Monday, December 23, 2024

ಬೆಂಗಳೂರಿನಲ್ಲಿ 2022 ರ ಸೈಮಾ ಅವಾರ್ಡ್ ಪ್ರಶಸ್ತಿ ಸಮಾರಂಭ.!

ಬೆಂಗಳೂರು: ದೇಶದ ಸಿನಿಮಾ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯ ಪ್ರಶಸ್ತಿ ಸಮಾರಂಭಗಳಲ್ಲಿ ಒಂದಾಗಿರುವ ಸೈಮಾ ಅವಾರ್ಡ್​ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ.

ಪ್ರತಿ ವರ್ಷ ಈ ಪ್ರಶಸ್ತಿ ಸಮಾರಂಭವು ದಕ್ಷಿಣ ಭಾರತದಲ್ಲಿ ನಡೆಯುತ್ತಿತ್ತು. ಈ ಬಾರಿಯ 10 ನೇ ಸೈಮಾ ಅವಾರ್ಡ್​ ಸಮಾರಂಭ ಈ ವರ್ಷ ಸೆಪ್ಟೆಂಬರ್ 10 ಹಾಗೂ 11 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಸೈಮಾ ಅಧಿಕೃತ ಟ್ವೀಟರ್​ನಲ್ಲಿ ತಿಳಿಸಿದೆ.

ದಕ್ಷಿಣ ಭಾರತದ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳ ಸಿನಿಮಾಗಳಲ್ಲಿ ಸಾಧನೆಗೈದವರನ್ನ ಗುರುತಿಸಿ ಸೈಮಾ ಅವಾರ್ಡ್​ ವತಿಯಿಂದ ಪ್ರಶಸ್ತಿ ನೀಡಲಾಗುತ್ತದೆ. ಕಳೆದ ಬಾರಿ ಈ ಪ್ರಶಸ್ತಿ ಸಮಾರಂಭವು ಹೈದರಾಬಾದ್‌ನ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದಿತ್ತು. ಈ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದ 2012 ರಲ್ಲಿ ಪ್ರಾರಂಭವಾಯಿತು.

RELATED ARTICLES

Related Articles

TRENDING ARTICLES