Friday, November 22, 2024

ಈ ವರ್ಷದ ಐದು ಇಂಡಸ್ಟ್ರಿ ಹಿಟ್ಸ್​ನಲ್ಲಿ ಕೆಜಿಎಫ್​​ಗೆ ಅಗ್ರಸ್ಥಾನ

ಡೇಂಜರ್ ಅಹೆಡ್.. ಮುಂದೆ ಅಪಾಯವಿದೆ ಅನ್ನೋದನ್ನ ಕೆಜಿಎಫ್ ಟೀಂ ಹೇಳಿದಾಗ ಅದನ್ನ ಬಹುತೇಕ ಮಂದಿ ಹಗುರವಾಗಿ ಭಾವಿಸಿದ್ರು. ಅದು ಭಯವನ್ನೂ ನಡುಗಿಸೋ ಭೀಭತ್ಸ ಮಾನ್​ಸ್ಟರ್ ಎಂಟರ್​ಟೈನರ್ ಅನ್ನೋದನ್ನ ಪ್ರೂವ್ ಮಾಡಿದೆ. ಟಾಪ್ ಫೈವ್ ಇಂಡಿಯನ್ ಮೂವೀಸ್ ಲಿಸ್ಟ್​ನಲ್ಲಿ ಅಗ್ರಸ್ಥಾನದಲ್ಲಿ ರಾರಾಜಿಸ್ತಿದೆ. ಕನ್ನಡಿಗರ ಗತ್ತು ಇಡೀ ವಿಶ್ವ ಸಿನಿದುನಿಯಾಗೆ ಗೊತ್ತಾಗೋದ್ರ ಹಿಂದಿನ ಅಸಲಿಯತ್ತು ನಿಮ್ಮ ಮುಂದೆ.

ಈ ವರ್ಷದ ಐದು ಇಂಡಸ್ಟ್ರಿ ಹಿಟ್ಸ್​ನಲ್ಲಿ ಕೆಜಿಎಫ್​​ಗೆ ಅಗ್ರಸ್ಥಾನ

2ನೇ ಶ್ರೇಯಾಂಕಕ್ಕೆ RRR.. 3ನೇ ಸ್ಥಾನದಲ್ಲಿ ವಿಕ್ರಮ್ ಕಮಾಲ್

ಕಾಣುವ ಕನಸು ದೊಡ್ಡದಾಗೇ ಇರಬೇಕು ಅನ್ನೋ ರಾಕಿಭಾಯ್ ಯಶ್ ಮಾತು ಅಕ್ಷರಶಃ ನಿಜ. ಅದಕ್ಕೆ ಪ್ರತ್ಯಕ್ಷ ನಿದರ್ಶನ ಕೆಜಿಎಫ್ ಚಾಪ್ಟರ್-2 ಯಶಸ್ಸು. ಹೌದು.. ಕನ್ನಡ ಸಿನಿಮಾವೊಂದು ಮಾರುಕಟ್ಟೆ ಜೊತೆ ಭಾಷೆ, ಗಡಿಯ ಹಂಗಿಲ್ಲದೆ ಭಾರತೀಯ ಚಿತ್ರರಂಗದ ಎಲ್ಲಾ ಕೋಟೆ ಕೊತ್ತಲುಗಳನ್ನ ಆವರಿಸೋದು ನಿಜಕ್ಕೂ ಸಾಮಾನ್ಯ ವಿಷಯವಲ್ಲ.

ಬಾವಿಯಂತಿದ್ದ ಕನ್ನಡ ಚಿತ್ರರಂಗವನ್ನು ಅದು ಬಾವಿಯಲ್ಲ ಸಮುದ್ರ ಅಂತ ತೋರಿಸಿದ್ದೇ ಯಶ್, ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಗಂದೂರು ಅನ್ನೋ ಮೂರು ಮಾಸ್ಟರ್​ಮೈಂಡ್​ಗಳು. ಇವ್ರ ಪ್ಯಾಷನ್ ಮತ್ತು ವಿಷನ್ ಒಂದೇ ಆಗಿದ್ದರಿಂದ ಕೆಜಿಎಫ್ ಅನ್ನೋ ಮಾಸ್ಟರ್​ಪೀಸ್ ತಯಾರಾಯ್ತು. ಜಗಮೆಚ್ಚೋ ಸಿನಿಮಾ ಆಯ್ತು. ಸಾರ್ವಕಾಲಿಕ ದಾಖಲೆ ಬರೆಯೋ ಮೂಲಕ ಈ ವರ್ಷದ ಇಂಡಿಯನ್ ಸಿನಿಮಾದ ನಂಬರ್ ಒನ್ ಚಿತ್ರವಾಗಿ ರಾರಾಜಿಸಿತು.

ಸದ್ಯ ಈ ವರ್ಷದ ಟಾಪ್ ಫೈವ್ ಇಂಡಿಯನ್ ಮೂವೀಸ್ ಯಾವ್ಯಾವು..? ಅವುಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಅನ್ನೋದನ್ನ ಕ್ವಿಕ್ ಆಗಿ ತೋರಿಸಿಬಿಡ್ತೀವಿ ನೋಡಿ.

ಯೆಸ್.. ಇವೇ ಈ ವರ್ಷದ ಟಾಪ್ ಫೈವ್ ಇಂಡಿಯನ್ ಮೂವೀಸ್. ಇದು ಬರೀ ಬಾಕ್ಸ್ ಆಫೀಸ್ ಕಲೆಕ್ಷನ್​ನಲ್ಲಷ್ಟೇ ಅಲ್ಲ, ಜನರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದು ಸಿನಿಮಾಗಳೂ ಹೌದು. ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸೋದ್ರ ಜೊತೆ ಗೂಗಲ್ ಸರ್ಚ್​ ಇಂಜಿನ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಸೆನ್ಸೇಷನಲ್ ಬ್ಲಾಕ್ ಬಸ್ಟರ್ ಹಿಟ್ಸ್.

ಕೆಜಿಎಫ್ ಸಿನಿಮಾದ ಮಾಸ್ ಎಲಿಮೆಂಟ್ಸ್, ಸ್ಟಾರ್ ಕಾಸ್ಟ್, ಮದರ್ ಸೆಂಟಿಮೆಂಟ್, ಲವ್, ಌಕ್ಷನ್, ಎಮೋಷನ್ ಹೀಗೆ ಎಲ್ಲವೂ ಚಿತ್ರದ ಬಹುದೊಡ್ಡ ಗೆಲುವಿಗೆ ಸಾಕ್ಷಿ ಆಯ್ತು. ಎಲ್ಲಕ್ಕಿಂತ ಮಿಗಿಲಾಗಿ ಯಶ್ ಸ್ವ್ಯಾಗ್ ಹಾಗೂ ನೀಲ್ ಮೇಕಿಂಗ್ ಮೊಹಬ್ಬತ್ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಯ್ತು. ಹಾಗಾಗಿಯೇ ಅದು ನಂಬರ್ ಒನ್ ಆಯ್ತು. ರಾಜಮೌಳಿಯ ಮಲ್ಟಿಸ್ಟಾರರ್ ತ್ರಿಬಲ್ ಆರ್ ಎರಡನೇ ಸ್ಥಾನ ಹಾಗೂ ಕಮಲ್ ಹಾಸನ್​ರ ವಿಕ್ರಮ್ ಮೂರನೇ ಸ್ಥಾನ ಅಲಂಕರಿಸಿತು.

ಮೊದಲ ಮೂರು ಸಿನಿಮಾಗಳು ಸಹ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗಗಳಿಂದ ಇಂಡಿಯನ್ ಸಿನಿದುನಿಯಾನ ಆಳಿದ್ದು ಇಂಟರೆಸ್ಟಿಂಗ್. ಸೌತ್ ಮೇಕರ್ಸ್​ ಕ್ರಿಯೇಟಿವಿಟಿ ಹಾಗೂ ಎಕ್ಸಿಕ್ಯೂಷನ್​ಗೆ ಇಡೀ ವರ್ಲ್ಡ್​ ದುನಿಯಾ ದಂಗಾಗಿದೆ. ರಾಮ್ ಚರಣ್- ಜೂನಿಯರ್ ಎನ್​ಟಿಆರ್​ರ ತ್ರಿಬಲ್ ಆರ್ ಹಾಗೂ ಕಮಲ್ ಹಾಸನ್, ಫಹಾದ್, ಸೇತುಪತಿಯ ಗ್ಯಾಂಗ್​ಸ್ಟರ್ ಮೂವಿ ವಿಕ್ರಮ್ ಕೂಡ ತನ್ನದೇ ವಿಶೇಷತೆಗಳಿಂದ ಪ್ರೇಕ್ಷಕರಿಗೆ ವ್ಹಾವ್ ಫೀಲ್ ಕೊಟ್ಟಿತು.

ಬಾಲಿವುಡ್​ನ ಮಕಾಡೆ ಮಲಗಿಸಿರೋ ಸೌತ್ ದುನಿಯಾ, ನಾಲ್ಕನೇ ಹಾಗೂ ಐದನೇ ಸ್ಥಾನಗಳನ್ನು ಬಿಟೌನ್ ಮಂದಿಗೇ ಬಿಟ್ಟುಕೊಟ್ಟಿದೆ. ನಾಲ್ಕನೇ ಸ್ಥಾನದಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ದೇಶಾದ್ಯಂತ ಬಹುದೊಡ್ಡ ಚರ್ಚೆಗೆ ಗ್ರಾಸವಾಯ್ತು. ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾದ ಈ ಚಿತ್ರ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿತು. ಇನ್ನು ಭೂಲ್ ಭುಲಯ್ಯ-2 ಅನ್ನೋ ಕಾಮಿಡಿ ಹಾರರ್ ಕೂಡ ಪ್ರೇಕ್ಷಕರ ಮನಸ್ಸು ಗೆಲ್ಲೋದ್ರ ಜೊತೆ ಬಾಕ್ಸ್ ಆಫೀಸ್ ಗೆಲುವಿನಿಂದ ಭೇಷ್ ಅನಿಸಿಕೊಂಡಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES