Thursday, December 19, 2024

ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾ*ವು !

ಗದಗ : ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವಿಗೀಡಾಗಿರುವ ಘಟನೆ ಗದಗ ನಗರದ ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದ ಬಳಿ ನಡೆದಿದ್ದು. ಅಪಘಾತ ದೃಷ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಮಾಹಿತಿ ದೊರೆತಿದೆ.

ಇದನ್ನೂ  ಓದಿ : ಕಾರು-ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ : ಭೀಕರ ಅಪಘಾತದಲ್ಲಿ ಐವರು ಸಾ*ವು !

ಸ್ಕೂಟಿ ಮೇಲೆ ಚಲಿಸುತ್ತಿರುವಾಗ ಎದುರಿನಿಂದ ನೀರಿನ ಟ್ಯಾಂಕ್​ ಬಂದಿದ್ದು. ನೀರಿನ ಟ್ಯಾಂಕ್​ ಬಂದ ಕಾರಣದಿಂದ ಸವಾರ ಸ್ಕೂಟಿಯನ್ನು ನಿಲ್ಲಿಸಿದ್ದಾನೆ. ಈ ವೇಳೆ ಮಗು ಆಯತಪ್ಪಿ ಕೆಳಗೆ ಬಿದ್ದಿದ್ದು. ನೀರಿನ ಟ್ಯಾಂಕರ್​ನ ಹಿಂದಿನ ಚಕ್ರ ಹರಿದು ಮಗು ಸ್ಥಳದಲ್ಲೆ ಸಾವನ್ನಪ್ಪಿದೆ.

ಅಪಘಾತದ ಭೀಕರತೆಗೆ ಮಗುವಿನ ಮಿದುಳು ಛಿದ್ರವಾಗಿದ್ದು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಗದಗ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES