ಮೈಸೂರು : ಕ್ಷುಲ್ಲಕ ಕಾರಣಕ್ಕೆ ಗೃಹಿಣಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಂಜನಗೂಡಿನ ಕಲ್ಕುಣಿಕೆ ಗ್ರಾಮದಲ್ಲಿ ಘಡನೆ ನಡೆದಿದೆ.
ಪಕ್ಕದ ಮನೆಯಲ್ಲಿದ್ದ ಯುವಕ ಆಗಾಗ ಚುಡಾಯಿಸುತ್ತಿದ್ದ ಕಾರಣಕ್ಕೆ ಬೇಸತ್ತ ಗೃಹಿಣಿ ಜಯಶ್ರೀ(೩೧) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಕ್ಕದ ಮನೆಯ ಯುವಕ ಮಂಜು ಎಂಬಾತ ಆಗಾಗ ಚುಡಾಯಿಸುತ್ತಿದ್ದ. ಪತಿ ಚಿನ್ನಸ್ವಾಮಿಗೆ ವಿಚಾರ ತಿಳಿಸಿದ್ದಳು.ಈ ವಿಚಾರದಲ್ಲಿ ಗಲಾಟೆಯೂ ಆಗಿತ್ತು.
ಇದರಿಂದ ಮನನೊಂದ ಜಯಶ್ರೀ ೧೮ ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಅಷ್ಟರಲ್ಲೆ ವಿಚಾರ ತಿಳಿದ ಮನೆಯವರು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು.ಚಿಕಿತ್ಸೆ ಫಲಕಾರಿಯಾಗದೆ ಜಯಶ್ರೀ ಸಾವನ್ನಪ್ಪಿದ್ದಾಳೆ.ಜಯಶ್ರೀ ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆಯೇ ಮಂಜು ನಾಪತ್ತೆಯಾಗಿದ್ದಾನೆ.ಪ್ರಕರಣ ದಾಖಲಿಸಿಕೊಂಡಿರುವ ನಂಜನಗೂಡು ಗ್ರಾಮಾಂತರ ಠಾಣಾ ಪೊಲೀಸರು ಆರೋಪಿ ಮಂಜು ಬಂಧನಕ್ಕೆ ಬಲೆ ಬೀಸಿದ್ದಾರೆ…