ಬೆಂಗಳೂರು : ಕಾಂಗ್ರೇಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಗೆ ರೈತ ಗೀತೆಯ ಮೂಲಕ ಚಾಲನೆಯನ್ನು ನೀಡಲಾಯಿತು.
ಮೇಕೆದಾಟುವಿನ ಮೆಗಾಫೈಟ್ ಈಗಾಗಲೇ ಪ್ರಾರಂಭವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ,ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಕಾಂಗ್ರೇಸ್ ನಾಯಕರು ಮೊದಲ ದಿನ 15 ಕಿಲೋ ಮೀಟರ್ ಪಾದಯಾತ್ರೆ ಮಾಡಲಿದ್ದಾರೆ. ಸಂಗಮದಿಂದ ದೊಡ್ಡ ಆಲಹಳ್ಳಿಯವರೆಗೂ ಈ ಪಾದಯಾತ್ರೆ ನಡೆಯಲಿದೆ.
ನಮ್ಮ ನೀರು ನಮ್ಮ ಹಕ್ಕು ಷೋಷ ವಾಕ್ಯದೊಂದಿಗೆ ಕಾಂಗ್ರೇಸ್ ಮೇಕೆದಾಟು ಪಾದಯಾತ್ರೆ ಆರಂಭಿಸಿದೆ. ಸಂಜೆಯ ವೇಳೆಗೆ ಕನಕಪುರವನ್ನು ತಲುಪಲಿದ್ದಾರೆ. ಮೇಕೆದಾಟು ಪಾದಯಾತ್ರೆಯಲ್ಲಿ ಕೊರೋನಾ ರೂಲ್ಸ್ ದೊಡ್ಡ ಮಟ್ಟದಲ್ಲಿ ಉಲ್ಲಂಘನೆಯಾಗಿದೆ. ಕರ್ಫ್ಯೂ ನಿಯಮ ಮೀರಿ ಮಾಸ್ಕ್ ಇಲ್ಲದೆ,ಸಾಮಾಜಿಕ ಅಂತರ ಇಲ್ಲದೆ ಸಾವಿರಾರು ಜನ ಸೇರಿದ್ದಾರೆ.
ಬೆಂಗಳೂರಿನ ಜನ ಹಿತಕ್ಕಾಗಿ ಈ ಪಾದಯಾತ್ರೆ ಮಾಡುತ್ತಿದ್ದೇವೆ, ನಾವು 2 ತಿಂಗಳ ಹಿಂದೆಯೇ ಪಾದಯಾತ್ರೆ ಘೋಷಣೆ ಮಾಡುತ್ತಿದ್ದೆವು. ನಾವು ಪಾದಯಾತ್ರೆ ಮಾಡಬಾರದು ಅಂತ ಕರ್ಫ್ಯೂ ಹಾಕಿದ್ದಾರೆ. ಕಾನೂನು ಭಂಗ ಮಾಡದೇ ಪಾದಯಾತ್ರೆ ಮಾಡುತ್ತೇವೆಂದು ಕನಕಪುರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.