Friday, November 22, 2024

ಪವರ್​ ಟಿವಿ ವರದಿಯ ಫಲಶೃತಿ

ಬೆಂಗಳೂರು : ಅಗ್ನಿಶಾಮಕ ಸಿಬ್ಬಂದಿಯ ಲಂಚ ಲಂಚಬಾಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪವರ್​ ಟಿವಿ ವಿಸ್ತೃತ ವರದಿ ಮಾಡಿತ್ತು. ಇದೀಗ ನಾಲ್ವರು ಲಂಚಬಾಕ ಡಿಸ್ಟ್ರಿಕ್ಟ್ ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ.

ಡಿಜಿ, ಅಮರ್ ಕುಮಾರ್ ಪಾಂಡೆ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ಧಾರೆ. ಜಗದೀಶ್, ಬಾ.ಮಾ.ಶೇಖರ್, ಸಿದ್ದೇಗೌಡ, ಹೊನ್ನೆಗೌಡ ಸಸ್ಪೆಂಡ್​​ ಆಗಿದ್ದಾರೆ. ಪವರ್ ಟಿವಿ ಸುದ್ದಿ ಪ್ರಸಾರ ಬೆನ್ನಲ್ಲೇ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮವಾಗಿದೆ. ಈ ಅಧಿಕಾರಿಗಳು ಹಣದಾಸೆಗೆ ಜನಸಾಮಾನ್ಯರ ಪ್ರಾಣಕ್ಕೆ ಕುತ್ತು ತರುತ್ತಿದ್ದರು. ಹಣ ಕೊಟ್ರೆ ಎಲ್ಲದಕ್ಕೂ NOC ಕೊಟ್ಟು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರು.

ನಿಯಮಗಳನ್ನ ಉಲ್ಲಂಘಿಸಿ ಲಂಚ ಪಡೆದು NOC ನೀಡುತ್ತಿದ್ದರು. ಲಕ್ಷಗಟ್ಟಲೆ ಹಣ ಪಡೆದು ಅಕ್ರಮಗಳನ್ನು ಮುಚ್ಚಿ ಹಾಕಿದ್ದರು. ಗಾರ್ಮೆಂಟ್ಸ್​, ಬಿಲ್ಡಿಂಗ್​​ಗಳು, ಗಮ್ ಫ್ಯಾಕ್ಟರಿ, ಕೆಮಿಕಲ್ ಫ್ಯಾಕ್ಟರಿಗಳಲ್ಲಿ ಅಕ್ರಮಗಳಲ್ಲಿ ಇವರ ಕೈವಾಡವಿತ್ತು. ಈ ಹಿನ್ನೆಲೆ ದೂರಿನನ್ವಯ ಅಗ್ನಿಶಾಮಕ ದಳ ಅಧಿಕಾರಿಗಳ ವಿರುದ್ಧ ಪವರ್ ಟಿವಿ ಸ್ಟಿಂಗ್​ ಆಪರೇಷನ್​ ಮೂಲಕ ಅಧಿಕಾರಿಗಳ ಮುಖವಾಡ ಬಯಲು ಮಾಡಿತ್ತು. ಈ ಬೆನ್ನಲ್ಲೇ ಲಂಚಬಾಕರ ಸಸ್ಪೆಂಡ್​ ಆಗಿದೆ. ಇದು ಪವರ್​ ಟಿವಿ ವರದಿಯ ಫಲಶೃತಿಯಾಗಿದೆ.

RELATED ARTICLES

Related Articles

TRENDING ARTICLES