Tuesday, October 29, 2024

KRSಗೆ ಬಾಗಿನ ಅರ್ಪಿಸಲು 13 ಲಕ್ಷರೂ ಖರ್ಚಾಯ್ತಾ..!?

ಮಂಡ್ಯ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಅದ್ರಲ್ಲೂ ಕೊರೊನಾ ಅನುದಾನದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ವಿರೋಧಪಕ್ಷದ ನಾಯಕರು ಬೊಬ್ಬಿರಿದಿದ್ರು. ಅದರ ಬೆನ್ನಲ್ಲೇ ಇದೀಗ KRS ಜಲಾಶಯಕ್ಕೆ ಬಾಗಿನ ಅರ್ಪಿಸೋದಿಕ್ಕೆ 13 ಲಕ್ಷ ತೋರಿಸಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಶಾಸಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಮಾವಿನ ತೋರಣ ಮತ್ತು ಬಾಳೆಕಂದಿಗೆ 13 ಲಕ್ಷ ಬೇಕಾ ಎಂದು ವ್ಯಂಗ್ಯ ವಾಡಿದ್ದಾರೆ‌.
ಹೌದು! ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಎಲ್ಲೆಡೆ ಭ್ರಷ್ಟಾಚಾರ ತಾಂಡವ ವಾಡ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಅದ್ರಲ್ಲೂ ಕೊರೊನ ನಿಯಂತ್ರಣಕ್ಕೆ ಕೇಂದ್ರ ಕೊಟ್ಟ ಅನುದಾನದಲ್ಲಿ ಕೋಟಿಕೋಟಿ ಭ್ರಷ್ಟಾಚಾರ ನಡೆಸಿದ್ದಾರೆಂದು ವಿರೋಧ ಪಕ್ಷದ ನಾಯಕರು ದಾಖಲೆ ಸಮೇತ ಆರೋಪಿಸಿದ್ರು. ಇದರ ಜೊತೆಗೆ ಇದೀಗ ಮೊನ್ನೆ ಆ-21ರಂದು KRS ನಲ್ಲಿ ಕಾವೇರಿಗೆ ಸಿಎಂ ಬಾಗಿನ ಅರ್ಪಿ ಸಿದ್ರು. ಇದಕ್ಕಾಗಿ ಜಿಲ್ಲಾಡಳಿತ ಇದೀಗ 13 ಲಕ್ಷ ಲೆಕ್ಕ ತೋರಿಸಿದ್ದಾರೆ. ಮಾವಿನ ತೋರಣ ಮತ್ತು ಬಾಳೆಕಂದಿಗೆ 13 ಲಕ್ಷ ಬೇಕಾ ಎಂದು ಶ್ರೀರಂಗ ಪಟ್ಟಣದ JDS ಶಾಸಕ ರವೀಂದ್ರ ಶ್ರೀಕಂಠಯ್ಯ
ವ್ಯಂಗ್ಯವಾಡಿ ಭ್ರಷ್ಟಾಚಾರ ನಡೆಸಿದ್ದಾರೆಂದು ಆರೋಪಿಸಿದ್ದಾರೆ.

ಅಲ್ದೆ ನಾವು ಕೂಡ ಇಲ್ಲಿವರೆಗೆ ಕಾರ್ಯಕ್ರಮ ಮಾಡಿದ್ದೇವೆ. ಬಾಗಿನ ಬಿಟ್ಟಿದ್ದೇವೆ ಇಷ್ಟು ಲೆಕ್ಕ ಕೊಟ್ಟಿಲ್ಲ ವೆಂದು ಜಿಲ್ಲಾಡಳಿತದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಆ ದಿನ ಜಿಲ್ಲಾಡಳಿತ ಯಾವುದೇ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿಲ್ಲ. ಜಿಲ್ಲಾಧಿಕಾರಿಯವರು ಒಂದು ಪಕ್ಷದ ಏಜೆಂಟರಂತೆ ವರ್ತಿಸಿ ತಮಗಿಷ್ಟ ಬಂದಾಗೆ ಮಾಡಿದ್ದಾರೆ. ನಾನೋಬ್ಬ ಸ್ಥಳೀಯ ಶಾಸಕನಾಗಿ ನನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಬೇಕಿದ್ರು,ನನಗೆ ಒಂದು ಮಾತು ಹೇಳದೆ ಅವರಿಷ್ಟ ಬಂದಾಗ ಕಾರ್ಯಕ್ರಮ ರೂಪಿಸಿದ್ದಾರೆಂದು ಕಿಡಿ ಕಾರಿದ್ದಾರೆ‌.ಬಾಗೀನ ಅರ್ಪಣೆ ದಿನ‌ ಸಿ.ಎಂ. ಬಂದಾಗ ನನ್ನ ಕಾರನ್ನು ಒಂದು ಕಿ.ಮೀ.ಹಿಂದೆ ತಡೆದು ನಡೆದು ಕಳಿಸಿದ್ದಾರೆ. ಕಾರ್ಯಕ್ರಮ ನನ್ನ ಅಧ್ಯಕ್ಷತೆ ನಡೆಯಬೇಕಿದ್ರು ಎಲ್ಲವೂ ಗಾಳಿಗೆ ತೂರಿ ಸರ್ವಾಧಿಕಾರಿಯಂತೆ ವರ್ತಿಸಿದ್ದು, ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಡಿಸಿ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ.
ಒಟ್ಟಾರೆ ಇದುವರೆಗೂ ಯಾವುದೇ ತಂಟೆ ತಕರಾರಿಲ್ಲದೆ ನಡೆದು ಬರ್ತಿದ್ದ ಕಾವೇರಿ ಬಾಗಿನ ಕಾರ್ಯಕ್ರಮದಲ್ಲೀಗ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಜಿಲ್ಲಾಡಳಿ ಬಾಗೀನ‌ ಕಾರ್ಯಕ್ರಮಕ್ಕೆ13 ಲಕ್ಷ ಖರ್ಚು ಮಾಡಿರೋ ಬಗ್ಗೆ ಲೆಕ್ಕ ತೋರಿಸ್ತಿದ್ದು, ಸ್ಥಳೀಯ ಶಾಸಕರು ಮಾಡಿರೋ ಈ ಗಂಭೀರ ಆರೋಪಕ್ಕೆ ಸರ್ಕಾರ ಅಥವಾ ಜಿಲ್ಲಾಡಳಿತ ಯಾವ ರೀತಿ ತನಿಖೆ ನಡೆಸುತ್ತೆ ಯಾವ ರೀತಿ ಲೆಕ್ಕ ಕೊಡುತ್ತೆ ಅನ್ನೋದ್ನ ಕಾದು ನೋಡಬೇಕಾಗಿದೆ.
-ಡಿ.ಶಶಿಕುಮಾರ್

RELATED ARTICLES

Related Articles

TRENDING ARTICLES