Monday, May 20, 2024

ವಿಚಾರಣೆಗೆ ಹಾಜರಾಗುವಂತೆ ಡಿ.ಕೆ ಶಿವಕುಮಾರ್​ಗೆ ಇಡಿ ಬುಲಾವ್.!

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರಿಗೆ ಮತ್ತೆ ಇಡಿ(ಜಾರಿ ನಿರ್ದೇಶನಾಲಯ) ನೋಟಿಸ್​ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.

ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇದ್ದಾಗಲೇ ಮತ್ತೆ ಇಡಿ ಬುಲಾವ್ ಬಗ್ಗೆ ಮಾತನಾಡಿದ ಡಿಕೆಶಿ, ಈಗ ವಿಚಾರ ಗೊತ್ತಾಗಿದೆ. ನವೆಂಬರ್ 14 ಕ್ಕೆ ಬರಬೇಕೇಂದು ಇಡಿ ಸಮನ್ಸ್ ನೀಡಿದೆ ಎಂದು ಸ್ಪಷ್ಟನೆ ನೀಡಿದರು.

ನವಂಬರ್ 14 ರಂದು ನೆಹರು ಜಯಂತಿ ಇದೆ. ಹಾಗಾಗಿ ಕಾನೂನಿಗೆ ಗೌರವ ಕೊಡಬೇಕು ನಿಟ್ಟಿನಲ್ಲಿ ಇಡಿ ಸಮನ್ಸ್ ಬಗ್ಗೆ ನಮ್ಮ ವಕೀಲರ ಜೊತೆ ಚರ್ಚೆ ಮಾಡುತ್ತೇನೆ. ನಿನ್ನೆ ನನ್ನ ತಮ್ಮ ಇಡಿ ವಿಚಾರಣೆ ಹಾಜರಾಗಿದ್ದರು. ಅಲ್ಲಿ ಏನಾಯಿತು ಎಂಬುದರ ಬಗ್ಗೆ ಚರ್ಚಿಸುವೆ ಎಂದು ತಿಳಿಸಿದರು.

ಕಳೆದ ಕೆಲವು ದಿನಗಳ ಹಿಂದೆ ನವೆಂಬರ್​ 7(ನಿನ್ನೆ) ಡಿ.ಕೆ ಶಿವಕುಮಾರ್ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಆದರೆ, ನಿನ್ನೆ ರಾಷ್ಟ್ರೀಯ ಕಾಂಗ್ರೆಸ್​ ಅಧ್ಯಕ್ಷರಾದ ಮೇಲೆ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ ಅವರಿಗಾಗಿ ಕಾರ್ಯಕ್ರಮ ಹಮ್ಮಿಕೊಂಡ ಹಿನ್ನಲೆಯಲ್ಲಿ ಡಿಕೆಶಿ ವಿಚಾರಣೆಗೆ ಹಾಜರಾಗಿರಲಿಲ್ಲ. ಬದಲಿಗೆ ಸಂಸದ ಡಿಕೆ ಸುರೇಶ್​ ಅವರು ಇಡಿ ವಿಚಾರಣೆಗೆ ಸುಮಾರು 5 ಗಂಟೆ ಎದುರಿಸಿದ್ದರು.

ಯಂಗ್ ಇಂಡಿಯಾ, ನ್ಯಾಷನಲ್ ಹೆರಾಲ್ಡ್‌ಗೆ ಡಿಕೆ ಶಿವಕುಮಾರ್​ ದೇಣಿಗೆ ನೀಡಿದ್ದರು. ಈಗ ಅದೇ ವಿಚಾರವಾಗಿ ಸಮನ್ಸ್ ನೀಡಿ ಮತ್ತೆ ವಿಚಾರಣೆಗೆ ಕರೆದಿದೆ.

RELATED ARTICLES

Related Articles

TRENDING ARTICLES