Friday, November 22, 2024

ಶಕ್ತಿಧಾಮದ ಮಕ್ಕಳ ಜತೆಯಲ್ಲಿ ಮಗುವಾದ ಭಜರಂಗಿ

ನನ್ನ ಉಸಿರು ಇರೋವರೆಗೂ ಶಕ್ತಿಧಾಮದ ಮಕ್ಕಳನ್ನು ಕೈ ಬಿಡೋದಿಲ್ಲ ಎಂದಿದ್ದ ದೊಡ್ಮನೆಯ ಹೆಮ್ಮೆಯ ಸುಪುತ್ರ ಡಾ.ಶಿವಣ್ಣ ನುಡಿದಂತೆ ನಡೆಯುತ್ತಿದ್ದಾರೆ. ಅಪ್ಪಾಜಿ ಕಟ್ಟಿದ, ಅಪ್ಪು ಬೆಳೆಸಿ ಉಳಿಸಿದ ಶಕ್ತಿಧಾಮದ ಶಕ್ತಿಯಾಗಿ, ಯುಕ್ತಿಯಾಗಿ ಹ್ಯಾಟ್ರಿಕ್​​ ಹೀರೋ ನಿಂತಿದ್ದಾರೆ. ಭಜರಂಗಿಗೆ ಸಿನಿಮಾ ಜತೆಗೆ ಜೀವನದ ಬಹುಮುಖ್ಯ ಭಾಗ ಶಕ್ತಿಧಾಮವಾಗಿದೆ.

ಶಕ್ತಿಧಾಮದ ಮಕ್ಕಳ ಜತೆಯಲ್ಲಿ ಮಗುವಾದ ಭಜರಂಗಿ

ಮುದ್ದು ಮಕ್ಕಳಿಗೆ ಸಸ್ಯಕಾಶಿ ತೋರಿಸಿದ ಹ್ಯಾಟ್ರಿಕ್​ ಹೀರೋ

ಸಸ್ಯಕಾಶಿಯಲ್ಲಿ ಗಾಜನೂರಿನ ಡಾ.ರಾಜ್​​ ಮಾದರಿ ನಿವಾಸ

ಮನೆಯಂಗಳದಲ್ಲಿ ಅಪ್ಪು ಜತೆ ಡಾ.ರಾಜ್​​​ ಕುಶಲೋಪರಿ

ಸ್ಯಾಂಡಲ್​ವುಡ್​​ ಬೈರಾಗಿ ಶಿವರಾಜ್​ಕುಮಾರ್​ ಶಕ್ತಿಧಾಮದ ಮಕ್ಕಳೊಂದಿಗೆ ಸದಾ ಸಮಯ ಕಳೆಯುತ್ತಾರೆ. ಗೀತಾ ಶಿವರಾಜ್​​ಕುಮಾರ್​ ಹೆತ್ತ ತಾಯಿಯಂತೆ ಮಕ್ಕಳ ಆರೋಗ್ಯ, ಶಿಕ್ಷಣ, ಭವಿಷ್ಯದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಇದ್ರ ಜತೆಗೆ ಬಂಗಾರ ಸನ್​ ಆಫ್​ ಬಂಗಾರದ ಮನುಷ್ಯ ಡಾ.ಶಿವಣ್ಣ ಅಕ್ಷರಶಃ ಮಗುವಾಗಿದ್ದಾರೆ. ಬಿಡುವಿನ ಸಮಯ ಸಿಕ್ಕಾಗಲೆಲ್ಲಾ ಅವರಿಗೆ ನೆನಪಾಗೋದು ಮೈಸೂರಿನ ಶಕ್ತಿಧಾಮ. ಮಕ್ಕಳು ನೆನಪಾದ ತಕ್ಷಣ ಓಡಿ ಹೋಗಿ ಭೇಟಿ ಮಾಡಿ ಬರುತ್ತಾರೆ.

ದೇವತಾ ಮನುಷ್ಯ, ಬೆಟ್ಟದ ಹೂ ಅಪ್ಪು ಅಗಲಿಕೆ ನಂತ್ರ ಶಿವಣ್ಣ ಶಕ್ತಿಧಾಮದ ಮಕ್ಕಳ ಸಂಪೂರ್ಣ ಜವಾಬ್ದಾರಿಯ ಹೊಣೆ ಹೊತ್ತಿದ್ದಾರೆ. ಮಕ್ಕಳನ್ನು ಬೆಂಗಳೂರಿಗೆ ಕರೆತಂದಿರುವ ಶಿವಣ್ಣ ಸಸ್ಯಕಾಶಿ ಲಾಲ್​ಬಾಗ್​ ತೋರಿಸಿದ್ದಾರೆ. ಮಕ್ಕಳೊಂದಿಗೆ ಗೀತಾ ಶಿವರಾಜ್​ಕುಮಾರ್​​​, ಶಿವಣ್ಣ ಮಕ್ಕಳ ಜತೆಯಾಗಿ ಲಾಲ್​ಬಾಗ್​​ ಪರಿಚಯ ಮಾಡಿಸಿದ್ದಾರೆ. ಇದ್ರ ಜತೆಯಲ್ಲಿ ಪ್ಲಾನಿಟೋರಿಯಂ ಕೂಡ  ಮಕ್ಕಳಿಗೆ ತೋರಿಸಿದ್ದು ಶಕ್ತಿದಾಮದ ಮಕ್ಕಳ ಜತೆ ತಾವೂ ಮಗುವಾಗಿದ್ದಾರೆ.

ಪ್ರತಿ ಬಾರಿಯೂ ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಪ್ರವಾಸವನ್ನು ಕಲ್ಪಿಸುವ ದೊಡ್ಮನೆಯ ಫ್ಯಾಮಿಲಿ ಮಕ್ಕಳಿಗೆ ಪಠ್ಯದ ಜತೆಗೆ ಸಹಪಠ್ಯ ಚಟುವಟಿಗಳಿಗೆ ಅವಕಾಶ ಮಾಡಿಕೊಡುತ್ತಿದೆ. ಕಳೆದ ಬಾರಿ ನಂದಿ ಹಿಲ್ಸ್​​​ ಜತೆ ಬೇರೆ ಸ್ಥಳಗಳನ್ನು ತೋರಿಸಿದ್ದ ಶಿವಣ್ಣ ಈ ಬಾರಿ ಲಾಲ್​ಬಾಗ್​ ತೋರಿಸಿದ್ದಾರೆ. ಇದ್ರ ಜತೆಯಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಸೆಂಚುರಿ ಸ್ಟಾರ್​​​​​​, ಅಪ್ಪಾಜಿ ಶೂಟಿಂಗ್​ ಸಮಯದಲ್ಲಿ ಇಲ್ಲಿಗೆ ಬರ್ತಿದ್ದೆ ಎಂದ್ರು.

ಇದ್ರ ಜತೆಯಲ್ಲಿ ಈ ಬಾರಿ ಫಲಪುಷ್ಪ ಪ್ರದರ್ಶನ ಅದ್ಧೂರಿಯಾಗಿ ನಡೆಯಲಿದೆ. ಸಸ್ಯಕಾಶಿಯಲ್ಲಿ ರಾಜ್​​ಕುಮಾರ್​​ ಅವ್ರ ಸಂದೇಶವನ್ನು ಬಿಂಬಿಸುವ ಪ್ರಯತ್ನ ನಡಿತೀದೆ. ಅಷ್ಟೇ ಅಲ್ಲದೆ ಗಾಜನೂರಿನ ಡಾ.ರಾಜ್ ಹುಟ್ಟಿದ ಮನೆ ಮಾದರಿಯನ್ನು ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ. ಮನೆ ಅಂಗಳದಲ್ಲಿ ರಾಜ್​​​​ಕುಮಾರ್ ಜತೆ ಅಪ್ಪು ಕುಳಿತಿರುವ ಮಾದರಿ ಈ ಬಾರಿಯ ಫಲಪುಷ್ಪ ಪ್ರದರ್ಶನದ ಹೈಲೈಟ್ ಆಗಲಿದೆಯಂತೆ.

ನಮಗೆ ದುಃಖ ಆದಾಗಲೆಲ್ಲಾ ಶಕ್ತಿಧಾಮಕ್ಕೆ ಬರ್ತೀವಿ. ಅಪ್ಪುನ ಈ ಮಕ್ಕಳಲ್ಲಿ ನೋಡ್ತೀವಿ. ಇಲ್ಲಿನ ಮಕ್ಕಳಲ್ಲಿ ಕೆಲವರು ಅಣ್ಣ ಅನ್ನುತ್ತಾರೆ, ಕೆಲವರು ಅಪ್ಪ ಅನ್ನುತ್ತಾರೆ. ನನ್ನ ಉಸಿರು ಇರೋವರೆಗೂ ಶಕ್ತಿಧಾಮ ಬಿಡಲ್ಲ. ಅಪ್ಪಾಜಿ ಕಟ್ಟಿದ ಶಕ್ತಿಧಾಮಕ್ಕೆ ಯುಕ್ತಿಯಾಗಿ ನಿಲ್ಲುತ್ತೇನೆ ಎಂದು  ಮಾತು ಕೊಟ್ಟಿದ್ದ ಡಾ.ಶಿವಣ್ಣ ಈ ಆತನ್ನು ಚಾಚು ತಪ್ಪದೇ ಉಳಿಸಿಕೊಂಡು ಬರುತ್ತಿದ್ದಾರೆ. ಮಗುವಿನ ಮನಸಿರೋ ಒಡೆಯ ಶಿವಣ್ಣ ಅವ್ರ ಈ ಮುಗ್ಧ ಮನಸ್ಸಿಗೆ ಸರಿಸಾಟಿ ಯಾರು ಇಲ್ಲ. ಇನ್ನೂ ಒಳ್ಳೆ ಕೆಲಸಗಳನ್ನು ಮಾಡುವ ಆಯಸ್ಸು, ಶಕ್ತಿ ಆ ಭಗವಂತ ಕಲ್ಪಿಸಲಿ.

ರಾಕೇಶ್ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES