Saturday, October 26, 2024

ಕಾಂಗ್ರೆಸ್​ ನಾಯಕರ ಜೊತೆ ಸುಮಲತಾ ರಹಸ್ಯ ಸಭೆ..!

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕಾಂಗ್ರೆಸ್​ನ ನಾಯಕರ ಜೊತೆ ಬೆಂಗಳೂರಿನ ಖಾಸಗಿ ಹೋಟೆಲ್​ವೊಂದರಲ್ಲಿ ರಹಸ್ಯ ಸಭೆ ನಡೆಸಿದ್ದಾರೆ. ಈ ವೇಳೆ ಭೋಜನಕೂಟ ಸಹ ನಡೆಸಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಮೈತ್ರಿ ಪಾಳಯದಲ್ಲಿ ಆತಂಕ ಹೆಚ್ಚಿದೆ.
ಮಾಜಿ ಸಚಿವ ಚೆಲುವರಾಯಸ್ವಾಮಿ ಮತ್ತು ಟೀಮ್​ ಜೊತೆ ಸುಮಲತಾ ಅಂಬರೀಶ್ ನಡೆಸಿದ ಸಭೆಯ ವಿಡಿಯೋ ರಿಲೀಸ್ ಆಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದಾರೆ.
ಮೈತ್ರಿಯ ಎರಡೂ ಪಕ್ಷಗಳಲ್ಲಿ ಸಂಶಯದ ಭೂತ ಮನೆ ಮಾಡಿದ್ದು, ಎರಡೂ ಪಕ್ಷಗಳ ನಡುವಿನ ಅಸಮಧಾನ ಈ ವಿಡಿಯೋ ಮೂಲಕ ಸ್ಫೋಟಗೊಂಡಿತಾ ಅನ್ನೋ ಪ್ರಶ್ನೆ ಎದುರಾಗಿದೆ.

RELATED ARTICLES

Related Articles

TRENDING ARTICLES