Wednesday, May 1, 2024

ಪಾಪ ಕಳೆಯಲು ಕಾಶಿ’ಗೆ ಹೋಗ್ಬೇಕಿಲ್ಲ, ಬಿಜೆಪಿಗೆ ಸೇರ್ಪಡೆಯಾಗಿ: ಖರ್ಗೆ ವ್ಯಂಗ್ಯ

ಬೆಂಗಳೂರು: ರಾಜ್ಯ ಬಿಜೆಪಿಗೆ ರೌಡಿಶೀಟರ್ ಗಳ ಸೇರ್ಪಡೆ ವಿಚಾರವಾಗಿ ಇಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಕಳ್ಳರು, ರಾಜ್ಯ ಮಟ್ಟದಲ್ಲಿ ಚಿಕ್ಕ ಕಳ್ಳರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಬಿಜೆಪಿ ಶಾಲು ಹಾಕಿಕೊಂಡರೆ ಪಾಪಗಳು ಪರಿಹಾರ ಆಗುತ್ತವೆ. ಈಗ ಕಾಶಿ ವರೆಗೆ ಹೋಗಬೇಕಿಲ್ಲ, ಇಲ್ಲೇ ಪರಿಹಾರ ಆಗುತ್ತದೆ ಎಂದು ವ್ಯಂಗ್ಯವಾಡಿದರು.

ಕಾನೂನು ಬಾಹಿರ, ಸಂವಿಧಾನ ವಿರೋಧಿ ಚಟುವಟಿಕೆ ಮಾಡಿದ್ರೆ ನಿಮ್ಮಷ್ಟು ಪುಣ್ಯವಂತ ಯಾರೂ‌‌ ಇಲ್ಲ. ಸಿಸಿಬಿ ಪೊಲೀಸರು ಹುಡುಕಿದರೂ ರೌಡಿಗಳು ಅವರಿಗೆ ಸಿಕ್ತಿಲ್ಲ. ಸಂಸದ ತೇಜಸ್ವಿ ಸೂರ್ಯ ಪಕ್ಕ‌ ಇರ್ತಾರೆ. ಬಿಜೆಪಿಯರಿಗೆ ಕೇಳಿದರೆ ಹೇಳಬಹುದು, ಫೈಟರ್ ಎಲ್ಲಿ? ಸೈಲೆಂಟ್ ಎಲ್ಲಿ? ಸೈಕಲ್ ಎಲ್ಲಿ? ಬ್ಲೇಡ್ ಎಲ್ಲಿ ಎಂದು ಗೊತ್ತಾಗುತ್ತದೆ ಎಂದು ಇತ್ತೀಚಿಗೆ ಕುಖ್ಯಾತ ರೌಡಿ ಸೈಲೆಂಟ್​ ಸುನೀಲ್​ ಬಿಜೆಪಿ ಸಂಸದರ ಕಾರ್ಯಕ್ರಮದಲ್ಲಿ ಭಾಗಿಯಾದ ಬಗ್ಗೆ ವಾಗ್ದಾಳಿ ನಡೆಸಿದರು.

ಇನ್ನು ಗೋವುಗಳ‌ರಕ್ಷಣೆಗೆ ಈ ಕಾಯ್ದೆ ತಂದಿಲ್ಲ. ಗೋಮತಗಳಿಗಾಗಿ ಈ ಕಾಯ್ದೆ ಜಾರಿಗೆ ತಂದಿದ್ದಾರೆ. 578 ಕೋಟಿ ತೆರಿಗೆ ಹಣ ವೆಚ್ಚವಾಗ್ತಿದೆ. ಅನವಶ್ಯಕವಾಗಿ ದುರುಪಯೋಗವಾಗ್ತಿದೆ. ಹಾಗಂತ ರಾಜ್ಯ ಹಣಕಾಸು ಇಲಾಖೆಯೇ ಹೇಳ್ತಿದೆ. ಯಾಕೆ ಇದರ ಬಗ್ಗೆ ನೀವು ಗಮನಹರಿಸಿಲ್ಲ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

RELATED ARTICLES

Related Articles

TRENDING ARTICLES