ದೊಡ್ಡಬಳ್ಳಾಪುರ : ಕ್ರಿಕೆಟ್ ಹೊರ ದೇಶದ ಕ್ರೀಡೆ ಹಾಗಿದ್ರೂ ನಮ್ಮ ದೇಶದಲ್ಲಿ ಇತ್ತೀಚಿಗೆ ಬಹಳಷ್ಟು ಖ್ಯಾತಿ ಪಡೆದಿರುವ ಕ್ರೀಡೆ. ಇನ್ನೂ ಈ ಕ್ರೀಡೆ ಇಡೀ ಪ್ರಪಂಚದಲ್ಲಿ ಪ್ರಸಿದ್ಧಿ ಪಡೆದಿದೆ. ಈ ಕ್ರೀಡೆಯಲ್ಲಿ ಸಾಧನೆ ಮಾಡೋದು ಸದ್ಯದ ಮಟ್ಟಕ್ಕೆ ಕಷ್ಟ ಸಾಧ್ಯವಾಗಿದೆ. ಕ್ರಿಕೆಟ್ ನಲ್ಲಿ ಸಾಧನೆ ಮಾಡಬೇಕಾದರೆ ಬಹಳಷ್ಟು ಪರಿಶ್ರಮ ಬೇಕು ಜೊತೆಗೆ ಬ್ಯಾಕ್ ಗ್ರೌಂಡ್ ಇರಬೇಕು. ಅದೆಷ್ಟೋ ಯುವಕರು ಒಂದು ಚಾನ್ಸ್ ಗೆ ಕಾಯುತ್ತಿರುತ್ತಾರೆ. ಆದ್ರೆ ಇಲ್ಲೊಬ್ಬ ಯುವಕ ಗ್ರಾಮೀಣ ಭಾಗದಲ್ಲಿ ಹುಟ್ಟಿ ಕ್ರಿಕೆಟ್ ಕ್ರೀಡೆಯಲ್ಲಿ ಸಾಧನೆ ಮಾಡಿ ಬರುವ ಐಪಿಎಲ್ ಟೂರ್ನಿಯಲ್ಲಿ ಆಡುವ ತವಕದಲ್ಲಿದ್ದಾನೆ.
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ತ್ಯಾಗರಾಜ ನಿವಾಸಿ ಮಹೇಶ್ ಎಂಬ ಯುವಕ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆರ್ ಸಿ ಬಿ ಪರ ಆಡಲು ಆಯ್ಕೆ ಆಗಿದ್ದಾನೆ. ಕಳೆದ ಬಾರಿಯ ಐಪಿಎಲ್ ನಲ್ಲಿಯೂ ಸಹ ಈ ಯುವಕ ಆರ್ ಸಿ ಬಿ ತಂಡದ ಪಟ್ಟಿಯಲ್ಲಿದ್ದ ಕಾರಣಾಂತರದಿಂದ ಟೂರ್ನಿಯಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಇನ್ನೂ ಭಾರತ ತಂಡದ ಅತ್ಯುನ್ನತ ಬ್ಯಾಟ್ಸ್ ಮ್ಯಾನ್ ವಿರಾಟ್ ಕೊಹ್ಲಿ ಬೆಂಗಳೂರಿಗೆ ಬಂದ ವೇಳೆ ಕ್ರೀಡಾಂಗಣದಲ್ಲಿ ತರಬೇತಿ ಮಾಡಬೇಕಾದರೆ ಈ ಮಹೇಶ್ ಬೌಲಿಂಗ್ ಮಾಡಿ ಸಾಕಷ್ಟು ಹೆಸರುವಾಸಿ ಆಗಿದ್ದಾನೆ. ಭಾರತ ತಂಡದ ಬೌಲರ್ ಬೂಮ್ರಾ ಮಾಡುವ ಬೌಲಿಂಗ್ ನ ಮಾದರಿಯಲ್ಲೇ ಮಹೇಶ್ ಸಹ ಬೌಲಿಂಗ್ ಮಾಡುತ್ತಾನೆ. ಇದರಿಂದ ಮಹೇಶ್ ಮಿನಿ ಬೂಮ್ರಾ ಎಂದು ಖ್ಯಾತಿ ಪಡೆದಿದ್ದಾನೆ. ಇನ್ನೂ ಮಹೇಶ್ ದೊಡ್ಡಬಳ್ಳಾಪುರದ ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಆಡಿ ಇದೀಗ ಕ್ರಿಕೆಟ್ನಲ್ಲಿ ಖ್ಯಾತಿ ಪಡೆದಿದ್ದಾನೆ.
ಮಹೇಶ್ ಆರ್ ಸಿ ಬಿ ತಂಡಕ್ಕೆ ಆಯ್ಕೆ ಆಗಿದ್ಧಾನೆ. ಇನ್ನೂ ಈ ಭಾರಿ ಕೊರೋನಾ ಎಫೆಕ್ಟ್ ನಿಂದ ಐ ಪಿ ಎಲ್ ಪಂದ್ಯ ದುಬೈನಲ್ಲಿ ನಡೆಯುವುದರಿಂದ ಕೇವಲ 21 ಸದಸ್ಯರನ್ನು ಮಾತ್ರ ದುಬೈಗೆ ಹೋಗಬೇಕಾಗುತ್ತದೆ. ಆದ್ದರಿಂದ ಮಹೇಶ್ ಗೆ ಅವಕಾಶ ಸಿಗುವುದು ಕಡಿಮೆ. ಇನ್ನೂ ಆರ್ ಸಿ ಬಿ ಮ್ಯಾನೇಜ್ಮೆಂಟ್ ನಿಂದ ಕರೆ ಬಂದಿದ್ದು ಅವಕಾಶ ಸಿಕ್ಕರೆ ನಿಮ್ಮನ್ನು ಕರೆದುಕೊಂಡು ಹೋಗುವ ಅವಕಾಶ ಇದೆ ಆದ್ದರಿಂದ ವೀಸಾ, ಪಾಸ್ ಪೋರ್ಟ್ ಸಿದ್ದ ಮಾಡಿಕೊಂಡಿರಲು ಸೂಚನೆ ನೀಡಿದೆ. ಇನ್ನೂ ಗ್ರಾಮೀಣ ಭಾಗದಲ್ಲಿ ಬೆಳೆದು ಈ ಮಟ್ಟಕ್ಕೆ ಕ್ರಿಕೆಟ್ ಜನಗತ್ತಿನಲ್ಲಿ ಬೆಳೆದಿರುವುದು ಕುಟುಂಬಸ್ಥರಿಗೆ ಮತ್ತು ಸ್ನೇಹಿತರಿಗೆ ಖುಷಿ ಉಂಟು ಮಾಡಿದೆ.
ಒಟ್ಟಾರೆ ಕ್ರಿಕೆಟ್ ಜಗತ್ತಿನಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ ಆದ್ರೂ ಮಹೇಶ್ ಗ್ರಾಮೀಣ ಭಾಗದಲ್ಲಿ ಹುಟ್ಟಿ ಈ ಮಟ್ಟಕ್ಕೆ ಹೋಗಿರುವುದು ಹೆಮ್ಮೆಯ ವಿಷಯ ಇನ್ನೂ ಈ ಬಾರಿಯ ಐಪಿಎಲ್ ನಲ್ಲಿ ಆಡಲು ಅವಕಾಶ ಸಿಕ್ಕರೆ ಮತ್ತಷ್ಟು ಸಾಧನೆ ಮಾಡುವ ತವಕದಲ್ಲಿ ಮಹೇಶ್ ಕಾಯುತ್ತಿದ್ದಾನೆ.
ರಾಮಾಂಜಿ.ಎಂ ಬೂದಿಗೆರೆ ಪವರ್ ಟಿವಿ ದೇವನಹಳ್ಳಿ.