Monday, October 28, 2024

ಸಚಿನ್​ ಪೈಲಟ್​ & ಟೀಮ್ ಬಗ್ಗೆ ಸ್ಪೀಕರ್ ನಿರ್ಧಾರ ತೆಗೆದುಕೊಳ್ಲಿ : ಹೈಕೋರ್ಟ್

ಜೈಪುರ : ರಾಜಸ್ಥಾನದಲ್ಲಿನ ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ಟ್ವಿಸ್ಟ್ ಪಡೀತಿದೆ. ಅಲ್ಲಿನ ಸದ್ಯದ ರಾಜಕೀಯ ಹೈಡ್ರಾಮಾಕ್ಕೆ ಸಬಂಧಪಟ್ಟಂತೆ ಸ್ಪೀಕರ್ ಮೊದಲು ತೀರ್ಮಾನ ತೆಗೆದುಕೊಳ್ಲಿ ಅಂತ ಹೈಕೋರ್ಟ್ ಹೇಳಿದೆ.

ಅನರ್ಹತೆ ನೋಟಿಸ್ ಪ್ರಶ್ನಿಸಿ  ಡಿಸಿಎಂ ಸಚಿನ್ ಪೈಲಟ್ ಮತ್ತು 18 ಮಂದಿ ಅತೃಪ್ತ ಕಾಂಗ್ರೆಸ್ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸ್ತಿರೋ ರಾಜಸ್ಥಾನ್ ಹೈಕೋರ್ಟ್​ನ ಮುಖ್ಯ ನ್ಯಾಯಾಮೂರ್ತಿ ಇಂದ್ರಜಿತ್ ಮಹಂತಿ ಮತ್ತು ನ್ಯಾಯಾಮೂರ್ತಿ ಪ್ರಶಾಂತ್ ಗುಪ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಸದ್ಯ ಬಿಕ್ಕಟ್ಟನ್ನು ಸ್ಪೀಕರ್ ವಿವೇಚನೆಗೆ ಬಿಟ್ಟಿದೆ.

ಕಳೆದ ಭಾನುವಾರದಿಂದಲೇ ರಾಜಸ್ಥಾನದಲ್ಲಿ ರಾಜಕೀಯ ಹೈಡ್ರಾಮಾ ಜೋರಾಗಿದೆ. ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರು ರೆಸಾರ್ಟಲ್ಲಿದ್ದಾರೆ. ಅಲ್ಲದೆ ಇದೇ ತಿಂಗಳು 13 ಮತ್ತು 14ರಂದು ನಡೆದ ಸಿಎಲ್​ಪಿ ಸಭೆಗೆ ಹಾಜರಾಗಿಲ್ಲ ಅನ್ನೋ ಕಾರಣವೊಡ್ಡಿ ಅತೃಪ್ತರ ಮೇಲೆ ಸ್ಪೀಕರ್ ಸಿ.ಪಿ ಜೋಷಿ, ಅನರ್ಹತೆ ಅಸ್ತ್ರ ಪ್ರಯೋಗಿಸಿ ನೋಟಿಸ್ ನೀಡಿದ್ದರು.

ಸ್ಪೀಕರ್ ನಡೆಯನ್ನು ಪ್ರಶ್ನಿಸಿ ಸಚಿನ್ ಪೈಲಟ್ & ಟೀಮ್ ಹೈಕೋರ್ಟ್ ಮೆಟ್ಟಿಲೇರಿದೆ. ಸ್ಪೀಕರ್ ಸಿ.ಪಿ ಜೋಷಿ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, “ಸ್ಪೀಕರ್ ಮತ್ತು ವಿಧಾನಸಭೆ ನ್ಯಾಯಾಂಗದ ವ್ಯಾಪ್ತಿಗೆ ಬರಲ್ಲ. ಸ್ಪೀಕರ್ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮುಂಚೆ ನ್ಯಾಯಾಲಯ ಮಧ್ಯಪ್ರವೇಶವನ್ನೂ ಮಾಡಲು ಸಾಧ್ಯವಿಲ್ಲ’’ ಅಂತ ವಾದಿಸಿದ್ದಾರೆ.

ಅಂತೆಯೇ ಸಚಿನ್ ಪೈಲಟ್ ಮತ್ತು ಅವರ ತಂಡದ ಪರ ಹಿರಿಯ ವಕೀಲರಾದ ಹರೀಶ್​​ ಸಾಳ್ವೆ ಹಾಗೂ ಮುಕುಲ್ ರೋಹಟಗಿ ವಾದಿಸ್ತಿದ್ದಾರೆ. ಶುಕ್ರವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಂಗಳವಾರದವರೆಗೆ ಪೈಲಟ್ ಮತ್ತು ಟೀಮ್ ವಿರುದ್ಧ ಯಾವ್ದೇ ಕ್ರಮ ಜರುಗಿಸಬಾರದು ಅಂತ ಆದೇಶಿಸಿ, ವಿಚಾರಣೆ ಮುಂದೂಡಿತ್ತು. ಇದೀಗ ಮೊದಲು ಸ್ಪೀಕರ್ ವಿವೇಚನೆಗೆ ಸದ್ಯದ ಬಿಕ್ಕಟ್ಟನ್ನು ವರ್ಗಾಯಿಸಿದೆ.

 

RELATED ARTICLES

Related Articles

TRENDING ARTICLES