Tuesday, January 21, 2025

ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ : ಮೂವರು ಆರೋಪಿಗಳ ಬಂಧನ !

ಮಂಗಳೂರು : ಕೇವಲ ರಾಜ್ಯವಲ್ಲದೆ ದೇಶದ ಗಮನ ಸೆಳೆದಿದ್ದ ಉಲ್ಲಾಳದ ಕೋಟೆಕಾರು ಸಹಕಾರಿ ಬ್ಯಾಂಕ್​ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ದೊರೆತಿದೆ. ಈ ಕುರಿತು ಮಂಗಳೂರು ಪೊಲೀಸ್​ ಆಯುಕ್ತ ಅನುಪಮ್​ ಅಗರ್ವಾಲ್​ ತಿಳಿಸಿದ್ದಾರೆ.

ಜನವರಿ 17ರಂದು ಮಧ್ಯಹ್ನಾ 1 ಗಂಟೆ ಸುಮಾರು ಬ್ಯಾಂಕ್​ಗೆ ಎಂಟ್ರಿ ಕೊಟ್ಟಿದ್ದ ಖದೀಮರ ಗ್ಯಾಂಗ್​ ಬ್ಯಾಂಕ್​ನಿಂದ ಸುಮಾರು 10ರಿಂದ 12 ಕೋಟಿಯಷ್ಟು ಹಣವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಪ್ರಕರಣ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಜನರಲ್ಲಿ ಅನುಮಾನ ಮೂಡಿಸುವಂತೆ ಮಾಡಿತ್ತು. ಆದಷ್ಟು ಬೇಗನ ಆರೋಪಿಗಳನ್ನು ಬಂಧಿಸಬೇಕು ಎನ್ನುವ ಕೂಗು ಕೂಡ ಜೋರಾಗಿಯೆ ಕೇಳಿ ಬಂದಿತ್ತು.

ಇದನ್ನೂ ಓದಿ:ಟ್ರೈನಿ ವೈದ್ಯೆ​ ಅತ್ಯಾಚಾರ ಪ್ರಕರಣ, ಸಿಬಿಐ ಸರಿಯಾಗಿ ತನಿಖೆ ನಡೆಸಿಲ್ಲ ಎಂದ ಮಮತಾ ಬ್ಯಾನರ್ಜಿ

ಇದೀಗ ದರೋಡೆಕೋರರನ್ನು ಬಂಧಿಸಿದ್ದೇವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್​ ಅಗರ್ವಾಲ್​ ಮಾಹಿತಿ ಹಂಚಿಕೊಂಡಿದ್ದು. ಜನವರಿ 17ರಂದು ದರೋಡೆಕೋರರು ಮಹರಾಷ್ಟ್ರದ ಕಾರನ್ನು ಬಳಸಿ ಕೃತ್ಯವೆಸಗಿದ್ದರು. ಬ್ಯಾಂಕ್​ನ್ನು ರಾಬರಿ ಮಾಡಿದ ನಂತರ ದರೋಡೆಕೋರರು ಕೇರಳ ಮುಖಾಂತರವಾಗಿ ತಮಿಳುನಾಡಿನ ತಿರುನೆಲ್ವೇಲಿಗೆ ಪರಾರಿ ಆಗಿದ್ದರು.

ಇದೀಗ ತಮಿಳುನಾಡಿನ ಮಧುರೈ ಸಮೀಪ ದರೋಡೆಕೋರರನ್ನು ಬಂಧಿಸಿದ್ದು. ಬಂಧಿತರಿಂದ 2 ಗೋಣಿಚೀಲ, ತಲ್ವಾರ್‌, 2 ಪಿಸ್ತೂಲ್‌ ಜಪ್ತಿ ಮಾಡಿದ್ದೇವೆ. ಬಂಧಿತ ಆರೋಪಿಗಳು ತಮಿಳುನಾಡಿನ ತಿರುನೆಲ್ವೇಲಿ ಮೂಲದವರು ಎಂದು ಮಂಗಳೂರು ಪೊಲೀಸ್​ ಆಯುಕ್ತರು ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES