ದಾವಣಗೆರೆ : ಹೊನ್ನಾಳಿಯಲ್ಲಿ ಮಾತನಾಡಿದ ವಿಜಯೇಂದ್ರ ‘ಚಳಿಗಾಲದ ಅಧಿವೇಶದಲ್ಲಿ ಕಾಂಗ್ರೇಸ್ ಸರ್ಕಾರದ ಹಗರಣಗಳನ್ನು ಹೊರಗೆಳೆಯುವ ಕೆಲಸ ಮಾಡುತ್ತೇವೆ. ಅಬಿವೃದ್ದಿಗಾಗಿ ಸರ್ಕಾರದ ಕಿವಿ ಹಿಂಡುತ್ತೇವೆ. ಅಬಿವೃದ್ದಿ ಇಲ್ಲದೆ ಜನರು ತತ್ತರಿಸುವಂತಾಗಿದೆ. ಅವರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ನಾಳೆಯಿಂದ ಬೆಳಗಾವಿಯ ಸುವರ್ಣ ಸೌದದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು. ಅಧಿವೇಶನಕ್ಕೂ ಆಡಳಿತ ಪಕ್ಷದ ವಿರುದ್ದ ವಿರೋಧ ಪಕ್ಷಗಳು ಕಿಡಿಕಾರುತ್ತಿವೆ. ಇದರ ಕುರಿತಾಗಿ ಮಾತನಾಡಿದ ಬಿವೈ ವಿಜಯೇಂದ್ರ ‘ ನಾವು ಜನರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತೇವೆ. ಅಭಿವೃದ್ದಿಗಾಗಿ ಕೆಲಸ ಮಾಡಲು ಒತ್ತಾಯಿಸುತ್ತೇವೆ. ಇದರ ನಡುವೆ ವಕ್ಫ್ ವಿರುದ್ದದ ಹೋರಾಟವನ್ನು ಮಾಡುತ್ತೇವೆ. ಅಧಿವೇಶನದ ನಂತರ ಮತ್ತೆ ಪ್ರವಾಸ ಮಾಡಿ ಮತ್ತಷ್ಟು ಮಾಹಿತಿ ಕಲೆ ಹಾಕುತ್ತೇವೆ. ನಂತರ ಪಾರ್ಲಿಮೆಂಟ್ ಬಳಿ ಹೋಗಿ ಧರಣಿ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಮೊಬೈಲ್ ರಿಪೇರಿಗೆ ಹಣ ನೀಡದಕ್ಕೆ ಮನನೊಂದ ಬಾಲಕ ಆತ್ಮಹ*ತ್ಯೆ !
ಗ್ಯಾರಂಟಿಗೆ ಸರ್ಕಾರದ ಬಳಿ ಹಣ ಇಲ್ಲ !
ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ ‘ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಹೊಂದಿಸಲಾಗದೆ ಪರದಾಡುತ್ತಿದೆ. ಉಪಚುನಾವಣೆಗೆ ಮೂರು ದಿನ ಇದ್ದಾಗ ಹಣವನ್ನು ಬಿಡುಗಡೆ ಮಾಡಿ ಬಡವರಿಗೆ ಅವಮಾನ ಮಾಡುದ್ದಾರೆ. ಗ್ಯಾರಂಟಿಗಳನ್ನು ಯಾರು ಕೇಳಿರಲಿಲ್ಲ. ಅಭಿವೃದ್ದಿಗಾಗಿ ಹಣ ಇಲ್ಲದೇನೆ ಕಾಂಗ್ರೇಸ್ ಶಾಸಕರೆ ತಮ್ಮ ಕ್ಷೇತ್ರಗಳಿಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರ ಕಾಲದಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ ಎಂದು ಹೇಳಿದರು.
ಗರ್ಭಿಣಿರ ಸರಣಿ ಸಾವಿನ ಬಗ್ಗೆ ಬಿ.ವೈ.ವಿ ಮಾತು !
ಬಳ್ಳಾರಿಯ ವಿಮ್ಸ್ನಲ್ಲಿ ನಡೆದಿರುವ ಬಾಣಂತಿಯರ ಸರಣಿ ಸಾವಿನ ಕುರಿತು ಮಾತನಾಡಿದ ವಿಜಯೇಂದ್ರ ‘ರಾಜ್ಯದಲ್ಲಿ ಮುನ್ನೂರಕ್ಕೂ ಹೆಚ್ಚು ಗರ್ಭಿಣಿಯರ ಸಾವಾಗಿದೆ. ಇದರ ವಿರುದ್ದವಾಗಿ ನಮ್ಮ ಪಕ್ಷದ ಮಹಿಳಾ ಮೋರ್ಚದ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ‘ಬಾಡು ನಮ್ ಗಾಡು’ : 87 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟಕ್ಕೆ ಬೇಡಿಕೆ !
ಯತ್ನಾಳ್ಗೆ ಹೋರಾಟ ಮಾಡಬೇಡಿ ಎಂದು ಹೇಳಲ್ಲ !
ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಒಳಜಗಳ ಮತ್ತು ಯತ್ನಾಳ್ ಕುರಿತು ಮಾತನಾಡಿದ ವಿಜಯೇಂದ್ರ ‘ ಯತ್ನಾಳ್ರಿಗೆ ಲಾಂಗ್ ಟರ್ಮ್ ಸ್ಟ್ರಾಟರ್ಜಿ ಇದೆ ಎಂದು ಲೇವಡಿ ಮಾಡಿದರು. ನಾವು ಹೋರಾಟ ಮಾಡಬೇಡಿ ಎಂದು ಯಾರಿಗೂ ಹೇಳಿಲ್ಲ. ಎಲ್ಲವನ್ನು ರಾಷ್ಟ್ರೀಯ ನಾಯಕರು ಗಮನಿಸುತ್ತಿದ್ದಾರೆ. ಯತ್ನಾಳ್ ಅವರ ಅನುಮಾನಗಳಿಗೆ , ಆಸೆಗಳಿಗೆ ಕಾಲವೇ ಉತ್ತರ ಕೊಡುತ್ತೆ , ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದರು .
ಮುಂದಿನ ಬಿಜೆಪಿಯ ಮುಖ್ಯಮಂತ್ರಿ ಯಾರಾಗೂತ್ತಾರೆ ಎಂಬ ವಿಚಾರಕ್ಕೆ ಮಾತನಾಡಿದ ವಿಜಯೇಂದ್ರ, ರಾಜ್ಯಾಧ್ಯಕ್ಷ ಸ್ಥಾನ ಪಡೆದಿರೋದು ಸಿಎಂ ಆಗೋದಕ್ಕೆ ಅಲ್ಲ, ಈ ಸ್ಥಾನವನ್ನು ಜವಬ್ದಾರಿಯಿಂದ ನಿಭಾಯಿಸುತ್ತೇನೆ ಎಂದು ಹೇಳಿದರು.