Wednesday, November 20, 2024

‘ಹಿಂದೂಗಳ ಭೂಮಿಗೆ ಕಂಟಕ ಬಂದಿದೆ ಎಂದು ವಾಗ್ದಾಳಿ ನಡೆಸಿದ ಪ್ರತಾಪ್ ​ಸಿಂಹ

ಮೈಸೂರು: ವಕ್ಫ್​​ ಭೂಮಿ ವಿಚಾರವಾಗಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್​​ ಸಿಂಹ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನ ಆಡಳಿತದಲ್ಲಿ ರೈತರ ಜಮೀನುಗಳು ರಾತ್ರೋರಾತ್ರಿ  ವಕ್ಫ್​​ ಆಗಿ ಬದಲಾಗುತ್ತಿವೆ ಎಂದು ಹೇಳಿದ್ದಾರೆ.

ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್​ಸಿಂಹ ‘ಸಿದ್ದರಾಮಯ್ಯನ ಆಡಳಿತದಲ್ಲಿ ಬಹು ಸಂಖ್ಯಾತ ಹಿಂದೂಗಳಿಗೆ ಆತಂಕ ಇದ್ದೇ ಇರುತ್ತದೆ. ಇವರ ಆಡಳಿತದಲ್ಲಿರೈತರು ಮತ್ತು ಹಿಂದೂಗಳ ಭೂಮಿಗೆ ಕಂಟಕ ಬಂದಿದೆ. 1965 ರಲ್ಲಿ ವಕ್ಫ್ ಬೋರ್ಡ್ ಗೆಜೆಟ್ ನೋಟಿಫಿಕೇಶನ್​ ಹೊರಡಿಸಿದ್ದಾರೆ. ಈ ಗೆಜೆಟ್ ನೋಟಿಫಿಕೇಶನ್​ ಹೊರಡಿಸಲು ವಕ್ಫ್ ಬೋರ್ಡ್ ಗೆ ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು.

ಮುಂದುವರಿದು ಮಾತನಾಡಿದ ಸಂಸದ ಪ್ರತಾಪ್​ಸಿಂಹ ‘ಮೈಸೂರು – ಚಾಮರಾಜನಗರ ಎರಡು ಜಿಲ್ಲೆ ಸೇರಿ ಒಟ್ಟು 600 ಏಕರೆ ಜಮೀನು ವಕ್ಫ್ ಬೋರ್ಡದು ಎಂದು ನೋಟಿಫಿಕೇಶನ್​ ಮಾಡಿದ್ದಾರೆ. ಮತ್ತೆ 2016 ರಲ್ಲಿ ವಕ್ಫ್​ನಿಂದ ನೋಟಿಫಿಕೇಶನ್​​ ಹೊರಡಿಸುತ್ತದ್ದಾರೆ. ಜೊತೆಗೆ ಹುಣಸೂರಿನ ಗಣೇಶ ದೇವಸ್ಥಾನದ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಬರೆಸಿಕೊಂಡಿದ್ದಾರೆ ಎಂದು ಹೇಳಿದರು.

ಮುಸ್ಲಿಂರ ವಿರುದ್ಧ ಕೇಸ್ ವಾಪಸ್ಸು ತೆಗೆದುಕೊಂಡಿದ್ದಾರೆ

ರಾಜ್ಯ ಸರ್ಕಾರ ಇತ್ತಿಚೆಗೆ ಸಚಿವ ಸಂಪುಟ ಸಭೆಯಲ್ಲಿ ಕೆಲವರ ಮೇಲಿನ ಕೇಸ್​​ಗಳನ್ನು ವಾಪಸ್​ ತೆಗೆದುಕೊಂಡ ವಿಷಯವನ್ನು ಉಲ್ಲೇಖಿಸಿ ಮಾತನಾಡಿದ ಪ್ರತಾಪ್​​ ಸಿಂಹ ‘ ಸಿದ್ದರಾಮಯ್ಯರ ಸರ್ಕಾರ ಬಂದಾಗ ಬಹುಸಂಖ್ಯಾತರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗುತ್ತಿದೆ. ಪಿಎಫ್​ಐ ಮೇಲಿನ ಕೇಸಗಳನ್ನು ವಾಪಸ್ಸು ತೆಗೆದು ಹಾಕಿದ್ದಾರೆ. ಹಿಂದೂಗಳ ದುರ್ಮರಣಕ್ಕೆ ಕಾರಣವಾಗಿದ್ದ ಮುಸ್ಲಿಮರ ಕೇಸ್​​ಗಳನ್ನು ವಾಪಸ್​ ಪಡೆದಿದ್ದಾರೆ’ ಎಂದು ವಾಗ್ದಳಿ ನಡೆಸಿದರು.

RELATED ARTICLES

Related Articles

TRENDING ARTICLES