Friday, November 22, 2024

ಯುದ್ದದಲ್ಲಿ ಚೀನಾವನ್ನು ಎದುರಿಸಲು ಯುವಕರ ಶಕ್ತಿ ಹೆಚ್ಚು ಬೇಕು : ಆರ್ ಅಶೋಕ್

ದೊಡ್ಡಬಳ್ಳಾಪುರ : ಅಗ್ನಿಪತ್ ಯೋಜನೆ ಇವತ್ತಿಂದಲ್ಲ, ಹತ್ತನ್ನೆರಡು ವರ್ಷಗಳಿಂದ ಯೋಜನೆ ಮಾಡ್ಬೇಕು ಅಂತ ಯೋಚನೆ ಮಾಡಿದ್ದಾರೆ ಎಂದು ಅಗ್ನಿಪತ್ ಕುರಿತು ಶಿವಕುಮಾರ್ ಹೇಳಿಕೆಗೆ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ.

ಡಿ.ಕೆ ಶಿವಕುಮಾರ್ ಎಕ್ಸ್​ಪರ್ಟ್​ ಇದ್ದರೆ ಏನೇ ಬಂದರೂ ಅದನ್ನು ತಿರುಚುವುದು ಅವರ ಮನಸ್ಸಲ್ಲಿ ಬಂದಿದೆ. ಅಗ್ನಿಪತ್ ಯೋಜನೆ ಇವತ್ತಿಂದಲ್ಲ, ಹತ್ತನ್ನೆರಡು ವರ್ಷಗಳಿಂದ ಯೋಜನೆ ಮಾಡ್ಬೇಕು ಅಂತ ಯೋಚನೆ ಮಾಡಿದ್ದಾರೆ.

ಈಗಾಗಲೇ ಚೀನಾ ನಮಗೆ ದೊಡ್ಡ ಸವಾಲೆಸೆಯುತ್ತಿದೆ. ಈಗಿರುವ ನಮ್ಮ ಸೈನ್ಯದ ವಯೋಮಿತಿ ಅಂದ್ರೆ ಆವರೇಜ್ 40-50 ವರ್ಷ ವಯಸ್ಸು. ಯುದ್ದದಲ್ಲಿ ಚೀನಾವನ್ನು ಎದುರಿಸಲು ಯುವಕರ ಶಕ್ತಿ ಹೆಚ್ಚುಬೇಕು. ಆ ದೃಷ್ಟಿಯಿಂದ ಈ ಅಗ್ನಿಪತ್ ಯೋಜನೆ ಮಾಡಿರೋದು. ಸೈನ್ಯಕ್ಕೆ ಎಲ್ಲಾ ತರಹದ ವಿದ್ಯಾಭ್ಯಾಸ ಮಾಡಿರುವ ಯುವಕರನ್ನು ತೆಗೆದುಕೊಳ್ಳಲಿದ್ದಾರೆ. ಅವರಿಗೆ ಎಲ್ಲಾ ರೀತಿಯ ಸರ್ಕಾರಿ ಹುದ್ದೆಗಳಲ್ಲಿ ಅವಕಾಶ ಕೊಡಬೇಕು ಅನ್ನೋದು ನನ್ನ ಅಭಿಪ್ರಾಯ ಎಂದರು.

ಇನ್ನು, ಯಾರೋ ಹೇಳಿದ್ರು ಅಂತ ಬಿಜೆಪಿ ಆಫೀಸ್ ಕಾಯೋದು ಅನ್ನೋ ಹೇಳಿಕೆ ಸರಿಯಲ್ಲ. ಅವರ ವಿದ್ಯಾನುಸಾರ ಹಾಗೂ ಎಕ್ಸ್​​ಪಿರಿಯನ್ಸ್​ ಮೂಲಕ ಎಲ್ಲಾ ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ನೀಡಬೇಕು. ಕಾಂಗ್ರೆಸ್​​ನವರು ಬಣ್ಣ ಕಟ್ಟುತ್ತಿರುವುದು ತಪ್ಪು, ದೇಶದ ಸಮಗ್ರತೆ ಬಹಳ‌ ಮುಖ್ಯ. ದೇಶದ ಎದುರಾಳಿಗಳನ್ನು ಎದುರಿಸುವುದು ಬಹಳ ಮುಖ್ಯ. ಅದನ್ನ ಬಿಟ್ಟು ಉಳಿದ ಎಲ್ಲವನ್ನು ಹೇಳುವುದು ಕಾಂಗ್ರೆಸ್​​ನ ಪರಿಪಾಠ ಈ ರೀತಿ ಹೇಳಿ ಹೇಳಿ ಕಾಂಗ್ರೆಸ್ ಮೂಲೆ ಗುಂಪಾಗಿದೆ. ಇದ್ರಿಂದ ಮಹಾರಾಷ್ಟ್ರ ಸರ್ಕಾರ ಕೂಡ ಪತನಗೊಳ್ಳುತ್ತಿದೆ, ಕಾಂಗ್ರೆಸ್ ಎಲ್ಲೂ ಉಳಿಯಲ್ಲ. ದೇಶದಲ್ಲಿ ಸಮಗ್ರತೆಯಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ದೊಡ್ಡಬಳ್ಳಾಪುರದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES