Monday, October 28, 2024

ವಯೋಮಿತಿ ಸಡಿಲಿಕೆ ಇಲ್ಲ ; 65 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತದಾನ ತೀರ್ಮಾನ ಕೈ ಬಿಟ್ಟ ಆಯೋಗ

ನವದೆಹಲಿ :  ಬಿಹಾರ ವಿಧಾನಸಭೆ ಚುನಾವಣೆ ಹಾಗೂ ಉಪಚುನಾವಣೆಯಲ್ಲಿ ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ ವಯಸ್ಸಿನ ಸಡಿಲಿಕೆ ಮಾಡದಿರಲು ಚುನಾವಣಾ ಆಯೋಗ ತೀರ್ಮಾನ ಕೈಗೊಂಡಿದ್ದು, 80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲು ತೀರ್ಮಾನಿಸಿದೆ.

ಕೊರೋನಾ ಸೋಂಕಿನ ಆತಂಕದಿಂದಾಗಿ ಕೇಂದ್ರ ಕಾನೂನು ಸಚಿವಾಲಯ 65 ವರ್ಷ ಅಥವಾ ಅದಕ್ಕಿಂತ  ಮೇಲ್ಪಟ್ಟ ವಯಸ್ಸಿನವರಿಗೆ  ಅಂಚೆ ಮೂಲಕ ಮತದಾನ ಮಾಡಲು ಅವಕಾಶ ನೀಡಲು ತಿದ್ದುಪಡಿ ತಂದಿತ್ತು. ಆದ್ರೆ, ಗುರುವಾರ ಆಯೋಗ ಪ್ರಕಟಣೆ ಹೊರಡಿಸಿದ್ದು, 65 ವರ್ಷದವರೆಗಿನ ಸಡಿಲಿಕೆ ತೀರ್ಮಾನ ಕೈ ಬಿಟ್ಟು, 80 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಲು ನಿರ್ಧರಿಸಿದೆ.

ಇನ್ನುಳಿದಂತೆ ಅತ್ಯಗತ್ಯ ಸೇವೆಗಳಲ್ಲಿ ನಿರತರಾಗಿರೋರು, ಕೊರೋನಾ ಸೋಂಕು ದೃಢಪಟ್ಟವರು, ಕ್ವಾರೆಂಟೈನ್​​ನಲ್ಲಿರುವವರಿಗೆ ಅಂಚೆ ಮೂಲಕ ಮತದಾನ ಮಾಡುವ ಅವಕಾಶ ನೀಡಲಾಗಿದೆ.

RELATED ARTICLES

Related Articles

TRENDING ARTICLES