Thursday, November 7, 2024

By election 2024 : ಕಾಂಗ್ರೆಸ್​​ ಆಂತರಿಕ ಸರ್ವೇ ನೋಡಿ ಬೆಚ್ಚಿಬಿದ್ದ ಸಿಎಂ- ಡಿಸಿಎಂ

ರಾಜ್ಯದಲ್ಲಿ ಉಪಚುನಾವಣ ಕಣ ರಂಗೇರಿದ್ದು. ಚುನಾವಣೇಗು ಮುನ್ನ ಕಾಂಗ್ರೆಸ್​​ ಪಕ್ಷದ ಆಂತರಿಕ ಸಮೀಕ್ಷೆ ವರದಿ ಮತ್ತು ಗುಪ್ತಚರ ಸಮೀಕ್ಷೆ ವರದಿ ಕಾಂಗ್ರೆಸ್​ ಪಕ್ಷದ ನಾಯಕರ ಕೈ ಸೇರಿದ್ದು. ವರದಿಯನ್ನು ನೋಡಿದ ಸಿಎಂ ಮತ್ತು ಡಿಸಿಎಂ ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ.
ಹಾಗೂ ಗುಪ್ತಚರ ಕೊಟ್ಟ ರಿಪೋರ್ಟ್

ಚುನಾವಣಾ ಪೂರ್ವ ಸಮೀಕ್ಷೆಯ ಆಂತರಿಕ ವರದಿಯಲ್ಲಿ ಕಾಂಗ್ರೆಸ್​​ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು. ಒಂದು ಕ್ಷೇತ್ರದಲ್ಲಿ ಸೋಲುತ್ತದೆ ಎಂದು ವರದಿಯನ್ನು ನೀಡಲಾಗಿದೆ. ಇ ಬಾರಿಯು ಶಿಗ್ಗಾಂವ್​​ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ರಾಜ್ಯ ಕಾಂಗ್ರೆಸ್​​ ನಾಯಕರು ಸೋತಿದ್ದು. ಕಾಂಗ್ರೆಸ್​​ ಅಭ್ಯರ್ಥಿ ಸೋಲಲಿದ್ದಾರೆ ಎಂದು ಮಾಹಿತಿ ದೊರೆತಿದೆ.

ಎರಡು ಕ್ಷೇತ್ರದಲ್ಲಿ ಕೂದಲೆಳೆ ಅಂತರದಲ್ಲಿ ಗೆಲುವು ಸಾಧಿಸಲಿದೆ ಕಾಂಗ್ರೆಸ್​​ 

ಮೂರು ಕ್ಷೇತ್ರದಲ್ಲಿ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್​ ವಶಪಡಿಸಿಕೊಳ್ಳಲಿದೆ ಎಂದು ಮಾಹಿತಿ ದೊರೆತಿದ್ದು. ಚನ್ನಪಟ್ಟಣದಲ್ಲಿ ಈ ಬಾರಿ ಸಿಪಿ ಯೋಗೇಶ್ವರ್​ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ವರದಿ ನೀಡಿದ್ದು. ಜಿದ್ದಾಜಿದ್ದಿನ ರಣಾಂಗಣದಲ್ಲಿ ನಿಖಿಲ್​ ವಿರುದ್ದ ಸಿಪಿವೈ ಸುಮಾರು 6 ರಿಂದ 7 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಮಾಹಿತಿ ದೊರೆತಿದೆ.

ಇದೇ ರೀತಿ ಸಂಡೂರಿನಲ್ಲಿಯು ಕಾಂಗ್ರೆಸ್​ ಗೆಲ್ಲುವ ಸಾಧ್ಯತೆ ಇದೆ ಎಂದು ಮಾಹಿತಿ ದೊರೆತಿದ್ದು. ಈ ಹಿಂದೆ ತುಕಾರಂ ಅವರಿಗೆ ಇದ್ದ ಬೆಂಬಲ ಈ ಬಾರಿ ಅವರ ಪತ್ನಿಗೆ ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿಲ್ಲ ಎನ್ನಲಾಗಿದೆ. ಆದರೂ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ದ ಕಾಂಗ್ರೆಸ್​​ ಅಭ್ಯರ್ಥಿ ಅನ್ನಪೂರ್ಣ ತುಕಾರಂ ಸುಮಾರು 2ರಿಂದ 3 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ವರದಿಯಾಗಿದೆ.

ವೈಯಕ್ತಿಕವಾಗಿ ಯಾವುದೇ ವರ್ಚಸ್ಸನ್ನು ಹೊಂದಿರದ ಅನ್ನಪೂರ್ಣ ತುಕಾರಂ ಮಾಜಿ ಶಾಸಕ ತುಕಾರಂ ಮತ್ತು ಸಂತೋಶ್​​ ಲಾಡ್​​ ಪ್ರಭಾವದಿಂದಲೇ ಗೆಲ್ಲಬೇಕು ಎಂಬ ವಾತವರಣ ಸೃಷ್ಟಿಯಾಗಿದೆ. ಇನ್ನಯ ಬಿಜೆಪಿ ಅಭ್ಯರ್ಥಿಗೆ ಜನಾರ್ಧನ್​ರೆಡ್ಡಿ ವಾಪಸಾತಿ ಹೆಚ್ಚು ಬಲ ನೀಡಿದ್ದರೆ ಮತ್ತೊಂದೆಡೆ ಜೆಡಿಎಸ್​​ ಮತಗಳು ಕೈಕೊಡಲಿದೆ ಎಂದು ವಿಶ್ಲೇಷಿಸಿದ್ದಾರೆ. ಇವೆಲ್ಲದರಿಂದಾಗಿ ಸಂಡೂರಿನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಅನ್ನಪೂರ್ಣ ತುಕಾರಂ ಗೆಲ್ಲಲಿದ್ದಾರೆ ಎಂದು ಮಾಹಿತಿ ದೊರೆತಿದೆ.

ಕಾಂಗ್ರೆಸ್​​ ಆಂತರಿಕ ಸಮೀಕ್ಷೆಯ ವರದಿಯು ಕೈಸೇರುತ್ತಿದ್ದಂತೆ ಸಿಎಂ, ಡಿಸಿಎಂ ಸೇರಿದಂತೆ ಕೆಪಿಸಿಸಿ ನಾಯಕರು ಅಲರ್ಟ್​ ಆಗಿದ್ದು. ಮೂರು ಕ್ಷೇತ್ರಗಳಲ್ಲಿ ಕಾಲಿಗ ಚಕ್ರ ಕಟ್ಟಿಕೊಂಡು ಒಡಾಡುತ್ತಿದ್ದಾರೆ. ಹೇಗಾದರು ಮಾಡಿ ಸಂಡೂರು ಮತ್ತು ಚನ್ನಪಟ್ಟಣ ಗೆಲ್ಲಲೆ ಬೇಕು ಎಂದು ಪಣ ತೊಟ್ಟಿರುವ ರಾಜ್ಯ ಕಾಂಗ್ರೆಸ್​ಗೆ ಉಪ ಚುನಾವಣೆ ಪ್ರತಿಷ್ಟೆಯ ಕಣವಾಗಿ ಬದಲಾಗಿದೆ.

RELATED ARTICLES

Related Articles

TRENDING ARTICLES