Tuesday, November 26, 2024

ಬಾಲಿವುಡ್ ಹಾಸ್ಯನಟ ರಾಜು ಶ್ರೀವಾಸ್ತವ್​ ಇನ್ನಿಲ್ಲ

ಮುಂಬೈ: ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ (ಏಮ್ಸ್) ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಲಿವುಡ್​ ಹಿರಿಯ ಹಾಸ್ಯನಟ ರಾಜು ಶ್ರೀವಾಸ್ತವ್ ನಿಧನರಾಗಿದ್ದಾರೆ.

ರಾಜು ಶ್ರೀವಾಸ್ತವ್ (58) ಅವರಿಗೆ ಆಗಸ್ಟ್ 10 ರಂದು ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುವಾಗ ಹೃದಯಾಘಾತವಾಗಿತ್ತು. ಈ ಹಿನ್ನಲೆಯಲ್ಲಿ ದೆಹಲಿಯ ಏಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ರಾಜು ಶ್ರೀವಾಸ್ತವ್​ ಮೃತಪಟ್ಟಿದ್ದಾರೆ.

ಕಾಮಿಕ್ ರಾಜು ಎಂದೇ ಬಾಲಿವುಡ್​ನಲ್ಲಿ ಖ್ಯಾತಿಗಳಿಸಿದ್ದರು. ರಾಜು ಶ್ರೀವಾಸ್ತವ ಅವರನ್ನ ಏಮ್ಸ್‌ನಲ್ಲಿ ಲೈಫ್ ಸಪೋರ್ಟ್ ಸಿಸ್ಟಮ್‌ನಲ್ಲಿದ್ದರು. ಹಾಸ್ಯನಟ 15 ದಿನಗಳ ನಂತರ ವೆಂಟಿಲೇಟರ್ ಬೆಂಬಲದ ಮೇಲೆ ಪ್ರಜ್ಞೆಯನ್ನು ಮರಳಿ ಪಡೆದರು. ಸೆಪ್ಟೆಂಬರ್ 1 ರಂದು ಅವರಿಗೆ ಅತೀ ಜ್ವರ ಕಾಣಿಸಿದ ಹಿನ್ನೆಲೆಯಲ್ಲಿ ಮತ್ತೆ ಅವ್ರನ್ನ ವೆಂಟಿಲೇಟರ್​​ನಲ್ಲಿ ಇರಿಸಲಾಯಿತು.

ಶ್ರೀವಾಸ್ತವ ಅವರು 1980 ರ ದಶಕದಲ್ಲಿ ಬಾಲಿವುಡ್​ನಲ್ಲಿ ಹಾಸ್ಯನಟನಾಗಿ ಖ್ಯಾತಿ ಪಡೆದರು. ಬಳಿಕ 2005 ರಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ಶೋ “ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್” ನ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ ನಂತರ ಮನ್ನಣೆ ಪಡೆದರು. ಅವರು ‘ಮೈನೆ ಪ್ಯಾರ್ ಕಿಯಾ’, ‘ಆಮ್ದಾನಿ’ ಮುಂತಾದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

RELATED ARTICLES

Related Articles

TRENDING ARTICLES