ ಹೆಲ್ಮೆಟ್‌ಗಳನ್ನ ಪೀಸ್ ಪೀಸ್ ಮಾಡಿದ ಪೊಲೀಸರು ಇದರ ಜೊತೆಗೆ ISI ಮಾರ್ಕ್ ಇಲ್ಲದ ಹೆಲ್ಮೆಟ್‌ಗಳನ್ನ ಸೀಜ್ ಮಾಡಿ ಫೈನ್ ಹಾಕಿದರು.
ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಈ ಆದೇಶ ಹೊರಡಿಸಿದ್ದಾರೆ.
ವಿರೋಧಾಭಾಸದ ಸಂಗತಿಯೆಂದರೆ ಈ ನಿಯಮ ಪೊಲೀಸರಿಗೆ ಅನ್ವಯಿಸುವುದಿಲ್ಲ ಎನಿಸುತ್ತದೆ. ಏಕೆಂದರೆ ಮೇಲಿನ ಫೋಟೊದಲ್ಲಿ ನೀವು ನೋಡುವಂತೆ ಪಿಎಸ್ಐ ಒಬ್ಬರು ಹಾಫ್ ಹೆಲ್ಮೆಟ್ ಧರಿಸಿಯೇ ಈ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ!