ಬೆಂಗಳೂರು : ಚಾಮರಾಜಪೇಟೆ ಮೈದಾನದಲ್ಲಿ ಈಗ ಗಣಪನ ಪ್ರತಿಷ್ಠಾಪನೆಯ ಕದನ ಕ್ಲೈಮಾಕ್ಸ್ ಹಂತಕ್ಕೆ ತಲುಪುತ್ತಿದೆ. ಹಬ್ಬಕ್ಕೆ ಕೌಂಟ್‌ಡೌನ್ ಶುರುವಾಗಿದ್ರೂ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ, ಈ ಮಧ್ಯೆ ನಾಗರಿಕರ ಒಕ್ಕೂಟ ಕಮಲ ನಾಯಕರ ಕದ ತಟ್ಟುತ್ತಿದೆ. ಮಂಗಳವಾರ ಸಿ.ಟಿ. ರವಿ CM ಬೊಮ್ಮಾಯಿಗೆ ಪತ್ರ ಬರೆದಿದ್ದು, ಬುಧವಾರ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ CM ಮನೆಗೆ ಭೇಟಿ ನೀಡಿ ಗಣೇಶೋತ್ಸವ ಇಲ್ಲಿ ಮಾಡೇ ಮಾಡ್ತೀವಿ.ಸ್ಥಳೀಯ ಶಾಸಕ ಜಮೀರ್ ಹೆಚ್ಚು ತಲೆಹರಟೆ ಮಾಡಬಾರದು.ಇದು ಅವ್ರ ಜಾಗ ಅಲ್ಲ ಅಂತಾ ರೋಷಾವೇಶ ವ್ಯಕ್ತಪಡಿಸಿದ್ರು.
ಇನ್ನು ಸಚಿವ ಆರ್.ಆಶೋಕ್‌ರನ್ನು ಕೂಡ ಒಕ್ಕೂಟ ಭೇಟಿಯಾಗಿದ್ದು, ಸಿಎಂ ಜೊತೆ ಅಂತಿಮ ಸಭೆ ನಡೆಸಿ ಇನ್ನೆರಡು ದಿನದಲ್ಲಿ ಹೇಳ್ತೀನಿ ಅಂತಾ ಆಶೋಕ್ ಹೇಳಿದ್ದಾರೆ. ಹಬ್ಬ ಸನಿಹವಾಗುತ್ತಿದೆ ನಾವು ಸಿದ್ಧತೆ ಮಾಡಿಕೊಳ್ಳಬೇಕು. ಆದ್ರೇ ಅನುಮತಿ ವಿಳಂಬವಾಗುತ್ತಿದೆ. ಹೀಗಾಗಿ ನಾವು ಇನ್ನೆರಡು ದಿನ ಕಾದು ಆಮೇಲೆ ಸಿಎಂ ಭೇಟಿ ಮಾಡ್ತೀವಿ ಅಂತ ನಾಗರೀಕರ ಒಕ್ಕೂಟ ತಿಳಿಸಿದೆ.
ಇನ್ನು ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಕೂಡಾ ಪ್ರತಿಕ್ರಿಯಿಸಿದ್ದು, ಸರ್ಕಾರ ನಿರ್ಧಾರ ತೆಗೆದುಕೊಳ್ಳಲು ಇನ್ನೂ ಸಮಯವಿದೆ. ಸರ್ಕಾರ ಗಣೇಶೋತ್ಸವಕ್ಕೆ ಅನುಮತಿ ಕೊಡುವ ವಿಶ್ವಾಸ ಇದೆ.ಚಾಮರಾಜಪೇಟೆಯಲ್ಲಿ ಗಣೇಶೋತ್ಸವಕ್ಕೆ ಅನುಮತಿ ಕೊಡಬೇಕು ಅನ್ನೋದಕ್ಕೆ ಪಕ್ಷದ ಆಗ್ರಹವೂ ಇದೆ.ಮೈದಾನದಲ್ಲಿ ರಾಷ್ಟ್ರಧ್ವಜ ಹಾರ್ತಿರ್ಲಿಲ್ಲ, ಈಗ ಹಾರುತ್ತಿದೆ. ಇದೂ ಒಂದು ಸಾಧನೆಯೇ ಅಲ್ವಾ ? ಎಂದಿದ್ದಾರೆ.
ಒಟ್ಟಾರೆ ಗಣೇಶೋತ್ಸವ ಮಾರ್ಗಸೂಚಿ ಪ್ರಕಟವಾಯ್ತು..! ಆದ್ರೇ ಚಾಮರಾಜಪೇಟೆ ಮೈದಾನದ ಗಣಪನ ಪ್ರತಿಷ್ಠಾಪನೆ ಮಾತ್ರ ಪ್ರಶ್ನೆಯಾಗಿದ್ದು, ಸರ್ಕಾರವೇ ಗಣೇಶೋತ್ಸವ ನಡೆಸುತ್ತಾ ಇಲ್ಲಾ ನಾಗರೀಕರಿಗೆ ಗಣೇಶೋತ್ಸವ ಆಚರಣೆ ಮಾಡಲು ಅನುಮತಿ ನೀಡುತ್ತಾ ? ಅನ್ನೋ ಕುತೂಹಲ ಕೆರಳಿಸಿದೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು