Thursday, November 7, 2024

ಪಿಎಸ್​ಐ ಅಕ್ರಮ: ಮಾಧ್ಯಮಗಳು ನಮಗೆ ಹೆಚ್ಚಿನ ಶಕ್ತಿ ತುಂಬುತ್ತಿವೆ – ಡಿಕೆಶಿ

ಶಿವಮೊಗ್ಗ : ತಿಹಾರ್ ಜೈಲಿಗಾದ್ರೂ ಕಳಿಸಲಿ, ಪರಪ್ಪನ ಅಗ್ರಹಾರಕ್ಕಾದ್ರೂ ಕಳಿಸಲಿ ಎಲ್ಲಾದರೂ ಕಳುಹಿಸಲಿ ನಾವು ಯಾರಿಗೂ ಆಜ್ಞೆ ಮಾಡುವುದಕ್ಕಾಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸಚಿವ ಅಶ್ವತ್ಥ್​ ನಾರಾಯಣ ವಿರುದ್ಧ​​ ವಾಗ್ದಾಳಿ ನಡೆಸಿದರು.

ಅಶ್ವತ್ಥ್ ನಾರಾಯಣ್ ಹೇಳಿಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆಡಳಿತ ಪಕ್ಷದ ಅಧಿಕಾರಿಗಳು ಫಸ್ಟ್ ಈ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರಲ್ಲ ಪ್ರತಿಯೊಬ್ಬ ಯುವಕರ ಭವಿಷ್ಯ, ವಿಶ್ವವಿದ್ಯಾನಿಲಯ ಉಪಕುಲಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲಾ ಪ್ರಶ್ನೆ ಪತ್ರಿಕೆಯ ಪೇಪರ್ ಲೀಕ್ ಆಯ್ತು, ಪ್ರತಿಯೊಂದು ನೇಮಕಾತಿಗಳಲ್ಲೂ  ಹಗರಣ ನಡೆದಿವೆ. ಅಲ್ಲದೇ ಹೆಚ್ಡಿಕೆ ಹೇಳಿದ್ದಾರಲ್ಲ, ಸರ್ಟಿಫಿಕೇಟ್​​ಗಳು, ಪಾಸ್ ಮಾಡಿಸುವ ದಂಧೆ ನಡೆಯುತ್ತಿದೆ ಅಂತ ಹೇಳಿದ್ದಾರೆ.

ಬಿಜೆಪಿ ಸರ್ಕಾರವು ಬಹಳ ಗೌಪ್ಯವಾಗಿ ಈ ಅಕ್ರಮ ಕೆಲಸಗಳನ್ನು ಮುಚ್ಚುವಂತಹ ಪ್ರಯತ್ನ ನಡೆಯುತ್ತಿದೆ. ಹೇಗೆ ಅಂದರೆ ಮುಖ್ಯಮಂತ್ರಿ, ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರು ಕೆ.ಎಸ್​ ಈಶ್ವರಪ್ಪನವರಿಗೆ ಏನು ಮಾಡಿಲ್ಲ ಅಂತಾ ಸರ್ಟಿಫಿಕೇಟ್ ಕೊಟ್ಟರು. ಅಕ್ರಮ ಮುಚ್ಚುವುದಕ್ಕೆ ಏನು ಬೇಕೋ ಅದಕ್ಕೆ ಪ್ರಯತ್ನ ಮಾಡಿ, ಸಣ್ಣಪುಟ್ಟ ಅಧಿಕಾರಿಗಳ ಮೇಲೆ ಆ್ಯಕ್ಷನ್ ತೆಗೆದುಕೊಳ್ಳುತ್ತಿದ್ದಾರೆ. ಅಶ್ವತ್ಥ್ ನಾರಾಯಣ ಪೋನ್ ಮಾಡಿರೋದು, ಅವರ ಸಂಬಂಧಿಕರು ಕಲೆಕ್ಟ್ ಮಾಡಿರೋದು ಎಲ್ಲಾ ಈಚೆಗೆ ಬರುತ್ತದೆ. ಫಸ್ಟ್ ರ್ಯಾಂಕ್ ಬಂದಿರುವವನ್ನು ಮಾತ್ರ ಒಳಗೆ ಹಾಕಿದ್ದಾರೆ. ಬೇರೆಯವರನ್ನು ಮಾತ್ರ ಹೊರಗೆ ಬಿಟ್ಟಿದ್ದಾರೆ. ಅವರಿಗೋಸ್ಕರ ಒಂದು ಹೊಸ ಆರ್ಡರ್ ಮಾಡಿದ್ದಾರೆ ಎಂದರು.

ಪ್ರತಿಭಟನೆ ಹಾಗೂ ಪಾದಯಾತ್ರೆ ಕೇವಲ ಚುನಾವಣಾ ಗಿಮಿಕ್ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮ್ಮದು ಪಾದಯಾತ್ರೆ ಗಿಮಿಕ್ ಮಾಡೋದಕ್ಕೆ ಮಾಡುತ್ತೀವಿ. ಅವರು ಏನು ಮಾಡಿದರು ಅಥವಾ ಎಲ್​.ಕೆ ಅಡ್ವಾಣಿ‌ ಅವರು ಏನು ಮಾಡಿದರು? ಹಾಗಿದ್ರೆ ಯಡಿಯೂರಪ್ಪ ಅವರ ಯಾತ್ರೆಗಳೆಲ್ಲಾ ಹೇಗೆ ನಡೆಯಿತು? ಎಂದು ಬಿಜೆಪಿಗೆ ಪ್ರಶ್ನೆ ಮಾಡಿದರು

ಆಜಾನ್​ ವಿಚಾರಕ್ಕೆ ಸಂಬಂಧ ಹೊಸ ಕಾನೂನು ಜಾರಿ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರವರ ಧರ್ಮದ ಆಚರಣೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ, ಕಾನೂನು ಇದೆ. ಆ ಕಾನೂನು ಕಾಪಾಡಬೇಕು. ಮೊದಲು ಆರಗ ಜ್ಞಾನೇಂದ್ರ ಕಾನೂನು ಮಾಡಿಸುವ ಬದಲು ಅವರ ಪಾರ್ಟಿ ಔಟ್​ಫಿಟ್ ಇದೆಯಲ್ಲಾ ಅವರನ್ನೆಲ್ಲಾ ಒಳಗೆ ಹಾಕುವ ಕೆಲಸ ಮಾಡಲಿ. ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ 7ಕ್ಕೆ 7 ಸ್ಥಾನ ಗೆಲ್ಲುತ್ತೇವೆ. ಮಾಧ್ಯಮದವರು ಪಿಎಸ್​ಐ ಹಗರಣದಲ್ಲಿ ನಮಗೆ ಹೆಚ್ಚಿನ ಶಕ್ತಿ ಕೊಡುತ್ತಿದ್ದಾರೆ. ಇದೇ ಸತ್ಯವನ್ನು, ಶಕ್ತಿಯನ್ನು ಜನರ ಮುಂದೆ ಇಡಿ ಎಂದು ಡಿ.ಕೆ ಶಿವಕುಮಾರ್ ಅವರು ಮಾತಾಡಿದರು.

ಬಿಜೆಪಿಗೆ ಅಧಿಕಾರ ಕೊಟ್ಟು ನೋಡಿದ್ದಾರೆ. ಅಧಿಕಾರ ಇದ್ದಾಗ ಏನೇನಾಯ್ತು ಅಂತ ನೋಡಿದ್ದೀರಾ? ಇಡೀ ಶಿವಮೊಗ್ಗ ಹಾಗೂ ಮಲೆನಾಡಿನಲ್ಲಿ ಒಳ್ಳೆಯ ವಿದ್ಯಾವಂತರು, ಪ್ರಜ್ಞಾವಂತರು ಇದ್ದಾರೆ. ಅವರಿಗೆ ಅನ್ಯಾಯ ಆಗುತ್ತಿದೆ. ನಿಮಗೆ ರಕ್ಷಣೆ ಕೊಡುತ್ತೇವೆ. ನೀವು ನಮ್ಮ ಜೊತೆಯಲ್ಲಿ ಇರಿ ಎಂದು ಡಿಕೆಶಿ ಅವರು ಭರವಸೆ ನೀಡಿದರು.

RELATED ARTICLES

Related Articles

TRENDING ARTICLES