‘ಮಹಾ’ ನಾಟಕದ ಮಹಾ ಮಂಗಳಾರತಿಗೆ ಕಮಲ ಪಡೆ ರೆಡಿಯಾದಂತಿದೆ. ಹೌದು, ಈಗ ಏಕನಾಥನನ್ನು ಪೂಜಿಸ್ತಿರುವ ಬಂಡಾಯ ಶಾಸಕರು, ನಮಗೆಲ್ಲಾ ನೀವೇ ಸ್ವಾಮಿ ಅಂತ ಆರಾಧಿಸ್ತಿದ್ದಾರೆ.. ಈ ಮಧ್ಯೆ, ಮಹಾಮಂಗಳಾರತಿಯಲ್ಲಿ ಎನ್‌ಸಿಪಿ , ಕಾಂಗ್ರೆಸ್ ಮಿಸ್ ಆಗುವ ಲಕ್ಷಣಗಳು ಗೋಚರಿಸ್ತಿದೆ..ಇನ್ನು ಕೆಲವೇ ದಿನದಲ್ಲಿ ಮಹಾರಾಷ್ಟ್ರದ ರಾಜಕೀಯ ಚಿತ್ರಣ ಬದಲಿಸುವ ಈ ಮಹಾ ಪೂಜೆಯಲ್ಲಿ ಯಾರೆಲ್ಲಾ ಭಾಗಿಯಾಗ್ತಾರೆ ಅನ್ನೋದೇ ಸದ್ಯದ ಇಂಟರೆಸ್ಟಿಂಗ್ ವಿಚಾರ.
ದೇಶದಾದ್ಯಂತ ಜನರಿಗೆ `ಮಹಾ’ ನಾಟಕ ನೋಡೋ ಭಾಗ್ಯ ಸಿಕ್ಕಿದೆ. ಹೌದು, ಕರ್ನಾಟಕದ ರೆಬೆಲ್ಸ್ ಆಟವೇ ದೊಡ್ಡದ್ದು ಅಂದುಕೊಂಡಿದ್ದವರು, ಇದೀಗ ಫುಲ್ ಸುಸ್ತಾಗಿ ಹೋಗಿದ್ದಾರೆ. ಆ ರೀತಿ ಕುತೂಹಲ ಹೈಡ್ರಾಮಾ ನಡಿತಿದೆ. ಸದ್ಯ ರೋಚಕ ತಿರುವಿನಲ್ಲಿರುವ ಮಹಾರಾಷ್ಟ್ರ ರಾಜಕಾರಣದ ದಿಕ್ಕು ಬದಲಿಸಲು ಕೇವಲ ಒಂದೇ ಹೆಜ್ಜೆ ಇದೆ. ರೆಬೆಲ್ ಲೀಡರ್‌ಗೆ ಅಧಿಕಾರ ಕೊಟ್ಟಿರುವ ಬಂಡಾಯ ಶಾಸಕರು, ಸ್ವಾಮಿ ಅದೇನಗುತ್ತೋ ಆಗ್ಲಿ..ಮುಂದಿನ ನಮ್ಮ ಭವಿಷ್ಯದ ನಿರ್ಧಾರ ನೀವೇ ಮಾಡಿ ಬಿಡಿ ಅಂತಿದ್ದಾರೆ. ಇದು, ಮಹಾ ವಿಕಾಸ ಅಘಾಡಿಯ ಪತಕ್ಕೆ ಕಾರಣವಾಗ್ತಿದೆ.
MVA ಸಹವಾಸವೇ ಬೇಡ ಅನ್ನೋ ಮಟ್ಟಿಗೆ ತಲೆ ಕೆಡಿಸಿದೆ :
ಮಹಾರಾಷ್ಟ್ರದಲ್ಲಿ ಶಿವಸೇನೆಯ ನೇತೃತ್ವದಲ್ಲಿ ಸರ್ಕಾರ ಇದೆ.. ಆದ್ರೆ, ಅದ್ರ ಮೈತ್ರಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಅದ್ಯಾಕೆ ಈ ಪರಿಸ್ಥಿತಿ ನೋಡಿ ನೋಡಿ ಬೇಸತ್ತು ಹೋಗಿದೆ. ಆಗಿದ್ದಾಗ್ಲಿ ಅಂತ ಮಹಾ ವಿಕಾಸ ಅಘಾಡಿ ಸಹವಾಸವೇ ಬೇಡ ಅನ್ನೋ ಮಟ್ಟಿಗೆ ಚಿಂತನೆಯಲ್ಲಿ ತೊಡಗಿದ್ದಾರೆ. ನಮ್ಮ ಉದ್ಧವ್ ಠಾಕ್ರೆಯೇ ಸಿಎಂ ಆಗಿರ್ತಾರೆ. ಎಲ್ಲಾ ಶಾಸಕರು ನಮ್ಮಲ್ಲೇ ಇದ್ದಾರೆ ಎನ್ನುತ್ತಿದ್ದ ಸಂಜಯ್ ರಾವತ್ ದಿಢೀರ್ ಅಂತ ಎಲ್ಲಾ ಶಾಸಕರು ಒಪ್ಪಿದ್ರೆ ಮಹಾ ವಿಕಾಸ ಅಘಾಡಿ ತೊರೆಯಲು ರೆಡಿ ಎಂದಿದ್ದಾರೆ.
ವಿಶೇಷ ಅಂದ್ರೆ, ಅಘಾಡಿ ಸರ್ಕಾರ ಬಿದ್ದೋಗುತ್ತೆ ಅನ್ನೋ ಸೂಚನೆ ಸಿಗುತ್ತಿದ್ದಂತೆ ಈ ಮಾತುಗಳು ಕೇಳಿ ಬರ್ತಿವೆಯಷ್ಟೆ.. ಇನ್ನು, ಎನ್‌ಸಿಪಿ ಕೂಡ ರಾವತ್ ಹೇಳಿದಂತೆ ಹೇಳುತ್ತಿದೆ.. ಎಲ್ಲ ಒಪ್ಪಿದ್ರೆ ಅಘಾಡಿ ಸಹವಾಸ ಬೇಡ ಅನ್ನೋ ಮಟ್ಟಿಗೆ ಎನ್‌ಸಿಪಿ ತಲೆ ಕೆಡಿಸಿದೆ. ಶಿವಸೇನೆ ಮತ್ತು ಎನ್‌ಸಿಪಿ ಒಂದು ತಕ್ಕಡಿ ತೂಗಿದ್ರೆ, ಕಾಂಗ್ರೆಸ್ ಅಯ್ಯೋ ಮೈತ್ರಿ ಬಿದ್ದು ಹೋಗುತ್ತಲ್ಲಪ್ಪ ಅಂತ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ಬಿಜೆಪಿಗೆ ಸರ್ಕಾರ ರಚನೆಯ ಆಹ್ವಾನ ಕೊಡ್ತಾರಾ ರಾಜ್ಯಪಾಲರು? :
ಉದ್ಧವ್ ಠಾಕ್ರೆ ಪಡೆಯಲ್ಲಿದ್ದ 19 ಶಾಸಕರ ಸಂಖ್ಯೆ ಕುಸಿಯುತ್ತಲೇ ಬರುತ್ತಿದೆ. ಸಂಖ್ಯಾಬಲ ಹೆಚ್ಚಿಸಿಕೊಂಡಿರುವ ಏಕನಾಥ್ ಶಿಂಧೆ ಟೀಂ ಸೇರೋಕೆ ಓಡೋಡಿ ಬರ್ತಿದ್ದಾರೆ ಮತ್ತಷ್ಟು ಶಾಸಕರು.. ಇದು, ಶಿಂಧೆ ಲೀಡರ್ ಶಿಪ್ ಗಟ್ಟಿಗೊಳಿಸಿದ್ದು, ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಯ ಸುಳಿವು ನೀಡಿದ್ದಾರೆ.. ಈ ಮಧ್ಯೆ, ರಾಜ್ಯಪಾಲರನ್ನು ಭೇಟಿಯಾಗಿ ಬಲ ಪ್ರದರ್ಶನಕ್ಕೂ ಮುಂದಾಗಿದ್ದಾರೆ.. ಈ ಬೆನ್ನಲ್ಲೇ ದೇವೇಂದ್ರ ಫಡ್ನವೀಸ್ ದೆಹಲಿಗೆ ಪ್ರಯಾಣ ಬೆಳಸಿದ್ದಾರೆ. ಇದ್ರ ಮಧ್ಯೆ, ಸರ್ಕಾರ ಇರೋ ವರೆಗೂ ನಮ್ಮ ಬೆಂಬಲ ಉದ್ಧವ್ ಠಾಕ್ರೆಗೆ ಎಂದು ಸ್ಪಷ್ಟಪಡಿಸಿದೆ ಎನ್‌ಸಿಪಿ.
ಯಾವಾಗ ಸಿಎಂ ಉದ್ಧವ್ ಠಾಕ್ರೆ ಸರ್ಕಾರಿ ನಿವಾಸ ತೊರೆದು ಸ್ವಂತ ನಿವಾಸಕ್ಕೆ ಹೋದ್ರೋ ಆಗ್ಲೇ ಒಂದು ಹಂತಕ್ಕೆ ಸರ್ಕಾರ ಬಿದ್ದು ಹೋದಂತಾಯ್ತು. ಸದ್ಯ ಉದ್ಧವ್ ಠಾಕ್ರೆ ಸೈಲೆಂಟ್ ಆಗಿದ್ದಾರೆ. ಆದ್ರೆ, ಅಘಾಡಿ ಸಹವಾಸ ಮಾಡಿ ಕೆಟ್ವಲ್ಲಪ್ಪೋ ಅಂತ ಚಿಂತೆಗೀಡಾಗಿದ್ದಾರೆ ಕಾಂಗ್ರೆಸ್ ಮತ್ತು ಎನ್‌ಸಿಪಿ ನಾಯಕರು.
ಬ್ಯೂರೋ ರಿಪೋರ್ಟ್ ಪವರ್ ಟಿವಿ