ಕಲಬುರಗಿ : ಅತ್ತೆ ಬೇಗ ಸಾಯಲಿ ಎಂದು ನೋಟ್ ಮೇಲೆ ಬರೆದು ದೇವಸ್ಥಾನದ ಹುಂಡಿಗೆ ಹಾಕಿರುವ ಘಟನೆ ಕಲಬುರಗಿಯ ಭಾಗ್ಯವಂತಿ ದೇವಾಲಯದಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು. ಸೊಸೆಯೊಬ್ಬಳು ತನ್ನ ಅತ್ತೆ ಬೇಗ ಸಾಯಲಿ ಎಂದು ಇಚ್ಚಿಸಿ, 20 ರೂಪಾಯಿ ನೋಟ್ ಮೇಲೆ ಬರೆದು. ಭಾಗ್ಯವಂತಿ ದೇವಾಲಯದ ಹುಂಡಿಗೆ ಹಾಕಿದ್ದಾಳೆ. ಹುಂಡಿ ಎಣಿಕೆ ಮಾಡುವ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಭೀಷ್ಮ ಶಪಥ ಕೈಗೊಂಡ ಅಣ್ಣಮಲೈ : ಚಪ್ಪಲಿ ಹಾಕಲ್ಲ, ಛಾಟಿ ಏಟಿನಿಂದ ಹೊಡೆದುಕೊಂಡಿದ್ದೇಕೆ?
ಹುಂಡಿ ಎಣಿಕೆ ವೇಳೆ ಈ ನೋಟಿನ ಜೊತೆಗೆ ಸುಮಾರು 60 ಲಕ್ಷ ನಗದು . ಒಂದು ಕೆ.ಜಿ ಬೆಳ್ಳಿ, 200ಗ್ರಾಂ ಚಿನ್ನಭರಣ ಹುಂಡಿಯಲ್ಲಿ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.