ಬೆಂಗಳೂರು : ಶಾಲಾ ಮಕ್ಕಳ ಬ್ಯಾಗ್ಗಳ ತೂಕಕ್ಕೆ ಸರ್ಕಾರ ಮಿತಿ ಹೇರಿದೆ. ಸರ್ಕಾರಿ ಶಾಲೆಗಳಲ್ಲದೆ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೂ ಅನ್ವಯವಾಗುವಂತೆ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದೆ. ಆದರೆ, ಸರ್ಕಾರದ ಕ್ರಮಕ್ಕೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿರುವ ಖಾಸಗಿ ಶಾಲಾ-ಸಂಘ ಸಂಸ್ಥೆಗಳು ‘ಅವೈಜ್ಞಾನಿಕ ಚಿಂತನೆಯಿಂದ ಸರ್ಕಾರ ಆದೇಶ ಮಾಡಿದ್ದು, ಪುನರ್ ಪರಿಶೀಲನೆ ಮಾಡುವಂತೆ ಒತ್ತಾಯಿಸಿವೆ.
ತರಗತಿ ಅನುಗುಣವಾಗಿ ಸರ್ಕಾರವು ಮಕ್ಕಳಿಗೆ ಬ್ಯಾಗ್ ಭಾರವನ್ನು ನಿಗಧಿಪಡಿಸಿದ್ದು, ಅದರ ಅನ್ವಯ, 1-2ನೇ ತರಗತಿ ಮಕ್ಕಳ ಬ್ಯಾಗ್ ಭಾರ 1.5 ಕೆಜೆಯಿಂದ 2 ಕೆಜಿ, 3-5 ನೇತರಗತಿ ಮಕ್ಕಳ ಬ್ಯಾಗ್ ತೂಕ 2-3 ಕೆಜಿ, 6-8ನೇ ತರಗತಿ ಮಕ್ಕಳ ಬ್ಯಾಗ್ ತೂಕ 3-4 ಕೆಜಿ, 9-10ನೇ ತರಗತಿ ಮಕ್ಕಳ ಬ್ಯಾಗ್ ಭಾರ 4-5 ಕೆಜಿ ಮಾತ್ರ ಇರತಕ್ಕದ್ದು ಅಂತ ಸರ್ಕಾರ ಆದೇಶ ಹೊರಡಿಸಿದೆ.
ಅಷ್ಟೇಅಲ್ಲದೆ 1-2ನೇ ತರಗತಿ ಮಕ್ಕಳ ಕೈಯಲ್ಲಿ ಮನೆಗೆಲಸ ಮಾಡಿಸುವಂತಿಲ್ಲ. ಮಕ್ಕಳು ನೀರಿನ ಬಾಟಲಿಯನ್ನು ತರೋದು ಬೇಡ, ಬದಲಾಗಿ ಶಾಲೆಯಲ್ಲೇ ಶುದ್ಧ ಕುಡಿಯೋ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ತಿಂಗಳ 3ನೇ ಶನಿವಾರವನ್ನು ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಬೇಕು ಅನ್ನೋದು ಸೇರಿದಂತೆ ನಿಯಮಗಳನ್ನು ಕೂಡ ಜಾರಿಗೆ ತಂದಿದೆ.
ಬ್ಯಾಗ್ ತೂಕ ಇಳಿಸಲು ಸರ್ಕಾರ ನಿರ್ಧಾರ : ಖಾಸಗಿ ಶಾಲೆಗಳ ನಕಾರ..!
TRENDING ARTICLES