ಮೈಸೂರು: ಆದಿವಾಸಿಗಳಿಗೆ ವಿತರಿಸುವ ಪೌಷ್ಠಿಕಾ ಆಹಾರದಲ್ಲಿ ದುರುಪಯೋಗ ಆರೋಪ ಕೇಳಿಬಂದಿದೆ. ಗಿರಿಜನ ಅಭಿವೃದ್ದಿ ಯೋಜನೆಯಡಿ ಆದಿವಾಸಿಗಳಿಗೆ ವಿತರಿಸಲಾಗುವ ಪೌಷ್ಠಿಕ ಆಹಾರ ಸಮರ್ಪಕವಾಗಿ ವಿತರಣೆ ಮಾಡಿಲ್ಲವೆಂದು ಆದಿವಾಸಿಗಳು ದೂರಿದ್ದಾರೆ. ಅಂಗನವಾಡಿ ಮೂಲಕ ಆದಿವಾಸಿಗಳಿಗೆ ಅಗತ್ಯ ಪದಾರ್ಥಗಳನ್ನ ವಿತರಿಸಲಾಗುತ್ತಿದೆ.
ಆದ್ರೆ ಹೆಚ್.ಡಿ.ಕೋಟೆ ಎಲೆಹುಂಡಿ ಅಂಗನವಾಡಿ ಕೇಂದ್ರದಲ್ಲಿ ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲವೆಂದು ಆದಿವಾಸಿಗಳು ಆರೋಪಿಸಿದ್ದಾರೆ. ಈ ಹಿನ್ನಲೆ ಎಲೆಹುಂಡಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಸುಶೀಲ ಮೇಲೆ ದಿನಸಿ ಪದಾರ್ಥಗಳ ದುರುಪಯೋಗ ಆರೋಪ ಬಂದಿದೆ. ಕೆಲವು ಪದಾರ್ಥಗಳನ್ನ ವಿತರಿಸಿ ಕೆಲವು ಪದಾರ್ಥಗಳನ್ನ ವಿತರಿಸುತ್ತಿಲ್ಲವೆಂದು ಆದಿವಾಸಿಗಳು ಆರೋಪ ಮಾಡಿದ್ದಾರೆ. ಪ್ರಶ್ನಿಸಿದ್ರೆ ಉಡಾಫೆ ಉತ್ತರ ನೀಡುತ್ತಾರೆಂದು ಪರಿಶೀಲನೆಗಾಗಿ ಎಲೆಹುಂಡಿಗೆ ಭೇಟಿಕೊಟ್ಟ ಅಧಿಕಾರಿಗಳಿಗೆ ಆದಿವಾಸಿಗಳಿಂದ ದೂರುಗಳ ಸುರಿಮಳೆಯಾಗಿದೆ.