Friday, November 22, 2024

ಜಾರಕಿಹೊಳಿ ಬ್ರದರ್ಸ್ ಕಟ್ಟಿಹಾಕಲು ಕಮಲ ನಾಯಕರ ರಣತಂತ್ರ

ಬೆಳಗಾವಿ; ಬೆಳಗಾವಿ ಬಿಜೆಪಿ ಪಡಸಾಲೆಯಲ್ಲಿ ಬಿನ್ನಮತದ ವಾಸನೆ ಬಡೆಯುತ್ತಿದೆ. ಇಂದು ಜಾರಕಿಹೋಳಿ ಬ್ರದರ್ಸ್ ಅನ್ನು ಹೊರಗಿಟ್ಟು ಗೌಪ್ಯ ಸಭೆ ನಡೆಸಿದೆ ಬೆಳಗಾವಿ ಬಿಜೆಪಿ ನಾಯಕರು, ಜಾರಕಿಹೊಳಿ ಬ್ರದರ್ಸ್ ಅನ್ನು ಕಟ್ಟಿಹಾಕಲು ನಾನಾ ರಣತಂತ್ರವನ್ನು ರೂಪಿಸಿದ್ದಾರೆ ಎನ್ನುವ ಗುಮಾನಿ ಎಲ್ಲಡೆ ಗುನುಗುಡುತ್ತಿದೆ.

ಹೌದು ಈ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿ ಇದ ಸಮ್ಮಿಶ್ರ ಸರ್ಕಾರ ಕೆಡವಿ, ಬಿಜೆಪಿ ಅರಳಿಸುವಂತೆ ಮಾಡಿದ ಜಾರಕಿಹೊಳಿ ಬ್ರದರ್ಸ್ ಈಗ ಬಿಜೆಪಿ ಪಕ್ಷಕ್ಕೆ ಮಗ್ಗುಲು ಮುಳ್ಳಾಗಿದ್ದಾರೆ ಎಂದು ಸ್ವಪಕ್ಷಿಯರೆ ಹೈಕಮಾಂಡ್ ಗೆ ಸಂದೇಶ ನೀಡಲು ಹೊರಟಹಾಗೆ ಬೆಳಗಾವಿ ಬಿಜೆಪಿ ನಾಯಕರ ನಡೆ ಕಾಣುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತ್ತಿದೆ ನಿನ್ನೆ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ನಡೆದ ಬಿಜೆಪಿ ನಾಯಕರ ಗೌಪ್ಯ ಸಭೆ ಪುಷ್ಟಿ ನೀಡುವಂತೆ ಇದೆ.

ಪದೇ ಪದೇ ಮಾಧ್ಯಮದವರು ಬಿಜೆಪಿ ಸಭೆಗೆ ಜಾರಕಿಹೋಳಿ ಬ್ರದರ್ಸ್ ರಮೇಶ್ ಜಾರಕಿಹೋಳಿ, ಬಾಲಚಂದ್ರ ಜಾರಕಿಹೋಳಿ ಗೈರನ್ನು ಪ್ರಶ್ನೆ ಮಾಡಿದಾಗ ಒಂದಲ್ಲಾ ಒಂದು ಸಬುಬು ನೀಡಿ ನಾಯಕರು ನಿನ್ನೆ ಮಾಧ್ಯಮದವರ ಮುಂದೆ ಪಾರಾಗುತ್ತಿದ್ದಾರೆ. ಚುನಾವಣೆಯಲ್ಲಿ ಇದಕ್ಕೆ ಉತ್ತರ ಸಿಗಲಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಮೂರು ತಾದು ಸಭೆ ನಡೆಸಿ ಬಳಿಕ ಮಾತನಾಡಿದ ಮಾಜಿ ಸಿಎಂ ಡಿಸಿಂ ಲಕ್ಷ್ಮಣ್ ಸವದಿ ಸಭೆಯ ಗುಟ್ಟು ಬಿಟ್ಟು ಕೊಡಲಿಲ್ಲ. ಸಭೆಗೆ ಜಾರಕಿಹೊಳಿ ಬ್ರದರ್ಸ್ ಗೈರಾಗಿದ್ದಾರೆ ಏಕೆ ಅಂದ್ರೆ ಇದು ಸಭೆಯಲ್ಲಾ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿಗೆ ನೈತಿಕ ಬೆಂಬಲ ನೀಡಲು ಬಂದಿದ್ದೆವೆ ಎಂದಿದ್ದಾರೆ

ಲಕ್ಷ್ಮಣ್ ಸವದಿ ಮಾತನಾಡಲು ಮುಂಚೆ ಮಾತನಾಡಿದ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಪಕ್ಷದ ಆದೇಶ ‌ಹಿನ್ನೆಲೆಯಲ್ಲಿ ಸತೀಶ ಜಾರಕಿಹೊಳಿ‌ ವಿರುದ್ಧ ಪ್ರತಿಭಟನೆ ಮಾಡಿದರು. ಪ್ರತಿಭಟನೆ ನಂತರ ಸತೀಶ ಜಾರಕಿಹೊಳಿ ಹೇಳಿಕೆ ವಾಪಸ್ ಪಡೆದಿದ್ದರು. ಆದ್ರೆ ನಿನ್ನೆ ಘಟಪ್ರಭಾದಲ್ಲಿ ನನ್ನ ಕಾರಿಗೆ ಅಟ್ಯಾಕ್ ಆಗಿತ್ತು. ನಮ್ಮ ನಾಯಕರು ಎಲ್ಲರೂ ಫೋನ್ ಮಾಡಿದ್ರು. ನಾನೇ ಬಂದು ಎಲ್ಲಾ ಮಾಹಿತಿ ಕೊಡ್ತಿನಿ ಅಂತ ಹೇಳಿದೆ. ಘಟನೆ ವಿವರವಾಗಿ ಹೇಳಿದ್ದೇನೆ ಮುಗ್ಧ ಜನರನ್ನು ಬಳಸಿಕೊಂಡು ರಾಜಕೀಯ ಬಳಸಿಕೊಳ್ಳಲು ಪ್ರಯತ್ನ ನಡೆದಿದೆ. ಅವರು ಯಾರು ಏನ್ ಅಂತ ನನಗೆ ಎಲ್ಲಾ ಗೊತ್ತಿದೆ. ಈ ಘಟನೆ ಎಲ್ಲಾ ಪೂರ್ವ ನಿಯೋಜಿತ ವಾಗಿದೆ ಇದೊಂದು ಕೆಟ್ಟ ಸಂಪ್ರದಾಯ ಎಂದರು.

ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಹೋಗಿ ಬೆಳಗಾವಿ ಬಿಜೆಪಿ ನಾಯಕರು ಇಕಟ್ಟಿಗೆ ಸಿಲುಕ್ಕಿದ್ದಾರೆ. ಹೇಳಿಕೆಯನ್ನು ಹೈಫ್ ಮಾಡಲು ಹೋದ್ರೆ ಜಾರಕಿಹೋಳಿ ಬ್ರದರ್ಸ್ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಸುಮ್ಮನೆ ಇದ್ರೆ ಹೈ ಕಮಾಂಡ್ ಕೆಂಗಣ್ಣಿಗೆ ಗುರಿಗಾಗಬೇಕಾಗುತ್ತದೆ. ಒಟ್ಟಿನಲ್ಲಿ ಬೆಳಗಾವಿ ಬಿಜೆಪಿ ನಾಯಕರ ಸ್ಥಿತಿ ಅಡ್ಡಕತ್ತಿರಿಯಲ್ಲಿ ಸಿಲುಕಿದ ಅಡಕೆ ತರವಾಗಿದೆ

RELATED ARTICLES

Related Articles

TRENDING ARTICLES