Monday, December 23, 2024

ಕಾಟಾಚಾರಕ್ಕೆ ಬೆಳಗಾವಿ ಅಧಿವೇಶನ ನಡೆಸಲಾಗಿದೆ : ಬಸವರಾಜ್​ ಬೊಮ್ಮಾಯಿ

ಹುಬ್ಬಳ್ಳಿ : ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡದೆ ಕಾಟಾಚಾರಕ್ಕೆ ಬೆಳಗಾವಿ ಅಧಿವೇಶನ ನಡೆಸಿದ್ದಾರೆ ಎಂದು ಸಂಸದ ಬಸವರಾಜ್​ ಬೊಮ್ಮಾಯಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ‌ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು. ಸರ್ಕಾರ
ಉತ್ತರ ಕರ್ನಾಟಕದ ಅಭಿವೃದ್ಧಿ ಇಲ್ಲದೆ, ಬೆಳಗಾವಿ ಅಧಿವೇಶನ ನಡೆಸಿದ್ದಾರೆ. ಕಾಟಾಚಾರಕ್ಕೆ ಅಧಿವೇಶನ ನಡೆಸಿದಂತಾಗಿದೆ. ಅಧಿವೇಶನ ಪಂಚಮ ಸಾಲಿಗಳ ಲಾಠಿ ಪ್ರಹಾರದಿಂದ ಆರಂಭವಾಗಿದ್ದು. ಸಿ,ಟಿ ರವಿಯವರ ಮಾನಸಿಕ ಹಿಂಸೆಯಿಂದ ಮುಗಿದಿದೆ.

ರಾಜ್ಯದಲ್ಲಿ ಪೊಲೀಸ್​​ ರಾಜ್ಯ ಇದೆ ಎಂಬುದಕ್ಕೆ ಈ ಎರಡು ಘಟನೆಗಳು ಸಾಕ್ಷಿ. ಹಿರಿಯ ಅಧಿಕಾರಿಗಳು ಕೂಡ ಲಾಠಿ ಹಿಡಿಸುಕೊಂಡು ಕಾನ್ಸ್​ಟೇಬಲ್​ಗಳ ರೀತಿ ವರ್ತಿಸಿದ್ದಾರೆ. ಅವರ ಮೇಲೆ ಮೊದಲು ತನಿಖೆ ನಡೆಸಬೇಕು. ಕರ್ನಾಟಕ ಪೊಲೀಸರಿಗೆ ಒಳ್ಳೆಯ ಹೆಸರು ಇದೆ. ಆದರೆ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಈ ರೀತಿ ಮಾಡುತ್ತಿದೆ ಎಂದು ಪೊಲೀಸ್​ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಅರೆಸ್ಟ್​​ ವಾರೆಂಟ್ ​ಜಾರಿಗೆ ಸ್ಪಷ್ಟನೆ ನೀಡಿದ ರಾಬಿನ್​ ಉತ್ತಪ್ಪ!

ಉತ್ತರ ಕರ್ನಾಟಕವನ್ನು ಕಡೆಗಣಿಸಿದ್ದಾರೆ !

ಮುಂದುವರಿದು ಮಾತನಾಡಿದ ಬೊಮ್ಮಾಯಿ ‘ ಉತ್ತರ ಕರ್ನಾಟಕದ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಿಲ್ಲ.
ನಮ್ಮ ಪಕ್ಷದ ನಾಯಕರು ಮಾಡಿದ ಪ್ರಶ್ನೆಗೆ ರಾಜ್ಯ ಸರ್ಕಾರದ ಮಂತ್ರಿಗಳು ಉತ್ತರ ಸಹ ನೀಡಿಲ್ಲ. ಇದು ನಾಚಿಕೆಯ ಸಂಗತಿ, ಈ ಸರಕಾರ ನಕ್ಷೆಯಲ್ಲಿ ಉತ್ತರ ಕರ್ನಾಟಕವೇ ಇಲ್ಲ ಎಂಬ ಅನುಮಾನ ಮೂಡಿದೆ.
ಉತ್ತರ ಕರ್ನಾಟಕ ಜನರ ಕಣ್ಣಿಗೆ ಮಣ್ಣುಹಾಕುವ ಕಾರ್ಯ ಪದೇ ಪದೆ ಈ ಸರ್ಕಾರದಲ್ಲಿ ನಡೆಯುತ್ತಿದೆ.

ಹುಡುಗಾಟದ ರೀತಿಯಲ್ಲಿ ಅಧಿವೇಶನ ನಡೆದಿದೆ, ನಮ್ಮ ಪಕ್ಷ ನಾಯಕರು ಸಮರ್ಥವಾಗಿ ಸದನವನ್ನು  ನಿಭಾಯಿಸಿದ್ದಾರೆ ಆದರೆ ಸರ್ಕಾರ ಸ್ಪಂದನೆ ಮಾಡಿಲ್ಲ. ರಾಜ್ಯ ಸರ್ಕಾರದ ಹಣಕಾಸಿನ ಸ್ಥಿತಿ ಬಹಳಷ್ಟು ಗಂಭೀರವಾಗಿದೆ. ಪಶ್ಚಿಮಘಟದ ನೀರಿಗೂ ಟ್ಯಾಕ್ಸ್ ಹಾಕುವ ಚಿಂತನೆ ನಡೆಸಿದ್ದಾರೆ. ಈ ಸರ್ಕಾರ ದಿವಾಳಿಯಾಗಿದೆ
ಇವರು ನಾಳೆ ಗಾಳಿಗೂ ಟ್ಯಾಕ್ಸ್ ಹಾಕುತ್ತಾರೆ, ಹಿಂದಿನ ಸರ್ಕಾರದ ಕಾರ್ಯಕ್ರಮಗಳ ಉದ್ಘಾಟನೆ ಮಾಡಿ ಸಿಎಂ ಶೂರತ್ವ ತೋರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES