Sunday, February 2, 2025

ಕುಮಾರಸ್ವಾಮಿ ಚನ್ನಪಟ್ಟಣವನ್ನು ಅದ್ವಾನ ಮಾಡಿ ಹೋಗಿದ್ದಾರೆ: ಸಿ.ಪಿ ಯೋಗೇಶ್ವರ್​

ರಾಮನಗರ : ಚನ್ನಪಟ್ಟಣ ಚುನಾವಣೆಯಲ್ಲಿ ಗೆಲುವು ನೀಡಿದ ಇಂದು ಕೃತಜ್ಞತಾ ಸಮಾವೇಶ ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸಿ,ಪಿ ಯೋಗೇಶ್ವರ್​ ‘ಕುಮಾರಸ್ವಾಮಿ ಈ ಕ್ಷೇತ್ರವನ್ನು ಅದ್ವಾನ ಮಾಡಿಹೋಗಿದ್ದಾರೆ. ಇದನ್ನು ಸರಿಪಡಿಸಲು ಇನ್ನು ಒಂದು ವರ್ಷ ಬೇಕಾಗುತ್ತದೆ ಎಂದು ಹೇಳಿದರು.

ಕೃತಜ್ಙತಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸಿ,ಪಿ ಯೋಗೇಶ್ವರ್​ ‘ ಈ ಕಾರ್ಯಕ್ರಮಕ್ಕೆ ಇಂದು ಮುಖ್ಯಮಂತ್ರಿಗಳು ಬರಬೇಕಿತ್ತು ಆದರೆ ಕಾರಣಾಂತರಗಳಿಂದ ಅವರ ಬರಲಾಗಲಿಲ್ಲ. ಕ್ಷೇತ್ರದ ಮತದಾರರು ನಮ್ಮ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ. ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸುತ್ತೇನೆ.

ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರ ಸಹಕಾರ ಕೊಡ್ತಿದೆ. ನಾನು ಈಗಾಗಲೇ ಪಂಚಾಯತಿ ವ್ಯಾಪ್ತಿಯಲ್ಲಿ ಓಡಾಡುತ್ತಿದ್ದೇನೆ. ಈ ಹಿಂದೆ ಕ್ಷೇತ್ರಕ್ಕೆ ಘೋಷಣೆ ಆಗಿರುವ ಅನುದಾನ ತಂದು ಕೆಲಸ ಮಾಡಬೇಕು. ಕುಮಾರಸ್ವಾಮಿ ಈ ತಾಲೂಕನ್ನ ಅದ್ವಾನ ಮಾಡಿ ಹೋಗಿದ್ದಾರೆ. ಈ ತಾಲೂಕನ್ನ ರಿಪೇರಿ ಮಾಡಲು ಇನ್ನೂ ಒಂದು ವರ್ಷ ಬೇಕು. ಚನ್ನಪಟ್ಟಣದ ಯುಜಿಡಿ ಕೆಲಸ ಆಗಬೇಕು. ಕುಡಿಯುವ ನೀರಿಗೆ ಹೆಚ್ಚಿನ ಅನುದಾನ ಬೇಕಿದೆ. ಹೊಸ ಪೈಪ್ ಲೈನ್ ವ್ಯವಸ್ಥೆ ಆಗಬೇಕು.

ಇದನ್ನೂ ಓದಿ :ಡಿಕೆಶಿ ರಾಜ್ಯದ ಚುಕ್ಕಾಣಿ ಹಿಡಿಯಲು ಸಿದ್ದರಾಗಿದ್ದಾರೆ : ಎಚ್​.ಸಿ ಬಾಲಕೃಷ್ಣ

ಚನ್ನಪಟ್ಟಣದ ಕೆಐಸಿಸಿ ಬಟ್ಟೆ ಮಿಲ್ ಗೆ ನೂರು ವರ್ಷ ಇತಿಹಾಸ ಇದೆ. ಅದಕ್ಕೆ ಪುನಶ್ಚೇತನ ಮಾಡುವ ಕೆಲಸ ಆಗಬೇಕು. ಚನ್ನಪಟ್ಟಣದ ಮಿನಿ ವಿಧಾನಸೌಧ, ಬಸ್ ಸ್ಟ್ಯಾಂಡ್ ಸಮಸ್ಯೆ ಬಗೆಹರಿಸಬೇಕು. ತಾಯಿ‌, ಮಕ್ಕಳ ಹೆರಿಗೆ ಆಸ್ಪತ್ರೆ ಮಾಡಬೇಕು. ಕಣ್ವ ಜಲಾಶಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು. ಆನೆ ಹಾವಳಿಗೆ ಬ್ರೇಕ್ ಹಾಕಲು 300ಕೋಟಿ ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಬೇಕು.

ರಾಜ್ಯದಲ್ಲಿ ಹೆಚ್ಚಿನ ಹಾಲು ಉತ್ಪಾದನೆ ಆಗ್ತಿರೋದು ಚನ್ನಪಟ್ಟಣ ತಾಲೂಕಿನಲ್ಲಿ. ಹಾಲು ಉತ್ಪಾದನೆ ಮಾಡುವ ರೈತರಿಗೆ ಹೆಚ್ಚಿನ ಹಣ ಸಿಗ್ತಿಲ್ಲ. ಹಾಗಾಗಿ ಹಾಲಿನ ದರ ಹೆಚ್ಚಳ ಮಾಡಬೇಕು. ಕುಮಾರಸ್ವಾಮಿ ಒಂದು ರಸ್ತೆಯನ್ನೂ ಅಭಿವೃದ್ಧಿ ಮಾಡಿಲ್ಲ, ಜನ ಅವರಿಗೆ ಶಾಪ ಹಾಕ್ತಿದ್ದಾರೆ. ಮೈಕ್ರೋ ಫೈನಾನ್ಸ್​ನಿಂದ ಹೆಣ್ಣುಮಕ್ಕಳ ಶೋಷಣೆ ಆಗ್ತಿದೆ. ಇದೆಲ್ಲವನ್ನ ಸರಿಪಡಿಸುವ ಕೆಲಸ ಆಗಬೇಕು ಎಂದು ಶಾಸಕ ಸಿ.ಪಿ ಯೋಗೇಶ್ವರ್​ ಸಮಾವೇಶದಲ್ಲಿ ಅಭಿವೃದ್ದಿಯ ಜಪವನ್ನು ಜಪಿಸಿದರು.

RELATED ARTICLES

Related Articles

TRENDING ARTICLES