ವಿಜಯಪುರ : ಇಂದು (ಡಿ.25) ಭಾರತೀಯ ರಾಜಕೀಯದ ಅಜಾತಶತ್ರು ಎಂದೆ ಪ್ರಸಿದ್ದರಾಗಿರುವ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನಾಚರಣೆಯ ಪ್ರಯುಕ್ತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮದೊಂದಿಗೆ ಮಾತನಾಡಿದರು.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್ ‘ ವಾಜಪೇಯಿ ಅವರು ಅಜಾತ ಶತೃವಾಗಿದ್ದರು. ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಅವರು , ಭಾರತದ ಉನ್ನತಿಗಾಗಿ ಇಡೀ ಜೀವನವನ್ನು ಸವೆಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಮಲದ ಗುಂಡಿ ಸ್ವಚ್ಚಗೊಳಿಸುತ್ತಿದ್ಧ ಕಾರ್ಮಿಕ ಉಸಿರುಗಟ್ಟಿ ಸಾವು !
ಮುಂದುವರಿದು ಮಾತನಾಡಿದ ಯತ್ನಾಳ್ ‘ ವಾಜಪೇಯಿ ಅವರು ಭಾರತದ ಪ್ರಧಾನಿಯಾಗಿ ಅಧ್ಬುತ ಆಡಳಿತ ನೀಡಿದರು, ಅವರ ನಂತರ ಮೋದಿ ಬಂದಿದ್ದಾರೆ, ಮೋದಿ ನಂತರ ಯೋಗಿ ಬರುತ್ತಾರೆ. ಕೇಂದ್ರ ಬಿಜೆಪಿಯಲ್ಲಿ ನಾಯಕತ್ವಕ್ಕೆ ಕೊರತೆ ಇಲ್ಲ, ಆದರೆ ಕಾಂಗ್ರೆಸ್ನಲ್ಲಿ ನಾಯಕತ್ವವೇ ಸತ್ತು ಹೋಗಿದೆ. ಅದೇ ರೀತಿ ರಾಜ್ಯ ಬಿಜೆಪಿಯಲ್ಲಿಯೂ ಉತ್ತಮ ನಾಯಕತ್ವ ಬರಲಿದೆ ಎಂದು ಪರೋಕ್ಷವಾಗಿ ರಾಜ್ಯ ಬಿಜೆಪಿ ನಾಯಕತ್ವ ಸರಿಯಿಲ್ಲ ಎಂದು ಹೇಳಿದರು.
ವಕ್ಷ್ ಕುರಿತು ಮಾತನಾಡಿದ ಯತ್ನಾಳ್ ‘ ವಕ್ಷ್ ಬಗ್ಗೆ ಹೋರಾಟ ನಡೆಸುತ್ತೇವೆ. ನಾಳೆ ಬೆಂಗಳೂರಲ್ಲಿ ಸೇರಿ ವಕ್ಷ್ ಹೋರಾಟದ ಬಗ್ಗೆ ಕಾರ್ಯ ಯೋಜನೆ ತಯಾರು ಮಾಡುತ್ತೇವೆ ಎಂದು ಹೇಳಿದರು.