ಮೈಸೂರು: ರಾಜ್ಯದ ಅತ್ಯಂತ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿರುವ ಎಚ್ ಡಿ ಕೋಟೆಗೆ ಇದೀಗ ಭರವಸೆಯ ನಾಯಕನೊಬ್ಬ ಸಿಕ್ಕಿದ್ದಾನೆ. ಹೆಚ್.ಡಿ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಎರಡನೆಯ ಅಪ್ಪಾಜಿ ಕ್ಯಾಂಟೀನ್ ಲೋಕಾರ್ಪಣೆಯಾಗಿದೆ. ಜೆಡಿಎಸ್ ನಾಯಕರ ಅನುಪಸ್ಥಿತಿಯಲ್ಲಿ ಜನಸಾಗರದ ಮಧ್ಯೆ ಕೃಷ್ಣನಾಯಕ ಸರಗೂರಿನಲ್ಲಿ ಅಪ್ಪಾಜಿ ಕ್ಯಾಂಟೀನ್ ಉದ್ಘಾಟಿಸಿದ್ದಾರೆ.
ಈಗಾಗಲೇ ಎಚ್ ಡಿ ಕೋಟೆ ಪಟ್ಟಣದಲ್ಲಿ ಯಶಸ್ವಿಯಾಗಿ ಅಪ್ಪಾಜಿ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದೆ. ಈ ಕ್ಯಾಂಟಿನ್ ಅನ್ನ ಈ ಭಾಗದ ಅಕ್ಷಯ ಪಾತ್ರೆ ಅಂತೇಳಿ ಕರೆಯಲಾಗುತ್ತಿದೆ. ಹೆಚ್ .ಡಿ ಕೋಟೆ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಅಕಾಂಕ್ಷಿಯಾಗಿರೋ ಕೃಷ್ಣನಾಯಕ ಅಪ್ಪಾಜಿ ಕ್ಯಾಂಟೀನ್ ನಿರ್ಮಾತೃ. ಸದಾ ಬಡವರು ಕೂಲಿ ಕಾರ್ಮಿಕರು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಬೇಕು ಎಂಬ ಅಂಬಲದೊಂದಿಗೆ ಅಪ್ಪಾಜಿ ಕ್ಯಾಂಟೀನ್ ಅನ್ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕೈಯಲ್ಲಿ ಉದ್ಘಾಟನೆ ಮಾಡಿಸಿದ್ರು. ಹೆಚ್.ಡಿ.ಕೋಟೆ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಇದೀಗ 1500ಕ್ಕೂ ಹೆಚ್ಚು ಮಂದಿಗೆ ಬೆಳಗಿನ ತಿಂಡಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕೇವಲ 10 ರೂಗೆ ಮಾಡಿ ಜನರ ಹಸಿದ ಹೊಟ್ಟೆ ತುಂಬಿಸುತ್ತಿದ್ದಾರೆ. ಇದೀಗ ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲಿಗೆ ಹಡಿಗಲ್ಲು ಹಾಕಿದ್ದಾರೆ. ಅದು ಸರಗೂರಿನಲ್ಲಿ ಮತ್ತೊಂದು ಅಪ್ಪಾಜಿ ಕ್ಯಾಂಟೀನ್ ಉದ್ಘಾಟನೆ ಮಾಡುವ ಮೂಲಕ ಕೋಟೆ ಹಾಗೂ ಸರಗೂರು ತಾಲೂಕಿನ ಜನರ ಬೆನ್ನಿಗೆ ನಿಂತಿದ್ದಾರೆ ಕೃಷ್ಣನಾಯಕ.
ಪಂಚಸೂತ್ರದ ಯಾತ್ರೆಯಲ್ಲಿ ಜೆಡಿಎಸ್ ನಾಯಕರು ಬ್ಯೂಸಿಯಾಗಿದ್ದಾರೆ. ಹೀಗಾಗಿಯೇ ತಮ್ಮ ಜೆಡಿಎಸ್ ನಾಯಕರ ಅನುಪಸ್ಥಿತಿಯಲ್ಲಿ ನಾಯಕರ ಸೂಚನೆ ಮೆರೆಗೆ ಕೃಷ್ಣನಾಯಕ ಬಾರಿ ಜನಸಾಗರದ ನಡುವೆ ಸರಗೂರಿನಲ್ಲಿ ಅಪ್ಪಾಜಿ ಕ್ಯಾಂಟಿನ್ ಉದ್ಘಾಟನೆ ಮಾಡಿದ್ದಾರೆ. ತಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿರೋ ಕೃಷ್ಣನಾಯಕನಿಗೆ ಕೋಟೆ ಜನ್ರು ಅದ್ದೂರಿಯಾಗಿ ಸ್ವಾಗತ ಕೋರಿ, ತಮ್ಮ ಹೆಗಕ ಮೇಲೆಯೇ ಹೊತ್ತು ತಂದು ಕ್ಯಾಂಟಿನ್ ಉದ್ಘಾಟನೆ ಮಾಡಿಸಿದ್ದಾರೆ. ಈ ಬಾರಿ ಜನ ಬೆಂಬಲ ಹೆಚ್ ಡಿ ಕೋಟೆಯಲ್ಲಿ ವ್ಯಕ್ತವಾಕ್ತಿರೋದ್ರಿಂದ ಜೆಡಿಎಸ್ ನಾಯಕರಿಗೆ ಕೃಷ್ಣನಾಯಕ ಮೇಲೆ ಭರವಸೆ ಮೂಡಿದೆ. ಆಮೂಲಕ ಜೆಡಿಎಸ್ ಟಿಕೇಟ್ ನೀಡಲು ಮನಸ್ಸು ಮಾಡಿದ್ದಾರೆ ಎನ್ನುತ್ತಿವೆ ಮೂಲಗಳು.
ಒಟ್ಟಿನಲ್ಲಿ ಅಧಿಕಾರವೇ ಇಲ್ಲದೆ ಕೋಟೆ ಜನರ ಕಷ್ಟಕ್ಕೆ ಬೆನ್ನಿಗೆ ನಿಂತಿರೋ ಕೃಷ್ಣನಾಯಕ ತಮ್ಮ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಆಗ್ಬೇಕು ಅನ್ನೋ ಒತ್ತಾಯ, ಹಾಗೂ ವರಿಷ್ಠರ ಮೇಲೆ ಒತ್ತಡ ಇದೆ. ಹೀಗಾಗಿ ಕೃಷ್ಣನಾಯಕ ನಿಸ್ವಾರ್ಥ ಸೇವೆ ವರಿಷ್ಠರಿಗೂ ಇಷ್ಟವಾಗಿದ್ದು, ಜನರ ಕಷ್ಟಗಳಿಗೆ ಬೆನ್ನೆಲುಬಾಗಿ ನಿಲ್ಲೋಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಹೇಳುತ್ತಿದ್ದಾರೆ.