ಬೆಂಗಳೂರು : ಹಲಾಲ್ ವಿರುದ್ದ ಹೋರಾಟಕ್ಕೆ ಮುಂದಾಗಿದೆ ಎಂದು ಹಿಂದೂ ಸಂಘಟನೆಗಳಿಗೆ ಶ್ರೀರಾಮಸೇನೆ ಕರೆ ನೀಡಿದೆ.
ನಗರದಲ್ಲಿ ಮತ್ತೊಮ್ಮೆ ಮುನ್ನಲೆಗೆ ಬಂತು ಹಲಾಲ್ ಬಾಯ್ಕಾಟ್ ಅಭಿಯಾನ ಆರಂಭವಾಗಿದ್ದು, ಹಲಾಲ್ ಮುಕ್ತ ದೀಪಾವಳಿ ಆಚರಿಸಲು ಅಭಿಯಾನ ಮತ್ತೆ ಶುರುವಾಗಿದೆ. ಪುಸ್ತಕ, ಕರಪತ್ರ, ಮಹಿಳಾ ಮಂಡಳಿಗಳ ಮೂಲಕ ಹಲಾಲ್ ವಿರುದ್ದ ಅಭಿಯಾನ ಈಗಾಗಲೇ ಆರಂಭವಾಗಿದೆ.
ಇನ್ನು, ಈ ಬಾರಿಯ ದೀಪಾವಳಿಗೆ ದೀಪದ ಎಣ್ಣೆ, ಹೂ, ಹಣ್ಣು, ಎಲೆಕ್ಟ್ರಿಷಿಯನ್ ವಸ್ತುಗಳಿಗೆ ಮುಸ್ಲಿಂ ವ್ಯಾಪಾರಿಗಳ ಜೊತೆ ವ್ಯವಹಾರ ಬೇಡ. ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹಿಂದೂಗಳ ಜೊತೆ ವ್ಯವಹಾರ ಮಾಡಿ. ಹಲಾಲ್ ನಿಂದ ಬರುವ ಹಣ ಭಯೋತ್ಪಾದಕರಿಗೆ, ದೇಶದ್ರೋಹಿ ಚಟುವಟಿಕೆಗಳಿಗೆ ಹೋಗ್ತಿದೆ. ಹೀಗಾಗಿ ಮನೆ ಮನೆಗಳಲ್ಲಿ ಹಳ್ಳಿಗಳಲ್ಲಿ, ದೇವಸ್ಥಾನಗಳಲ್ಲಿ ಕರಪತ್ರ ಹಂಚಿ ಬ್ಯಾನರ್ ಹಾಕಿ ಅಭಿಯಾನಕ್ಕೆ ಸಿದ್ದತೆ ನಡೆಸಿದ್ದಾರೆ.
ಅದಲ್ಲದೇ, ಹಿಂದೂಗಳು ಹಲಾಲ್ ಮುಕ್ತ ದೀಪಾವಳಿಗೆ ಕೈ ಜೋಡಿಸುವಂತೆ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ. ಹಾಗಿದ್ರೆ ಈ ಬಾರಿಯ ದೀಪಾವಳಿಗೆ ಹಲಾಲ್ ಬ್ಯಾನ್ ಆಗುತ್ತಾ..? ಮುಸ್ಲಿಂ ವ್ಯಾಪಾರಿಗಳಿಗೆ ಈ ಬಾರಿಯ ದೀಪಾವಳಿ ನಷ್ಟಕ್ಕೆ ತಳ್ಳುತ್ತಾ..? ಹಿಂದೂಗಳ ಅಭಿಯಾನಕ್ಕೆ ಮುಸ್ಲಿಂ ಸಂಘಟನೆಗಳು ಆಕ್ರೋಶಗೊಂಡಿದ್ದಾರೆ.