ರಾಮನಗರ: ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಹಳ್ಳಿಕಾರ್ ತಳಿಯ ಹಸುವಿನ ಕಾಲನ್ನೆ ಕತ್ತರಿಸಿದ ಅಮಾನವೀಯ ಘಟನೆ ರಾಮನಗರದ ಹೊಸಕಬ್ಬಾಳು ಗ್ರಾಮದಲ್ಲಿ ನಡೆದಿದ್ದು. ಗ್ರಾಮಸ್ಥರು ಪೋಲಿಸರಿಗೆ ದೂರು ನೀಡಿ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಮನಗರದ, ಕನಕಪುರ ತಾಲ್ಲೂಕಿನ, ಹೊಸಹೆಬ್ಬಾಳು ಗ್ರಾಮದಲ್ಲಿ ಘಟನೆ ನಡೆದಿದ್ದು. ರೈತ ತಿಮ್ಮಯ್ಯ ಎಂಬುವವರಿಗೆ ಸೇರಿದ ಕರುವನ್ನು ನೆನ್ನೆ ಸಂಜೆ ತಮ್ಮ ಜಮೀನಿನಲ್ಲಿ ಮೇಯಲು ಬಿಟ್ಟಿದ್ದರು. ಆದರೆ ಈ ಸಮಯದಲ್ಲಿ ಅಲ್ಲಿಗೆ ಬಂದಿರುವ ಕಿಡಿಗೇಡಿಗಳು ಬಲವಾದ ಆಯುಧದಿಂದ ಕರುವಿನ ಮುಂಭಾಗದ ಕಾಲುಗಳನ್ನು ತುಂಡರಿಸಿ ಎಸ್ಕೇಪ್ ಆಗಿದ್ದಾರೆ.
ಜಮೀನಿಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು. ನೋವಿನಿಂದ ಒದ್ದಾಡುತ್ತಿರುವುದನ್ನು ನೋಡಿದ ಕೂಡಲೇ ಪಶುವೈದ್ಯಾಧಿಕಾರಿಗಳನ್ನು ಕರೆಸಿ ಚಿಕಿತ್ಸೆ ನೀಡಿಸಿದ್ದು. ಕರು ಇನ್ನು ಮುಂದೆ ಓಡಾಡಲು ಸಾಧ್ಯವಾಗದ ಸ್ಥಿತಿ ತಲುಪಿದೆ ಎಂದು ಮಾಹಿತಿ ದೊರೆತಿದೆ. ಈ ಸಂಭಂಧ ರೈತ ತಿಮ್ಮಯ್ಯ ಸಾತನೂರು ಪೋಲಿಸರಿಗೆ ದೂರು ನೀಡಿದ್ದು. ಕಿಡಿಗೇಡಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.