ಹೈದರಾಬಾದ್ : ಸಂಧ್ಯಾ ಥಿಯೇಟರ್‌ನಲ್ಲಿ ನೂಕುನುಗ್ಗಲು ಉಂಟಾಗಿ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಇದೀಗ ಈ ಪ್ರಕರಣದ ಸಂತ್ರಸ್ತರಾದ ಮಹಿಳೆಯ ಮಗ ಶ್ರೀತೇಜ್ ಮತ್ತು ಕುಟುಂಬಕ್ಕೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ 1 ಕೋಟಿ ಪರಿಹಾರ ಘೋಷಣೆ ಮಾಡಿದ್ದು. ಒಟ್ಟಾರೆಯಾಗಿ ಮೃತರ ಕುಟುಂಬಕ್ಕೆ ಒಟ್ಟು 2 ಕೋಟಿ ಪರಿಹಾರ ದೊರೆತಿದಂತಾಗಿದೆ.
ಇದನ್ನೂ ಓದಿ : ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನೋತ್ಸವ ಹಿನ್ನಲೆ : ಶಾಲೆ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಣೆ !
ಡಿಸೆಂಬರ್ 4ರಂದು ಹೈದರಾಬಾದ್ನಲ್ಲಿನ ಸಂದ್ಯಾ ಟಾಕೀಸ್ನಲ್ಲಿ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು ಮತ್ತು ಆಕೆಯ ಮಗ ಶ್ರೀತೇಜ್ ಗಂಭೀರವಾಗಿ ಗಾಯಗೊಂಡಿದ್ದರು. ಮೃತರ ಕುಟುಂಬಕ್ಕೆ ನಟ ಅಲ್ಲು ಅರ್ಜುನ್ ಪರಿಹಾರ ಘೋಷಿಸಿದ್ದರು. ನಂತರ ಪುಷ್ಪಾ ಸಿನಿಮಾದ ನಿರ್ದೇಶಕ ಸುಕುಮಾರನ್ 50ಲಕ್ಷ ಮತ್ತು ಮೈತ್ರೀ ಮೂವಿಸ್ 50ಲಕ್ಷ ಪರಿಹಾರ ಘೊಷಣೆ ಮಾಡಿದೆ. ಇದೀಗ ಮತ್ತೆ 1 ಕೋಟಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.