ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಾಗೂ ಅಕ್ರಮ ಹಣ ವರ್ಗಾವಣೆ ಬಗ್ಗೆ ಇಡಿ(ಜಾರಿ ನಿರ್ದೇಶನಾಲಯ) ಡಿ.ಕೆ ಶಿವಕುಮಾರ್ಗೆ ನೋಟಿಸ್ ನೀಡಿದ ಹಿನ್ನಲೆಯಲ್ಲಿ ಇಂದು ನವದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದರು.
ಡಿಕೆಶಿ ಮಾತನಾಡಿ, ಇಡಿಯವರು ವಿಚಾರಣೆಗೆ ಕರೆದಿದ್ದಾರೆ, ಬಂದಿದ್ದೇನೆ. ಇಡಿಯವವರು ಯಾವ ವಿಚಾರ ಕೇಳುತ್ತಾರೆ ಎಂಬುದು ಗೊತ್ತಿಲ್ಲ. ನನಗೆ ಹಾಗೂ ನನ್ನ ತಮ್ಮನಿಗೆ ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಬಂದಿದ್ದೇವೆ ಎಂದರು.
ಇನ್ನು ಕಾಂಗ್ರೆಸ್ ನೇತೃತ್ವದಲ್ಲಿ ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಇದರ ನೇತೃತ್ವ ವಹಿಸಿಕೊಂಡಿದ್ದೇನೆ. ಇದರ ಹೊರತಾಗಿ ಇಂದು ಕಾನೂನು ಗೌರವಿಸಿ ವಿಚಾರಣೆಗೆ ಹಾಜರಾಗುತ್ತಿದ್ದೇನೆ.
ಕಳೆದ ಎಂಟು ದಿನಗಳ ಇಂದೆ ಇಡಿಯಿಂದ ನೋಟಿಸ್ ಬಂದಿತ್ತು. ಅ. 23 ರ ನಂತರ ವಿಚಾರಣಗೆ ಹಾಜರಾಗುತ್ತೇನೆ ಎಂದಿದ್ದೆ, ಇದಕ್ಕೆ ನಿರಾಕರಿಸಿ ಇಂದು ವಿಚಾರಣೆಗೆ ಹಾಜರಾಗುವಂತೆ ಈ ಮೇಲ್ ಮೂಲಕ ನನಗೆ ಕೇಳಿಕೊಂಡಿತ್ತು. ಹೀಗಾಗಿ ಇಂದು ವಿಚಾರಣೆಗೆ ಹಾಜರಾಗುತ್ತೇನೆ.