Friday, November 22, 2024

‘ವಿಜಯಾನಂದ’ ವಿಜಯಯಾತ್ರೆಗೆ ಕ್ರೇಜಿ ದಾದಾ ಟಿಪ್ಸ್

ಕನ್ನಡಿಗರ ಕುರಿತ ಬಯೋಪಿಕ್​​ ಚಿತ್ರಗಳು ಸಾಲು ಸಾಲು ನ್ಯಾಷನಲ್ ಅವಾರ್ಡ್ಸ್ ಪಡೆದುಕೊಳ್ತಿರೋ ಟ್ರೆಂಡ್ ಇದು. ಅದ್ರಲ್ಲೂ ಸದಾ ವೆರೈಟಿ ಕಥಾನಕಗಳಿಂದ ಚಿತ್ರರಂಗ ಸಮೃದ್ಧವಾಗಿ ಬೆಳೆಯುತ್ತಿದೆ. ಇಂತಹ ಸುವರ್ಣ ಯುಗದಲ್ಲಿ ವಿಜಯಾನಂದ ಸಿನಿಮಾ ಬರ್ತಿದೆ. ನೈಜ ಘಟನೆಯನ್ನಾಧರಿಸಿ ಬರ್ತಿರೋ ಸಾಧಕನ ಕುರಿತ ಈ ಚಿತ್ರದ ಟೀಸರ್ ಸಿಕ್ಕಾಪಟ್ಟೆ ಕ್ರೇಜ್ ಹೆಚ್ಚಿಸಿದೆ.

  • ಇದು VRL ಲಾಜಿಸ್ಟಿಕ್ಸ್​​ನ ಏಳು ಬೀಳಿನ ರೋಚಕ ಜರ್ನಿ
  • ನಿಹಾಲ್ ಜೊತೆ ಕ್ರೇಜಿಸ್ಟಾರ್ & ಅನಂತ್​ನಾಗ್ ಕಮಾಲ್
  • ದೇಶವೇ ಹೆಮ್ಮೆ ಪಡೋ ವಿಜಯಾನಂದರ ಸ್ಫೂರ್ತಿ ಕಥೆ

ಮನರಂಜನೆಯಷ್ಟೇ ಸಿನಿಮಾವೊಂದರ ಮೂಲ ಉದ್ದೇಶ ಆಗಿರಬಾರದು. ಹಾಗೆ ಆದಲ್ಲಿ ಅದು ಪರಿಪೂರ್ಣ ಅನಿಸಿಕೊಳ್ಳಲ್ಲ. ಅದ್ರಿಂದ ಒಂದು ಗಟ್ಟಿಯಾದ ಸಾಮಾಜಿಕ ಸಂದೇಶ ಇರಬೇಕು. ಸಿನಿಮಾ ಕಣ್ತುಂಬಿಕೊಂಡು ಹೊರಬರೋ ಅಂತಹ ಪ್ರೇಕ್ಷಕ, ಯಾವುದೋ ಒಂದು ಪಾಯಿಂಟ್​ನಿಂದ ಸ್ಫೂರ್ತಿಗೊಳ್ಳುವಂತಿರಬೇಕು. ಸದ್ಯ ಅಂತಹ ಸಿನಿಮಾಗಳ ಸಾಲಿಗೆ ಸೇರಬಲ್ಲ ಸಿನಿಮಾವೊಂದು ಟೀಸರ್​ನಿಂದ ಸದ್ದು ಮಾಡ್ತಿದೆ. ಅದೇ ವಿಜಯಾನಂದ.

ಯೆಸ್.. ವಿಜಯಾನಂದ ಎಲ್ರಿಗೂ ಗೊತ್ತಿರೋ ಹಾಗೆ ಇಂಡಿಯಾದ ಬಿಗ್ಗೆಸ್ಟ್ ಲಾಜಿಸ್ಟಿಕ್ಸ್ ಕಂಪೆನಿ ವಿಆರ್​ಎಲ್​​ ಕುರಿತ ಬಯೋಪಿಕ್. ರೀಸೆಂಟ್ ಆಗಿ ನಮ್ಮ ಕನ್ನಡದ ಕ್ಯಾಪ್ಟನ್ ಗೋಪಿನಾಥ್​ರ ಬಯೋಪಿಕ್ ಸೂರರೈ ಪೋಟ್ರುಗೆ ಮೂರು ನ್ಯಾಷನಲ್ ಅವಾರ್ಡ್ಸ್ ಬಂದವು. ಕಡು ಕಷ್ಟಗಳನ್ನು ಎದುರಿಸಿ, ಸಾಧನೆಯ ಶಿಖರವೇರಿರೋ ಯಾವುದೇ ವ್ಯಕ್ತಿಯ ಚಿತ್ರ ಬೆಳ್ಳಿ ಪರದೆ ಬೆಳಗಿದ್ರೆ ಅದು ಸಮಾಜಕ್ಕೆ ಸಂದೇಶವೇ ಆಗಲಿದೆ. ಇದೀಗ ಆ ನಿಟ್ಟಿನಲ್ಲಿ ವಿಜಯದತ್ತ ವಿಜಯಾನಂದ ಮುನ್ನುಗ್ಗುತ್ತಿದೆ.

ಈ ಹಿಂದೆ ಟ್ರಂಕ್ ಅನ್ನೋ ಸಿನಿಮಾ ಮಾಡಿದ್ದ ಜಿವಿ ಅಯ್ಯರ್​ರ ಮೊಮ್ಮಗಳು ರಿಷಿಕಾ ಶರ್ಮಾ ಈ ಚಿತ್ರಕ್ಕೆ ಌಕ್ಷನ್ ಕಟ್ ಹೇಳ್ತಿದ್ದು, ಕನ್ನಡಿಗನ ಹೆಮ್ಮೆಯ ಕಥೆಯನ್ನ ಪ್ಯಾನ್ ಇಂಡಿಯಾಗೆ ತಲುಪಿಸೋ ಕಾರ್ಯ ಮಾಡ್ತಿದ್ದಾರೆ. ನಿಹಾಲ್ ನಾಯಕನಟನಾಗಿ ವಿಜಯ್ ಸಂಕೇಶ್ವರ್ ಪಾತ್ರಕ್ಕೆ ಜೀವ ತುಂಬುತ್ತಿದ್ದು, ಬಿಜಿ ಸಂಕೇಶ್ವರ್ ಪಾತ್ರದಲ್ಲಿ ನಮ್ಮ ಎವರ್​ಗ್ರೀನ್ ಹೀರೋ ಅನಂತ್​ ನಾಗ್ ಮಿಂಚಲಿದ್ದಾರೆ. ಇನ್ನು ವಿಜಯ್ ಅವ್ರ ಕನಸಿಗೆ ರೆಕ್ಕೆ ಕಟ್ಟಿ, ಹುರುದುಂಬಿಸೋ ದಾದಾ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಗಮನ ಸೆಳೆದಿದ್ದಾರೆ.

ಒಂದೇ ಒಂದು ಟ್ರಕ್​ನಿಂದ ಶುರುವಾದ ಇವ್ರ ಜರ್ನಿ ಕೊನೆಗೆ ಸಾವಿರಾರು ಬಸ್​​ಗಳು, ಟ್ರಕ್​ಗಳವರೆಗೆ ಬಂದು ನಿಲ್ಲುತ್ತೆ. ತಂದೆಗೆ ಇಷ್ಟವಿಲ್ಲದಿದ್ರೂ, ಮಗನ ದಿಟ್ಟ ನಿರ್ಧಾರ ಮಾತ್ರ ಎಂದೂ ಬದಲಾಗಲ್ಲ.  ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಿಂದ ಶುರುವಾದ ಗದಗ ಮೂಲದ ವಿಜಯ್ ಸಂಕೇಶ್ವರ್ ಅವ್ರ ಲಾಜಿಸ್ಟಿಕ್ ಯಾತ್ರೆ, ಇಂದು ದೇಶವೇ ಮೆಚ್ಚುವಂತಹ ಮಟ್ಟಕ್ಕೆ ಮುಗುಲೆತ್ತರ ಬೆಳೆದು ನಿಂತಿದೆ. ಅದ್ರ ಹಿಂದೆ ಅವ್ರ ಶ್ರಮ, ಬೆವರು, ನೆತ್ತರು, ಊಟ, ನಿದ್ದೆಯಿಲ್ಲದ ಅದೆಷ್ಟೋ ದಿನಗಳಿವೆ. ಅವಮಾನ, ಅಪಮಾನಗಳಿವೆ.

ಟೀಸರ್ ಸಖತ್ ಪ್ರಾಮಿಸಿಂಗ್ ಆಗಿದ್ದು, ಏನನ್ನಾದರು ಸಾಧಿಸಬೇಕು ಅಂತ ಪಣತೊಟ್ಟ ಮನಸ್ಸುಗಳಿಗೆ ಇದು ಪ್ರೇರಣೆ ಆಗಲಿದೆ. ಟೆಕ್ನಿಕಲಿ ಚಿತ್ರ ಸ್ಟ್ರಾಂಗ್ ಆಗಿ ಮೂಡಿಬಂದಿದ್ದು, ಪ್ರಾಮಿಸಿಂಗ್ ಸಿನಿಮಾ ಆಗಿ ಹೊರಹೊಮ್ಮಲಿದೆ. ರಿಷಿಕಾ ಅವ್ರ ನಿರ್ದೇಶನಾ ಕೌಶಲ್ಯ ಚಿತ್ರದ ಪ್ರತಿ ಫ್ರೇಮ್​ನಲ್ಲೂ ಎದ್ದು ಕಾಣ್ತಿದೆ. ಇನ್ನು ಸದ್ಯದಲ್ಲೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಲಿದ್ದು, ಪಾತ್ರಗಳು ಅವುಗಳ ಹಿಂದಿನ ಶ್ರಮ ಎಲ್ಲರನ್ನು ಕಾಡಲಿದೆ. ಆನಂದ್ ಸಂಕೇಶ್ವರ್ ಅವ್ರ ನಿರ್ಮಾಣ ಚಿತ್ರಕ್ಕಿದ್ದು, ಒಂದೊಳ್ಳೆ ಸದಭಿರುಚಿಯ ಸಿನಿಮಾ ಆಗಿ ಮೂಡಿಬರುತ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES