ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚೀನಾ ವಿರುದ್ಧ 2 ನೇ ಸುತ್ತಿನ ಡಿಜಿಟಲ್ ಸರ್ಜಿಕಲ್ ನಡೆಸಿದೆ. ಜೂನ್ 29ರಂದು 59 ಚೀನಿ ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡಿದ್ದ ಸರ್ಕಾರ, ನಿನ್ನೆ (ಜುಲೈ 27) ಮತ್ತೆ 47 ಆ್ಯಪ್ಗಳನ್ನು ಬ್ಯಾನ್ ಮಾಡಿದೆ. ಪಬ್ಜಿ ಸೇರಿದಂತೆ ಇನ್ನೂ 250 ಆ್ಯಪ್ಗಳನ್ನು ಪರಿಶೀಲಿಸಲಾಗುತ್ತಿದೆ.
ಇನ್ನು ಈ ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕಾಂಗ್ರೆಸ್ ಕೇಂದ್ರದ ಕಾಲೆಳೆದಿದೆ. ‘`ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿ ಪಬ್ ಜಿ ಬ್ಯಾನ್ ಮಾಡುವ ಇರಾದೆ ಇತ್ತು. ಆದ್ರೆ ಪಬ್ಜಿ ಬ್ಯಾನ್ ಮಾಡಿದ ನಂತರ ಯುವಕರಯ ಉದ್ಯೋಗ ಕೇಳುತ್ತಾರೆ ಅಂತ ಸುಮ್ಮನಾಗಿದ್ದಾರೆ’’ ಎಂದು ಕುಟುಕಿದೆ.
ಕಾಂಗ್ರೆಸ್ ಹಿರಿಯ ಮುಖಂಡ ಅಭಿಷೇಕ್ ಮನು ಸಿಂಘ್ವಿ, ‘’ ಮೋದಿಜಿ ಪಬ್ಜಿಯನ್ನು ನಿಷೇಧಿಸುತ್ತಿದ್ದರು. ಆದ್ರೆ, ವಿಸ್ಮಯ ಲೋಕದಲ್ಲಿ ಜೀವಿಸುತ್ತಿರೋ ಯುವಕರನ್ನು ಬಡಿದೆಬ್ಬಿಸಿದ್ರೆ ಅವರು ಅಗತ್ಯವಾಗಿ ಬೇಕಾಗಿರೋ ಉದ್ಯೋಗದಂತ ವಿಚಾರಗಳನ್ನು ಕೇಳಬಹುದು. ಇದು ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದೆಂಬ ಉದ್ದೇಶದಿಂದ ಪಬ್ಜಿಯನ್ನು ಬ್ಯಾನ್ ಮಾಡಿಲ್ಲ’’ ಅಂತ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಟಿಕ್ ಟಾಕ್ ಸೇರಿದಂತೆ ಇದುವರೆಗೆ 106 ಆ್ಯಪ್ಗಳನ್ನು ಬ್ಯಾನ್ ಮಾಡಿದೆ. ಆದ್ರೆ ಚೀನಾದ ಅತೀ ಹೆಚ್ಚು ಹೂಡಿಕೆ ಇರೋ ಪಬ್ಜಿಯನ್ನು ಬ್ಯಾನ್ ಮಾಡಿಲ್ಲ. ಇದು ಚರ್ಚೆಗೆ ಗ್ರಾಸವಾಗಿದೆ.