ಬೆಂಗಳೂರು : ಖಾಸಗಿ ಬಸ್ ಟಿಕೆಟ್ ದರ 2 ಸಾವಿರ ಹೆಚ್ಚಳ ಮಾಡಿದ್ದು, ದುಪ್ಪಟ್ಟು ದರ ವಸೂಲಿ ಮಾಡಿದ್ರೆ ಪರ್ಮಿಟ್ ರದ್ದು ಎಚ್ಚರಿಕೆ ನೀಡಿದ್ರೂ ಬಸ್ ಮಾಲಿಕರಿಗೆ ಕ್ಯಾರೆ ಇಲ್ಲ.
ಹೆಸರಿಗಷ್ಟೇ ಕ್ರಮದ ಭರವಸೆ ನೀಡಿ ಸುಮ್ಮನೆ ಆಗಿದೆ ಸಾರಿಗೆ ಇಲಾಖೆ, ಪ್ರತಿ ಹಬ್ಬ ಹರಿದಿನಗಳಲ್ಲಿಯೂ ಹಗಲು ದರೋಡೆ ಮಾಡ್ತಿದ್ದಾರೆ ಖಾಸಗಿ ಬಸ್ ಮಾಲೀಕರು. ದೀಪಾವಳಿ ಹಬ್ಬಕ್ಕೂ ಖಾಸಗಿ ಬಸ್ ಪ್ರಯಾಣ ವಿಮಾನದಷ್ಟೇ ದುಬಾರಿಯಾಗಿದೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ದರ ಬರೋಬ್ಬರಿ ₹5000 ಆಗಿದೆ. ಶಿರಸಿ , ಕಾರವಾರ, ಅಂಕೋಲಾ, ಯಲ್ಲಾಪುರದಂತಹ ಊರುಗಳಿಗೆ ಟಿಕೆಟ್ ಬೆಲೆ 1,400 ರೂ.ನಿಂದ 2000 ಟಿಕೆಟ್ ದರ ಹೆಚ್ಚಳವಾಗಿದೆ. ದೀಪಾವಳಿಗೆ 4 ದಿನಗಳ ಕಾಲ ಸಾಲು ಸಾಲು ರಜೆಯಾದ ಹಿನ್ನಲೆಯಲ್ಲಿ ಇವತ್ತಿನಿಂದಲೇ ಜನ ತಮ್ಮ ತಮ್ಮ ಊರಿಗೆ ತೆರಳಲು ಸಿದ್ದತೆ ನಡೆಸಿದ್ದಾರೆ. ಹೀಗಾಗಿ ಖಾಸಗಿ ಬಸ್ ದರ ಯದ್ವಾ ತದ್ವಾ ಏರಿಕೆ ಮಾಡಿದ್ದು, ಬೆಂಗಳೂರಿನಿಂದ ಮಂಗಳೂರಿಗೆ ಬಸ್ ದರ 3600 ಇದ್ರೆ, ವಿಮಾನ ದರ 3700 ಇದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಸ್ ದರ 5000ರೂ, ವಿಮಾನ ದರ 5500 ಹೆಚ್ಚಳವಾಗಿದೆ.