Monday, November 18, 2024

ಸರ್ಕಾರದ ಇಮೇಜ್ ಹೆಚ್ಚಿಸಲು ಮಹಿಳಾ ಮತದಾರರೇ ಕಾಂಗ್ರೆಸ್ ಟಾರ್ಗೆಟ್

ಬೆಂಗಳೂರು : ಹಗರಣಗಳ ಸರಮಾಲೆಯಲ್ಲಿ ಮುಳುಗಿರುವ ಕಾಂಗ್ರೆಸ್​ ಸರ್ಕಾರ ತನ್ನ ಇಮೇಜ್​ ಹೆಚ್ಚಿಸಿಕೊಳ್ಳಲು ಯೋಜನೆಯೊಂದನ್ನು ರೂಪಿಸಿದ್ದು. ಮಹಿಳಾ ಮತದಾರರ ಮೂಲಕ ತಮ್ಮ ಇಮೇಜ್​ ಹೆಚ್ಚಿಸಿಕೊಳ್ಳಲು ಪ್ಲಾನ್​ ರೂಪಿಸಿದೆ.

ಮುಡಾ , ವಾಲ್ಮೀಕಿ ಹಗರಣದ ಆರೋಪದ ವಿಚಾರವಾಗಿ ಜನರಲ್ಲಿ ಗೊಂದಲ ನಿರ್ಮಾಣವಾದ ಹಿನ್ನಲೆ  ಪ್ರತಿಪಕ್ಷಗಳ‌ ಆರೋಪಕ್ಕೆ ಸೂಕ್ತ ತಿರುಗೇಟು ನೀಡಲು ಸರ್ಕಾರ ಯೋಜನೆ ರೂಪಿಸಿದ್ದು. ಸರ್ಕಾರ ಇಮೇಜ್ ಹೆಚ್ಚಿಸಲು ಕಾಂಗ್ರೆಸ್​ ಮಾಸ್ಟರ್ ಪ್ಲಾನ್ ರೂಪಿಸಿದೆ.

ಡಿಸೆಂಬರ್ 2 ರಂದು ತುಮಕೂರಿನಲ್ಲಿ ಬೃಹತ್ ಗ್ಯಾರೆಂಟಿ ಸಮಾವೇಶ ಆಯೋಜನೆ ಮಾಡಿರುವ ಕಾಂಗ್ರೆಸ್ ಸರ್ಕಾರ. ಬೃಹತ್‌ ಗ್ಯಾರೆಂಟಿ ಯೋಜನೆಗಳ ಅಡಿಯಲ್ಲಿ ಮಹಿಳಾ ಸಮಾವೇಶ ಆಯೋಜಿಸಲು ಸರ್ಕಾರ ಮುಂದಾಗಿದೆ. ಸುಮಾರು 1 ಲಕ್ಷ ಮಹಿಳಾ ಮತದಾರರನ್ನು ಸೇರಿಸಿ ಸಮಾವೇಶ ಮಾಡಿ ರಾಜ್ಯ ಕಾಂಗ್ರೆಸ್​ ಸರ್ಕಾರ ಮಹಿಳೆಯರ ಸ್ವಾವಲಂಬಿ ಬದುಕಿಗೆ ಪೂರಕವಾದ ಯೋಜನೆಯನ್ನು ರೂಪಿಸುತ್ತಿದೆ ಎಂದು ಮನವರಿಕೆ ಮಾಡಿಕೊಡಲು ಮುಂದಾಗಿದೆ. ಈ ಮೂಲಕ ವಿರೋಧ ಪಕ್ಷಗಳ ಹಗರಣದ ಆರೋಪಕ್ಕೆ ತಿರುಗೇಟು ನೀಡಲು ಮುಂದಾಗಿದೆ.

 

RELATED ARTICLES

Related Articles

TRENDING ARTICLES