ಮುಂಬೈ : ಮಹರಾಷ್ಟ್ರದ ಚುನಾವಣೆ ಮುಗಿದಿದ್ದು. ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರ ಹಿಡಿದಿದೆ. ಆದರೆ ಮೂರು ಪಕ್ಷಗಳ ಪೈಕಿ ಯಾರು ಮಹರಾಷ್ಟ್ರದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಮಾತ್ರ ಇಲ್ಲಿಯವರೆಗು ಉತ್ತರ ದೊರೆತಿರಲಿಲ್ಲ. ಆದರೆ ಈ ಪ್ರಶ್ನೆಗೆ ಇಂದು ಉತ್ತರ ದೊರೆತಿದ್ದು. ಬಿಜೆಪಿಯ ದೇವೇಂದ್ರ ಫಡ್ನವೀಸ್ ಮಹರಾಷ್ಟ್ರದ ಮುಖ್ಯಮಂತ್ರಿಯಾಗುವುದು ಬಹುತೇಕ ಪಕ್ಕಾ ಆಗಿದೆ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರ ಹಂಗಾಮಿ ಸಿಎಂ ಏಕನಾಥ್ ಶಿಂಧೆ ಸುದ್ದಿಗೋಷ್ಟಿ ನಡೆಸಿದ್ದು. ಮಹಾರಾಷ್ಟ್ರದ ಜನ ನಮಗೆ ಅತಿದೊಡ್ಡ ವಿಜಯ ನೀಡಿದ್ದಾರೆ. ಮಹಾಯುತಿ ಕಳೆದ ಎರಡುವರೆ ವರ್ಷದಲ್ಲಿ ತುಂಬಾ ಅಭಿವೃದ್ದಿ ಕೆಲಸ ಮಾಡಿದೆ ನಮ್ಮ ಸರ್ಕಾರ ಸಮಾಜಕ್ಕೆ ಸಹಕಾರಿಯಾಗೊ ಯೋಜನೆ ನೀಡಿದ್ದೇವೆ. ನಾನೊಬ್ಬನೇ 100-120 ರ್ಯಾಲಿ ಮಾಡಿದ್ದೇನೆ, ಅದೆಷ್ಟು ಸಾವಿರ ಕಿಲೋ ಮೀಟರ್ ರಾಜ್ಯಸುತ್ತಿದ್ದೇನೋ ಲೆಕ್ಕವಿಲ್ಲ ಓರ್ವ ಸಾಮಾನ್ಯ ಮನುಷ್ಯನ ರೀತಿಯಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಶಿಂಧೆ ‘ ಮಹಾಯುತಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡ್ರು ನನಗೆ ಬೇಸರವಿಲ್ಲ, ನಾನು ಮಹಾಯುತಿಯ ಭಾಗವಾಗಿಯೆ ಇರುತ್ತೆನೆ. ಮಹಾರಾಷ್ಟ್ರ ಜನರು ಮಹಾಯುತಿಗೆ ಬಹುಮತ ನೀಡಿದ್ದಾರೆ. ಆ ನಂಬಿಕೆಯನ್ನ ನಾವು ಉಳಿಸಿಕೊಳ್ಳುತ್ತೇವೆ. ಆ ಮೂಲಕ ರಾಜ್ಯವನ್ನ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ. ಮುಂಬೈಯನ್ನು ಏಷ್ಯಾದಲ್ಲಿ ನಂಬರ್ ಒನ್ ಮಾಡಲು ಕೆಲಸ ನಾನು ಮಾಡುತ್ತೇವೆ ಎಂದು ಹೇಳಿದರು.
ಶ್ರೀ ಮಂತರಿಗೆ ಜನಸಾಮಾನ್ಯರ ಸಮಸ್ಯೆ ತಿಳಿಯುವುದಿಲ್ಲ. ಒಬ್ಬ ಕಾಮನ್ ಮ್ಯಾನ್ಗೆ ಮಾತ್ರ ಕಾಮಾನ್ ಮ್ಯಾನ್ ಸಮಸ್ಯೆ ತಿಳಿಯುತ್ತದೆ. ಜನಸಾಮಾನ್ಯರು ಕುಟುಂಬದಲ್ಲಿ ಅನುಭವಿಸುವ ತೊಂದರೆ ಕಾಮನ್ಮ್ಯಾನ್ಗೆ ಗೊತ್ತಾಗುತ್ತದೆ. ನಮ್ಮ ಯೋಜನೆಗಳು ಜನರ ಮನೆಗೆ ತಲುಪಿವೆ ಇದೆ ನಮಗೆ ಖುಷಿ. ನಾನು ಯಾವತ್ತು ಸಿಎಂ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ.
ಮಹರಾಷ್ಟ್ರದಲ್ಲಿ ನಮಗೆ ಭಾರೀ ಜಯ ದೊರೆತಿದೆ. ನಾವು ಹೋರಾಟದಿಂದಲೇ ಹುಟ್ಟಿಬಂದ ನಾವು ಎಂದು ಪ್ರಚಾರಕ್ಕಾಗಿ ಸರ್ಕಾರ ನಡೆಸಿಲ್ಲ. ಆದ್ದರಿಂದ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ದಿಗೆ ಸಾಧ್ಯವಾಯಿತು. ನಿನ್ನೆ ಪ್ರಧಾನಿಗೆ ಕರೆ ಮಾಡಿದ್ದೆ, ರಾಜ್ಯಕ್ಕಾಗಿ ಮಹಾಯುತಿಗಾಗಿ ನೀವು ಯಾವುದೇ ನಿರ್ಧಾರ ಕೈಗೊಂಡ್ರು ನಾನು ಬದ್ದ ಎಂದು ಹೇಳಿದ್ದೇನೆ. ಬಿಜೆಪಿ ಯಾವುದೇ ನಿರ್ಧಾರ ತೆಗೆದುಕೊಂಡ್ರು ನಾನು ಅದಕ್ಕೆ ಬದ್ದನಾಗಿರುತ್ತೆನೆ
ಯಾವುದೇ ಕಾರಣಕ್ಕೂ ಯಾವುದೇ ಬೇಸರವು ಇಲ್ಲ. ಸರ್ಕಾರದಲ್ಲಿ ಯಾವುದೇ ತೊಂದರೆಯೂ ಆಗೋದಿಲ್ಲ
ನಾನು ಅಮಿತ್ ಶಾ ಮತ್ತು ಮೋದಿ ಜೊತೆ ಈ ಬಗ್ಗೆ ಮಾತನಾಡಿದ್ದೇನೆ ಎಂದು ಸಿಎಂ ಸ್ಥಾನ ತೊರೆಯುವುದಾಗಿ ತಿಳಿಸಿದರು.
ಇದರಿಂದ ಮಹರಾಷ್ಟ್ರದ ಸಿಎಂ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು ಬಿಜೆಪಿ ಪಕ್ಷದ ದೇವೇಂದ್ರ ಫಡ್ನವೀಸ್ ಸಿಎಂ ಆಗುವುದು ಬಹುತೇಕ ಪಕ್ಕಾ ಆಗಿದೆ.