Monday, February 3, 2025

ಮಲಪ್ರಭಾ ನದಿ ಪ್ರವಾಹ ಇಳಿಮುಖವಾದ ಬಳಿಕ ನದಿ ಕೆಸರಲ್ಲಿ ಸಿಲುಕಿ ನರಳಿದ ಎತ್ತುಗಳು..

ಬಾಗಲಕೋಟೆ: ಮಲಪ್ರಭಾ ನದಿ ಪ್ರವಾಹದ ನೀರು ಇಳಿಮುಖವಾದ್ರು ಅದರ ಅವಾಂತರಗಳು ಇನ್ನು ಕಡಿಮೆಯಾಗಿಲ್ಲ.ಹೌದು
ಮಲಪ್ರಭಾ ನದಿಯಲ್ಲಿ ಮೈ ತೊಳೆಯಲು ಹೋದ ವೇಳೆ ನದಿ ದಡದ ಕೆಸರಿನ ಮಣ್ಣಿನಲ್ಲಿ ಎತ್ತುಗಳು ಸಿಲುಕಿದ್ದ ಘಟನೆ ಬಾಗಲಕೋಟೆ ಜಿಲ್ಲೆ ಬದಾಮಿ ತಾಲ್ಲೂಕಿನ ಗೋವಿನಕೊಪ್ಪ ಗ್ರಾಮದಲ್ಲಿ ನಡೆದಿದೆ.ನದಿಯಲ್ಲಿ ಸಿಲುಕಿದ್ದ ಎತ್ತುಗಳನ್ನ ಕೆಸರಿನಿಂದ ಹೊರತೆಗೆಯಲು ಗ್ರಾಮಸ್ಥರು ಹರಸಾಹಸ ಪಟ್ರು.ಎಂಟತ್ತು ಜನ
ನಿರಂತರ ಒಂದೂವರೆ ಗಂಟೆ ಕಾಯಾ೯ಚರಣೆ ಬಳಿಕ ಹಗ್ಗದ ಸಹಾಯದೊಂದಿಗೆ ಎರಡು ಎತ್ತುಗಳನ್ನ ಹೊರಕ್ಕೆ ತಗೆಯಲಾಯಿತು.ಗೋವಿನಕೊಪ್ಪದ ನಿಂಗಪ್ಪ ಹಿರಿಗಣ್ಣವರ ಎಂಬುವವರಿಗೆ ಸೇರಿದ ಎತ್ತುಗಳು ಪ್ರಾಣಾಪಾಯದಿಂದ ಪಾರಾದವು.ಎತ್ತುಗಳನ್ನ ಹೊರ ತೆಗೆದಿದ್ದನ್ನು ಕಂಡು ನಿಂಗಪ್ಪ ನಿರಾಳರಾದ್ರು…

RELATED ARTICLES

Related Articles

TRENDING ARTICLES